"ಬಾಲಿವುಡ್‌ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು.."! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!

ramya krishna: ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು. ಈ ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 1788 ಕೋಟಿ ಕಲೆಕ್ಷನ್ ಮಾಡಿತ್ತು, ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್-ಇಂಡಿಯನ್ ಸ್ಟಾರ್ ಆದರು, ಆದರೆ ಈ ಚಿತ್ರವು ಪ್ರಭಾಸ್‌ನಂತೆಯೇ ಮತ್ತೊಬ್ಬ ನಟಿಯನ್ನು ಸಹ ಪ್ರಸಿದ್ಧಗೊಳಿಸಿತು. ಈ ಚಿತ್ರದಲ್ಲಿ ರಮ್ಯಾಕೃಷ್ಣ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1 /9

ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು. ಈ ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 1788 ಕೋಟಿ ಕಲೆಕ್ಷನ್ ಮಾಡಿತ್ತು, ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್-ಇಂಡಿಯನ್ ಸ್ಟಾರ್ ಆದರು, ಆದರೆ ಈ ಚಿತ್ರವು ಪ್ರಭಾಸ್‌ನಂತೆಯೇ ಮತ್ತೊಬ್ಬ ನಟಿಯನ್ನು ಸಹ ಪ್ರಸಿದ್ಧಗೊಳಿಸಿತು. ಈ ಚಿತ್ರದಲ್ಲಿ ರಮ್ಯಾಕೃಷ್ಣ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

2 /9

2015ರಲ್ಲಿ ಎಸ್.ಎಸ್. ರಾಜಮೌಳಿ ಅಭಿನಯದ 'ಬಾಹುಬಲಿ' ವಿಶ್ವದಾದ್ಯಂತ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದು ಆ ಕಾಲದ ದೊಡ್ಡ ದಾಖಲೆಯಾಗಿತ್ತು. ಇದಾದ ಎರಡು ವರ್ಷಗಳ ನಂತರ 2017ರಲ್ಲಿ ಈ ಚಿತ್ರದ ಸೀಕ್ವೆಲ್ 'ಬಾಹುಬಲಿ 2' ತೆರೆಕಂಡಿತ್ತು. ಈ ಚಿತ್ರ ಕಲೆಕ್ಷನ್ ನಲ್ಲಿ ಇತಿಹಾಸ ಸೃಷ್ಟಿಸಿದೆ. ಇದು ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 1788 ಕೋಟಿ ಕಲೆಕ್ಷನ್ ಮಾಡುವ ಮೂಲಕ ತೆಲುಗು ಚಿತ್ರರಂಗದ ಮಟ್ಟವನ್ನು ಹೆಚ್ಚಿಸಿತು. 

3 /9

ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್-ಇಂಡಿಯನ್ ಸ್ಟಾರ್ ಆದರು, ಆದರೆ ಈ ಚಿತ್ರವು ಪ್ರಭಾಸ್‌ನಂತೆಯೇ ಮತ್ತೊಬ್ಬ ನಟಿಯನ್ನು ಸಹ ಪ್ರಸಿದ್ಧಗೊಳಿಸಿತು. ಈ ಚಿತ್ರದಲ್ಲಿ ರಮ್ಯಾಕೃಷ್ಣ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲೆಡೆ ಫೇಮಸ್‌ ಆದರು.  

4 /9

ಈ ಸಿನಿಮಾದ ನಂತರ ರಮ್ಯಾ ಕ್ರೇಜ್ ಹೆಚ್ಚಾಯಿತು. ಈಗಾಗಲೇ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿರುವ ನಟಿ, ಸೆಕೆಂಡ್ ಇನ್ನಿಂಗ್ಸ್ ನಿಂದಲೂ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಆದರೆ ಶಿವಗಾಮಿ ಪಾತ್ರ ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆದಿತ್ತು.  ಈ ಚಿತ್ರದ ಮೂಲಕ ಆಕೆಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು. ಆದರೆ ಅದಕ್ಕೂ ಮುನ್ನ ರಮ್ಯಕೃಷ್ಣ ಸೌತ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅವರು ಹಿಂದಿ ಚಿತ್ರರಂಗವನ್ನು ತೊರೆದರು.

