ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಈ ಬಾರಿ ಚಿನ್ನದ ಆಮದು ದ್ವಿಗುಣಗೊಂಡಿದೆ. ಚಿನ್ನ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜುಲೈ 23 ರಂದು ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು.ಇದರ ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಯಿತು.
ಇದಾದ ಒಂದರಿಂದ ಎರಡು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 4,000 ರೂ.ಯಷ್ಟು ಇಳಿಕೆ ಕಂಡಿತು. ಆದರೆ ಈ ಬೆಲೆ ಕುಸಿತವು ಚಿನ್ನದ ಬೇಡಿಕೆಯನ್ನು ದಾಖಲೆ ಮಟ್ಟಕ್ಕೆ ಕೊಂಡೊಯ್ದಿದೆ.ಬೇಡಿಕೆ ಹೆಚ್ಗುತ್ತಿದ್ದ ಹಾಗೆಯೇ ಆಮದು ಸುಂಕ ಕಡಿತದ ಹೊರತಾಗಿಯೂ ಮಾರುಕಟ್ಟೆ ದರವು ಹಳೆಯ ಮಟ್ಟವನ್ನು ತಲುಪಿದೆ.
ಆಮದು ಸುಂಕ ಇಳಿಕೆಯಲ್ಲದೆ, ಹಬ್ಬದ ಬೇಡಿಕೆಯೂ ಚಿನ್ನದ ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.ಆಮದು ಸುಂಕದಲ್ಲಿ ಭಾರೀ ಕಡಿತ ಮತ್ತು ಹಬ್ಬದ ಬೇಡಿಕೆಯ ಹೆಚ್ಚಳದಿಂದಾಗಿ, ಆಗಸ್ಟ್‌ನಲ್ಲಿ ಚಿನ್ನದ ಆಮದು ದ್ವಿಗುಣಗೊಂಡು ದಾಖಲೆಯ ಮಟ್ಟ ತಲುಪಿದೆ.
2024-25ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಸರ್ಕಾರವು ಆಮದು ಸುಂಕವನ್ನು 15 ಪ್ರತಿಶತದಿಂದ 6 ಪ್ರತಿಶತಕ್ಕೆ ಇಳಿಸುವುದಾಗಿ ಘೋಷಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ (ಏಪ್ರಿಲ್-ಜುಲೈ) ದೇಶದ ಚಿನ್ನದ ಆಮದು 12.64 ಶತಕೋಟಿ ಡಾಲರ್ ತಲುಪಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಿಂದ 16 ಪ್ರತಿಶತಕ್ಕಿಂತ ಹೆಚ್ಚುಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕವಾಗಿದೆ.ಈ ಆಮದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ.
ಗುಡ್ ರಿಟರ್ನ್ಸ್ ಪ್ರಕಾರ ಈ ಸುದ್ದಿ ಬರೆಯುವ ಹೊತ್ತಿಗೆ ನಿನ್ನೆ ಮತ್ತು ಇಂದಿನ ಚಿನ್ನದ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಅಂಥಹ ವ್ಯತ್ಯಾಸವೇನು ಕಂಡು ಬಂದಿಲ್ಲ. 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7,488 ರೂಪಾಯಿ ಇದೆ.
ಇನ್ನು https://ibjarates.com/ ನಿತ್ಯದ ಬೆಲೆಯನ್ನು ಬಿಡುಗಡೆ ಮಾಡುತ್ತದೆ. ಇಲ್ಲಿ ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟಿದೆ ಎನ್ನುವುದನ್ನು ಕಂಡು ಕೊಳ್ಳಬಹುದು.