Two Headed Snake Viral Video: ಇತ್ತೀಚೆಗೆಯಷ್ಟೇ ಮಿಸೌರಿ ಸಂರಕ್ಷಣಾ ಇಲಾಖೆ (MDC)ಯು ಅಪರೂಪದಲ್ಲಿ ಅಪರೂಪದ ಎರಡು ತಲೆ ಹಾವನ್ನು ರಕ್ಷಣೆ ಮಾಡಿದೆ. ಈ ಹಾವನ್ನು ಟೈಗರ್ ಲಿಲ್ಲಿ ಟು ಹೆಡೆಡ್ ರ್ಯಾಟ್ ಸ್ನೇಕ್ ಎಂದು ಸಹ ಕರೆಯಲಾಗುತ್ತದೆ. ಅಂದಹಾಗೆ ಇದೀಗ ಅಮೆರಿಕದ ಮಿಸ್ಸೋರಿಯ ಕನ್ಸಾಸ್ ನಗರದಲ್ಲಿರುವ ಪ್ರಕೃತಿ ಕೇಂದ್ರದಲ್ಲಿ ಈ ಹಾವನ್ನು ಸಂರಕ್ಷಿಸಲಾಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ʼನಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗದ ಭಾರತದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?
ಟೈಗರ್ ಲಿಲ್ಲಿ ಹಾವನ್ನು ಭಾರತದಲ್ಲಿ ಕಾಣಸಿಗುವ ಕೇರೆ ಹಾವಿನ ಜಾತಿಗೆ ಸೇರಿದ್ದು ಎಂದು ಸಹ ಹೇಳಲಾಗುತ್ತದೆ. ಅಂದಹಾಗೆ ಇದೊಂದು ಹೆಣ್ಣು ಕೇರೆಹಾವು ಆಗಿದ್ದು, ಅಪಾಯಕಾರಿಯೇನಲ್ಲ. ಹೊಳೆಯುವ ಕಪ್ಪು ಚರ್ಮವನ್ನು ಹೊಂದಿರುವ ಈ ಹಾವು ನೋಡಲು ಬಹಳ ಆಕರ್ಷಣೀಯವಾಗಿದೆ.
ಈ ಟೈಗರ್-ಲಿಲ್ಲಿ ಹಾವಿಗೆ ಇದೀಗ ಏಳು ವರ್ಷ. ಮೂರು ಅಡಿ ಎತ್ತರವಿದ್ದು, ಈ ಹಾವು ಸುಮಾರು 30 ವರ್ಷಗಳವರೆಗೆ ಬದುಕುವುದಲ್ಲದೆ, ಐದು ಅಡಿಯಷ್ಟು ಉದ್ದ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ದೇಹ ಒಂದೆ ಇದ್ದು, ಎರಡು ತಲೆಗಳನ್ನು ಹೊಂದಿರುತ್ತದೆ. ಎಡಭಾಗದಲ್ಲಿರುವ ತಲೆ ಲಿಲ್ಲಿ ಮತ್ತು ಬಲಭಾಗದಲ್ಲಿರುವ ತಲೆಗೆ ಟೈಗರ್ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಯಾರೆಲ್ಲ ಈ ಸಲದ ಬಿಗ್ ಬಾಸ್ ಕಂಟೆಸ್ಟಂಟ್ ಗಳು? ಹೇಗಿದೆ ತಯಾರಿ? ಇಲ್ಲಿದೆ ಮಾಹಿತಿ…
ಎರಡೂ ತಲೆಗಳಿಗೂ ಒಂದೇ ಜೀರ್ಣಾಂಗ ವ್ಯವಸ್ಥೆ ಇದ್ದರೂ ಸಹ, ಎರಡಕ್ಕೂ ಪ್ರತ್ಯೇಕವಾಗಿ ಆಹಾರವನ್ನು ನೀಡಬೇಕಾಗುತ್ತದೆ. ಒಂದಕ್ಕೆ ಅತಿಯಾಗಿ ತಿನ್ನಿಸಿದರೆ, ಮತ್ತೊಂದಕ್ಕೆ ಸಿಕ್ಕಾಪಟ್ಟೆ ಕೋಪಬರುತ್ತದೆ. ಇದೇ ಕಾರಣದಿಂದ ಕೆಲವು ಸಂದರ್ಭಗಳಲ್ಲಿ, ಒಂದು ತಲೆಗೆ ಆಹಾರ ನೀಡುವಾಗ ಇನ್ನೊಂದು ತಲೆಯನ್ನು ಸಣ್ಣ ಕ್ಯಾಪ್ʼನಿಂದ ಮುಚ್ಚಲಾಗುತ್ತದೆಯಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.