ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸೇಲ್ ನಲ್ಲಿ ಐಫೋನ್ 13 ಅತ್ಯಂತ ಅಗ್ಗದ ಬೆಲೆಯಲ್ಲಿ ಮಾರಾಟವಾಗಲಿದೆ.ಈ ಸೇಲ್ ನಲ್ಲಿ ಐಫೋನ್ 13ರ ಬೆಲೆ ಕೇವಲ 38,999 ರೂ.ಗೆ ಇಳಿಯುವ ನಿರೀಕ್ಷೆಯಿದೆ. ಈ ಆಫರ್ ಕುರಿತು ಆನ್ಲೈನ್ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. Twitter ಬಳಕೆದಾರರು ಈ ಲಿಸ್ಟ್ ನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದು,ಕಡಿಮೆ ಬೆಲೆಯ ಬಗ್ಗೆ ತಿಳಿಸಿದ್ದಾರೆ.
ಕಡಿಮೆ ಬೆಲೆಯಲ್ಲಿ ದೊಡ್ಡ ವೈಶಿಷ್ಟ್ಯಗಳು :
ಈ ಸೇಲ್ ನಲ್ಲಿ ಐಫೋನ್ 13 ಬೆಲೆ 40,000 ರೂಪಾಯಿಗಿಂತ ಕಡಿಮೆಯಿರುವಂತೆ ಕಾಣುತ್ತದೆ. 2021ರಲ್ಲಿ ಬಿಡುಗಡೆಯಾದ iPhone 13 ಶಕ್ತಿಯುತ A15 ಬಯೋನಿಕ್ ಚಿಪ್, ಉತ್ತಮ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು ಸೂಪರ್ ರೆಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತದೆ.ಇದು 5G ಅನ್ನು ಕೂಡಾ ಬೆಂಬಲಿಸುತ್ತದೆ. ಗೇಮಿಂಗ್, ಫೋಟೋಗ್ರಫಿ ಮತ್ತು ದೈನಂದಿನ ಬಳಕೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ : ಫೋನ್ ಚಾರ್ಜ್ ಮಾಡುವಾಗ ಮರೆತೂ ಸಹ ಈ ತಪ್ಪುಗಳನ್ನು ಮಾಡ್ಬೇಡಿ, ಬ್ಯಾಟರಿ ಅಷ್ಟೇ ಅಲ್ಲ, ಜೀವಕ್ಕೂ ಅಪಾಯ
ಐಫೋನ್ 16 ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಹಾಗಾಗಿ ಐಫೋನ್ 13 ಈಗ ಮೂರು ಜನರೇಶನ್ ಗಳಷ್ಟು ಹಳೆಯದಾಗಿದ್ದರೂ, ಇದರ ಕಡಿಮೆ ಬೆಲೆ ಗ್ರಾಹಕರನ್ನು ಆಕರ್ಷಿಸಬಹುದು.ಹೊಸ ಐಫೋನ್ಗಳು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಎರಡರಲ್ಲೂ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ.
iPhone 13 ಗಾಗಿ ಸಾಕಷ್ಟು ಕ್ರೇಜ್ ಇದ್ದು, ಒಂದು ಸಮಯದಲ್ಲಿ ಅದು ಹೆಚ್ಚು ಮಾರಾಟವಾದ ಫೋನ್ ಆಗಿತ್ತು. ಅನೇಕ ಜನರು Android ನಿಂದ iOS ಗೆ ಶಿಫ್ಟ್ ಆಗಿದ್ದರು. ನಿಮ್ಮ ಬಳಿ 40 ಸಾವಿರದವರೆಗಿನ ಬಜೆಟ್ ಇದ್ದು, ಐಫೋನ್ ಖರೀದಿಸಬೇಕು ಎನ್ನುವ ಆಸೆ ಇದ್ದರೆ ಈ ಫೋನ್ ನಿಮಗೆ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅಗ್ಗದ 5G Smartphone!50MP ಕ್ಯಾಮೆರಾ 5000mAh ಬ್ಯಾಟರಿ ಇರುವ ಈ ಫೋನ್ ಬೆಲೆ 10 ಸಾವಿರಕ್ಕಿಂತಲೂ ಕಡಿಮೆ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.