5 /9

1983ರಲ್ಲಿ ‘ವೆಲ್ಲೈ ಮನಸು’ ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ಮೂಲಕ ರಮ್ಯಾ ತಮ್ಮ ಸಿನಿಮಾ ವೃತ್ತಿಜೀವನ ಆರಂಭಿಸಿದರು,  ಆ ನಂತರ ರಮ್ಯಾ ಕೃಷ್ಣ ಭಲೇ ಮಿತ್ರುಲು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದರ ನಂತರ ಅವರು ಮಲಯಾಳಂ ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. 

6 /9

1988 ರಲ್ಲಿ, ರಮ್ಯಾ ತಮ್ಮ ಮೊದಲ ಹಿಂದಿ ಚಲನಚಿತ್ರವನ್ನು ಮಾಡಿದರು. 1988 ರಲ್ಲಿ ಫಿರೋಜ್ ಖಾನ್, ರಾಜೇಶ್ ಖನ್ನಾ ಮತ್ತು ಅಮರೀಶ್ ಪುರಿ ಅಭಿನಯದ 'ದಯಾವಾನ್' ಚಿತ್ರ ಬಿಡುಗಡೆಯಾಯಿತು. ಈ ಸಿನಿಮಾದ ಮೂಲಕ ರಮ್ಯಕೃಷ್ಣ ಬಾಲಿವುಡ್‌ಗೆ ಪರಿಚಯವಾದರು.

7 /9

ಅದಾದ ನಂತರ ಈ ಹಿರಿಯ ಚೆಲುವೆ ಅಮಿತಾಭ್ ಬಚ್ಚನ್, ಗೋವಿಂದಲ ಅವರ ‘ಬಡೇ ಮಿಯಾನ್ ಛೋಟೆ ಮಿಯಾನ್’ ಮತ್ತು ಶಾರುಖ್ ಖಾನ್ ಅವರ ‘ಚಹಾತ್’ ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಇದಾದ ನಂತರ ನಟಿ ಹಿಂದಿ ಸಿನಿಮಾದಿಂದ ದೂರ ಸರಿದರು. 

8 /9

ಈ ಬಗ್ಗೆ ಮಾತನಾಡಿದ ಅವರು, ಹಿಂದಿ ಚಿತ್ರರಂಗದಲ್ಲಿ ತಮ್ಮ ಯಾವುದೇ ಚಿತ್ರಗಳು ಅಷ್ಟಾಗಿ ಪೇಮ್‌ ತಂದುಕೊಟ್ಟಿಲ್ಲ, ತೆಲುಗಿ ಚಿತ್ರಗಳಲ್ಲಿ ಒಳ್ಳೆಯ ಹೆಸರು ಇದೆ, ಬಾಲಿವುಡ್‌ಗೆ ಹೋಗಿ ಟಾಲಿವುಡ್‌ನಲ್ಲಿ ಚ್ಯಾನ್ಸ್‌ ಮಿಸ್‌ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಲ್ಲ. ಇದೇ ಕಾರಣದಿಂದ ನಾನು ಬಾಲಿವುಡ್‌ನಿಂದ ದೂರ ಉಳಿದಿದ್ದೇನೆ ಎಂದಿದ್ದಾರೆ. 

9 /9

ಯಾವುದೇ ಇಂಡಸ್ಟ್ರಿಯಲ್ಲಿ ಯಶಸ್ವಿ ಚಿತ್ರ ನೀಡುವುದು ಮುಖ್ಯ, ಬಾಲಿವುಡ್‌ನಲ್ಲಿ ಅದನ್ನು ಮಾಡಲು ಸಾಧ್ಯ ಇಲ್ಲ, ಆದರೆ ತೆಲುಗಿನಲ್ಲಿ ನಾನು ಯಶಸ್ವಿ ಚಿತ್ರಗಳನ್ನು ನೀಡುತ್ತಿದ್ದು, ತೆಲುಗಿನಲ್ಲಿ ಹಾಯಾಗಿರುತ್ತೇನೆ ಎಂದು ರಮ್ಯಾ ಕೃಷ್ಣ ಹೇಳಿದ್ದಾರೆ.