ಬೆಂಗಳೂರು :ಈ ವರ್ಷದ ಎರಡನೇ ಚಂದ್ರಗ್ರಹಣ ಇನ್ನು ಎರಡು ವಾರಗಳಲ್ಲಿ ಗೋಚರಿಸಲಿದೆ.ಈ ಚಂದ್ರಗ್ರಹಣವು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 06:11 ಕ್ಕೆ ಪ್ರಾರಂಭವಾಗಿ, 10:17 ಕ್ಕೆ ಕೊನೆಗೊಳ್ಳುತ್ತದೆ.ಅಂದರೆ ಗ್ರಹಣ ಕಾಲ 4 ಗಂಟೆ 6 ನಿಮಿಷಗಳವರೆಗೆ ಇರುತ್ತದೆ.ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿರಲಿದೆ.
ಚಂದ್ರಗ್ರಹಣದ ಸೂತಕ ಕಾಲ :
ಹಿಂದೂ ಧರ್ಮದಲ್ಲಿ ಗ್ರಹಣವನ್ನು ಮಂಗಳಕರ ಎಂದು ಹೇಳುವುದಿಲ್ಲ.ಆದ್ದರಿಂದ ಗ್ರಹಣದ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗುತ್ತದೆ. ಚಂದ್ರಗ್ರಹಣದ ಸೂತಕವು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುವುದರೊಂದಿಗೆ ಗ್ರಹಣ ಕೊನೆಗೊಂಡಾಗ ಮುಕ್ತಾಯವಾಗುತ್ತದೆ.
ಇದನ್ನೂ ಓದಿ: Weekly Horoscope: ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧಾದಿತ್ಯ, ಗಜಕೇಸರಿ ರಾಜಯೋಗ, 6 ರಾಶಿಯವರಿಗೆ ಭಾಗ್ಯೋದಯ
ಈ ರಾಶಿಯವರಿಗೆ ಚಂದ್ರಗ್ರಹಣ ಅಶುಭ :
ಮೇಷ ರಾಶಿ :ಈ ಜನರು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯವನ್ನು ಎದುರಿಸಬೇಕಾಗಬಹುದು.ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು.ಈ ಸಮಯದಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.ಚಂದ್ರಗ್ರಹಣದ ದೋಷ ಪರಿಹಾರಕ್ಕಾಗಿ ಈ ರಾಶಿಯವರು ಶಿವನನ್ನು ಪೂಜಿಸಬೇಕು.
ಕರ್ಕಾಟಕ ರಾಶಿ :ಕರ್ಕ ರಾಶಿಯವರ ವೃತ್ತಿ ಜೀವನದಲ್ಲಿ ಬದಲಾವಣೆಗಳಾಗಬಹುದು. ಕೆಲಸ ಬಿಡುವಂತೆ ನಿಮ್ಮ ಮೇಲೆ ಒತ್ತಡ ಬರಬಹುದು. ವೈಯಕ್ತಿಕ ಜೀವನದಲ್ಲಿಯೂ ಸಮಸ್ಯೆಗಳು ಏಳಬಹುದು. ಇವರ ಮೇಲೆ ಚಂದ್ರಗ್ರಹಣದ ಕೆಟ್ಟ ಪರಿಣಾಮ ಆಗದಂತೆ ದುರ್ಗಾ ದೇವಿಯನ್ನು ಪೂಜಿಸಬೇಕು.
ತುಲಾ ರಾಶಿ :ತುಲಾ ರಾಶಿಯವರಿಗೆ ಚಂದ್ರ ಗ್ರಹಣ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.ಕೆಲಸದ ಸ್ಥಳದಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳು ಉಂಟಾಗಬಹುದು, ಜಾಗರೂಕರಾಗಿರಿ. ಈ ರಾಶಿಯವರು ಕೂಡಾ ತಮ್ಮ ಮೇಲೆ ಆಗುವ ದುಷ್ಪರಿಣಾಮ ತಪ್ಪಿಸಲು ದುರ್ಗಾ ದೇವಿಯನ್ನು ಆರಾಧಿಸಬೇಕು.
ಇದನ್ನೂ ಓದಿ: ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲ
ಮಕರ ರಾಶಿ :ಚಂದ್ರಗ್ರಹಣವು ಮಕರ ರಾಶಿಯವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು.ಮನೆಯಲ್ಲಿ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇನ್ನು ಈ ರಾಶಿಯವರು ಆಂಜನೇಯನನ್ನು ಆರಾಧಿಸಿದರೆ ಕೆಟ್ಟ ಪರಿಣಾಮವನ್ನು ತಪ್ಪಿಸಬಹುದು.
(ಸೂಚನೆ : ಈ ಮೇಲಿನ ಲೇಖನ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.