Amy Jackson wedding : ದಿ ವಿಲನ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸುಂದರಿ ಆಮಿ ಜಾಕ್ಸನ್ ಲೈಪ್ ಒಂಥರಾ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.. ಆಮಿ ಮಗುವಿಗೆ ಜನ್ಮ ನೀಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಲಿವುಡ್ ನಟರೊಬ್ಬರನ್ನು ಪ್ರೀತಿಸಿ ಮದುವೆಯಾದರು. ಈಗ ಆ ಫೋಟೋಗಳು ವೈರಲ್ ಆಗುತ್ತಿವೆ.
ಕನ್ನಡ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಹಾಲಿವುಡ್ನ ಖ್ಯಾತ ನಟಿ ಆಮಿ ಜಾಕ್ಸನ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಲಿವುಡ್ ಖ್ಯಾತ ನಟನೊಂದಿಗೆ ಪ್ರೀತಿಯಲ್ಲಿದ್ದ ನಟಿ ಕೊನೆಗೂ ವಿವಾಹವಾಗಿದ್ದಾರೆ..
ಆಮಿ ಅವರು ಹಾಲಿವುಡ್ ನಟ ಎಡ್ ವೆಸ್ಟ್ವಿಕ್ ಅವರನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿತು. ಆಮಿ ಜಾಕ್ಸನ್ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..
ಆಮಿ ಜಾಕ್ಸನ್ ಮದುವೆ ಸಮಾರಂಭ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿತು. 'ಹೊಸ ಪ್ರಯಾಣ ಶುರುವಾಗಿದೆ...' ಅಂತ ಶೀರ್ಷಿಕೆ ಬರೆದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಿಳಿ ಗೌನ್ನಲ್ಲಿ ಆಮಿ ಜಾಕ್ಸನ್ ಮಿಂಚಿದ್ದರು. ಎಡ್ ವೆಸ್ಟ್ವಿಕ್ ಬಿಳಿ ಬ್ಲೇಜರ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಈ ಜೋಡಿಯ ಫೋಟೋಗಳು ಇದೀಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿವೆ.
ಆಮಿ ಜಾಕ್ಸನ್ ಈ ಹಿಂದೆ ಉದ್ಯಮಿ ಜಾರ್ಜ್ ಪ್ಯಾನಿಯೊಟೌ ಜೊತೆ ಡೇಟಿಂಗ್ ನಡೆಸಿದ್ದರು. ಅಷ್ಟೇ ಅಲ್ಲ ಮದುವೆಯಾಗದೇ ಮಗುವಿಗೆ ಜನ್ಮ ನೀಡಿದ್ದರು. ಆಮಿ-ಜಾರ್ಜ್ 2020 ರಲ್ಲಿ ಮದುವೆಯಾಗಬೇಕಿತ್ತು, ಆದರೆ ಕರೋನಾ ಕಾರಣ ಅದನ್ನು ಮುಂದೂಡಲಾಗಿತ್ತು ಎನ್ನಲಾಗಿದೆ.
ಆ ಸಮಯದಲ್ಲಿ, ಆಮಿ ಜಾಕ್ಸನ್ ಮತ್ತು ಜಾರ್ಜ್ ಸಂಬಂಧ ಮುರಿದು ಬಿತ್ತು. ಈ ಮಧ್ಯೆ ನಟಿ ಜಾಕ್ಸನ್ ಜೊತೆ ತನ್ನ ಮಗನೊಂದಿಗೆ ಜೀವನ ಕಳೆಯುತ್ತಿದ್ದಳು. ಪ್ರಸ್ತುತ, ಮದುವೆಯಾಗಿದ್ದಾರೆ. ಹಾಲಿವುಡ್ ನಟ ಎಡ್ ವೆಸ್ಟ್ವಿಕ್ ಆಮಿಯನ್ನ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಭೇಟಿಯಾಗಿದ್ದರಂತೆ.. ಅದೇ ಸಮಯದಲ್ಲಿ ಅವರು ಮದುವೆ ಪ್ರಸ್ತಾಪ ಮಾಡಿದ್ದರು ಎನ್ನಲಾಗಿದೆ.
ಕನ್ನಡ ದಿ ವಿಲನ್, ಮತ್ತು ತಮಿಳಿನ ಐ, 2 ಮತ್ತು ಓ ಚಿತ್ರಗಳ ಜೊತೆಗೆ ರಾಮ್ ಚರಣ್ ಅಭಿನಯದ ಎವಡು ಚಿತ್ರದಲ್ಲಿ ಆಮಿ ಜಾಕ್ಸ್ ನಟಿಸಿದ್ದಾರೆ. ಸುದೀಪ್ ಜೊತೆ ದಿ ವಿಲನ್ನಲ್ಲಿ ನಟಿಸುವ ಮೂಲಕ ಆಮಿ ಕನ್ನಡಿಗರಿಗೆ ಹತ್ತಿವಾಗಿದ್ದರು..
ಆ್ಯಮಿ ಜಾಕ್ಸನ್ ಬಗ್ಗೆ ಹೇಳುವುದಾದರೆ... ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ನಟಿ ‘ಮದ್ರಾಸು ಟೌನ್’ ಸಿನಿಮಾದ ಮೂಲಕ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ತೆಲುಗಿನ 'ಎವಡು' ಮತ್ತು ಅಭಿನೇತ್ರಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದಿ ವಿಲನ್ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸುಂದರಿ ನಟನೆ ವಿಕ್ರಮ್ ಅಭಿನಯದ ಐ ಸಿನಿಮಾ ಸೂಪರ್ ಹಿಟ್ ಆಗಿತ್ತು..