Women viral news today: ಭಾರತೀಯ ವಿವಾಹ ಪದ್ಧತಿಯಲ್ಲಿ ಮಿಶ್ರ ಸಂಪ್ರದಾಯಗಳು ಕಂಡುಬರುತ್ತವೆ. ಒಂದೆಡೆ ವರದಕ್ಷಿಣೆ ಬೇಡ ಎಂದು ವರ ಡಿಮ್ಯಾಂಡ್ ಮಾಡಿದರೆ, ಇನ್ನೊಂದೆಡೆ ಇಷ್ಟು ವರದಕ್ಷಿಣ ಕೊಟ್ಟರೆ ಮಾತ್ರ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಹುಡುಗಿಯ ಮನೆಯವರಂತೂ ವರನಿಗೆ ಇಷ್ಟು ಆಸ್ತಿ ಇದ್ದರೆಯಷ್ಟೆ ಮದುವೆಯಾಗೋದು ಅಂತಾರೆ. ಹೀಗಿರುವಾಗ ಇಲ್ಲೊಂದು ಮಹಳಿ "ನಾನು ಮದುವೆಗೆ ರೆಡಿ ಆದರೆ ಷರತ್ತುಗಳು ಅನ್ವಯ" ಎಂದು ಹೇಳುತ್ತಾ ತನಗೆ ಬೇಕಾದ ವರ ಹೇಗಿರಬೇಕೆಂದು ಒಂದು ದೊಡ್ಡ ಪಟ್ಟಿಯನ್ನೆ ರಿಲೀಸ್ ಮಾಡಿದ್ದಾಳೆ. ಈ ಪಟ್ಟಿ ನೋಡಿ ಅವಿವಾಹಿತ ಹುಡುಗರು ನಮಗೆ ಮದುವೆಯೇ ಬೇಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆಕೆ ಕೊಟ್ಟಿರುವ ಪಟ್ಟಿಯಲ್ಲಿ ಇರುವುದಾದರೂ ಏನು? ಈ ಸ್ಟೋರಿ ಓದಿ...
ತನ್ನ ಬಾವಿ ಪತಿಗೆ ಇರಬೇಕಾದ ಅಂಶಗಳನ್ನು ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಆ ಪೋಸ್ಟ್‌ನಲ್ಲಿ, ತನ್ನ ಭಾವಿ ಪತಿಗೆ ವರ್ಷಕ್ಕೆ 30 ಲಕ್ಷ ರೂಪಾಯಿ ಸಂಬಳ ಸಿಗಬೇಕು ಮತ್ತು 3 ಬಿಎಚ್‌ಕೆ ಮನೆ ಬೇಕು ಎಂದು ಪೋಸ್ಟ್‌ನಲ್ಲಿ ಹಾಕಲಾಗಿದೆ.
ಇದನ್ನೂ ಓದಿ: Viral video: ಎಷ್ಟು ಕ್ಯೂಟ್ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ
ತನಗೆ ವರ ಬೇಕು ಎಂದು ಪೋಸ್ಟ್ ಮಾಡಿದ ಮಹಿಳೆಯೊಬ್ಬರು ಬಿಎಡ್ ಪದವಿ ಓದಿದ್ದಾರೆ. ಕೆಲಸ ರೂ. 1.3 ಲಕ್ಷ ಗಳಿಸುತ್ತಿದ್ದಾರೆ. ಮೇಲಾಗಿ ಇದಕ್ಕೂ ಮುನ್ನ ಪತಿಯೊಂದಿಗೆ ಜಗಳವಾಡಿ ಆಕೆಗೆ ವಿಚ್ಛೇದನ ನೀಡಿದ್ದರು. ಆದರೆ ಇದೀಗ ಮಹಿಳೆ ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ. ಅದಕ್ಕಾಗಿ ಆನ್‌ಲೈನ್‌ನಲ್ಲಿ ವರ ಬೇಕೆಂದು ಜಾಹೀರಾತು ನೀಡಿದ್ದಾರೆ. ಅದರಲ್ಲಿ ಆಕೆಯ ನಿರೀಕ್ಷಿತ ವರ ಸಾಫ್ಟ್‌ವೇರ್ ಇಂಜಿನಿಯರ್ ಆಗಿರಬೇಕಂತೆ, MBA, MS ಮತ್ತು ಕನಿಷ್ಠ ರೂ. 30 ಲಕ್ಷ ವಾರ್ಷಿಕ ಸಂಬಳ ಜೊತೆಗೆ ಭಾರತ, ಅಮೇರಿಕಾ ಅಥವಾ ಯುರೋಪ್‌ನಲ್ಲಿ ಕೆಲಸ ಮಾಡುವ ಯುವಕ ಬೇಕಂತೆ.
ಮದುವೆಯಾಗಲು ರೂ. 30 ಲಕ್ಷ ಸಂಬಳ ಅಷ್ಟೆ ಅಲ್ಲ ಅದಕ್ಕೇನೆ ನೀವು ಶಾಕ್ ಆದ್ರೆ ಹೇಗೆ? ಇನ್ನೂ ಮುಂದೆ ಓದಿ... ಈ ಹುಡುಗಿಗೆ 30 ಲಕ್ಷ ರೂ. ವಾರ್ಷಿಕ ಸಂಬಳ ಅಷ್ಟೆ ಅಲ್ಲ ಯುವಕನಿಗೆ ತಂದೆ ತಾಯಿ ಇರಬಾರದಂತೆ, ಹಾಗೆ ಇದ್ದರೂ ಸಹ ಮದುವೆಯ ನಂತರ ಅವರೊಂದಿಗೆ ಇರಬಾರದಂತೆ. ಅಷ್ಟೆ ಅಲ್ಲ 3 ಬಿಎಚ್‌ಕೆ ಮನೆ, ಮನೆಕೆಲಸಗಳನ್ನು ಮಾಡಲು ಸೇವಕಿ, ಈ ಎಲ್ಲಾ ಸೌಕರ್ಯಗಳು ಇದ್ದರೆ ಮದುವೆಯಾಗಲು ನಾನು ರೆಡಿ ಎಂದಿದ್ದಾಳೆ ಈ ಯುವತಿ.
ಇದನ್ನೂ ಓದಿ: Viral video: ಮನುಷ್ಯರಂತೆ ನಡೆದಾಡುತ್ತಿದೆ ಈ ಮರ! ವಿಡಿಯೋ ನೋಡಿ ನಿಮ್ಮ ಕಣ್ಣುಗಳನ್ನು ನೀವೆ ನಂಬಲ್ಲ
ಇನ್ನೂ ಮಹಿಳೆ ಮಾಡಿರುವ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ಯುವಕಾರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹುಡುಗರಂತೂ ನನಗೆ ಮದುವೇನೆ ಬೇಡ ಬಿಡಮ್ಮ ಎನ್ನುತ್ತಿದ್ದಾರೆ.
Her qualities and salary 🤡
Expected husbands qualities and salary🗿🗿 pic.twitter.com/NGgJvVvN9l— ShoneeKapoor (@ShoneeKapoor) September 10, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.