Raadhika Sarathkumar: ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯರಿದ್ದಾರೆ, ಅದರಲ್ಲೂ 80-90ರ ದಶಕದಲ್ಲಿ ಸಿನಿಮಾ ಇಂಡಿಸ್ಟ್ರಿಯನ್ನು ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದ ಆಳಿದ ನಟಿಯರ ಸಂಖ್ಯೆಗೇನು ಕಡಿಮೆ ಇಲ್ಲ. ಅದರಲ್ಲಿ ಈ ಫೋಟೋದಲ್ಲಿ ಕಾಣುವ ಪುಟ್ಟ ಯುವತಿ ಕೂಡ ಒಬ್ಬರು. ಯಾರದು ಗೆಸ್ ಮಾಡಿದ್ರಾ? ಇಲ್ಲವಾದರೆ ಈ ಸ್ಟೋರಿ ಓದಿ...
ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯರಿದ್ದಾರೆ, ಅದರಲ್ಲೂ 80-90ರ ದಶಕದಲ್ಲಿ ಸಿನಿಮಾ ಇಂಡಿಸ್ಟ್ರಿಯನ್ನು ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದ ಆಳಿದ ನಟಿಯರ ಸಂಖ್ಯೆಗೇನು ಕಡಿಮೆ ಇಲ್ಲ. ಅದರಲ್ಲಿ ಈ ಫೋಟೋದಲ್ಲಿ ಕಾಣುವ ಪುಟ್ಟ ಯುವತಿ ಕೂಡ ಒಬ್ಬರು. ಯಾರದು ಗೆಸ್ ಮಾಡಿದ್ರಾ? ಇಲ್ಲವಾದರೆ ಈ ಸ್ಟೋರಿ ಓದಿ...
80, 90ರ ದಶಕದಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದ ಈ ನಟಿ, ಈಗಲೂ ಕೂಡ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಸೌತ್ ಇಂಡಸ್ಟ್ರಿಯ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಈಕೆ ತೆಲುಗು, ತಮಿಳು, ಮಲಯಾಳಂ ಅಷ್ಟೆ ಅಲ್ಲದೆ ಕನ್ನಡ ಭಾಷೆಯಲ್ಲಿಯೂ ಸಹ ನಟಿಸಿದ್ದಾರೆ.
ಆಗಿನ ಕಾಲದಲ್ಲಿ ನಾಯಕಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಸದೈ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಹೊರತಾಗಿ ಈ ನಟಿ ಇತ್ತೀಚೆಗೆ ರಾಜಕೀಯದಲ್ಲೂ ಸದ್ದು ಮಾಡುತ್ತಿದ್ದಾರೆ.
ಕಾಶ್ಮೀರಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಬಾಲಕಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೆಲ ವರ್ಷಗಳ ಹಿಂದೆ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ ಈ ಹುಡುಗಿ ಈಗ ದಕ್ಷಿಣ ಭಾರತದ ನೆಚ್ಚಿನ ನಾಯಕಿ. 80, 90ರ ದಶಕದಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದ ಈಕೆ, ಸದ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅವರು ಬೇರೆ ಯಾರು ಅಲ್ಲ ಹಿರಿಯ ನಾಯಕಿ ರಾಧಿಕಾ ಶರತ್ ಕುಮಾರ್. ರಾಧಿಕಾ ತಮಿಳು ಚಲನಚಿತ್ರ ನಟ ಮತ್ತು ಹಾಸ್ಯನಟ ಎಂಆರ್ ರಾಧಾ ಅವರ ಪುತ್ರಿ.
1978 ರಲ್ಲಿ, ಅವರು ಭಾರತಿರಾಜ ನಿರ್ದೇಶನದ ಇಷ್ಕಿಷ್ಕೆ ಪೋಮಿಯಾ ರೈಲ್ ಚಲನಚಿತ್ರದೊಂದಿಗೆ ತಮಿಳಿನಲ್ಲಿ ತಮ್ಮ ಮೊದಲ ಸಿನಿಮಾದ ಮೂಲಕ ಪ್ರವೇಸ ಮಾಡಿದ ಇವರು, ನಂತರ ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ.
ರಾಧಿಕಾ ಹೆಚ್ಚಾಗಿ ಚಿರಂಜೀವಿ, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ತಮಿಳಿನ ಖ್ಯಾತ ನಟ ಶರತ್‌ಕುಮಾರ್ ಅವರನ್ನು ರಾಧಿಕಾ ಫೆಬ್ರವರಿ 4, 2001 ರಂದು ವಿವಾಹವಾದರು. ರಾಧಿಕಾ ಹಾಗೂ ಶರತ್‌ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಕೇವಲ ನಾಯಕಿಯಾಗಿ ಅಷ್ಟೆ ಅಲ್ಲ, ಪೋಷಕ ಪಾತ್ರದಲ್ಲಿ ಮಾತ್ರವಲ್ಲ. ರಾಧಿಕಾ ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿಯೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ.
ರಾಧಿಕಾ ರೇಡಾನ್ ಮೀಡಿಯಾ ವರ್ಕ್ಸ್ ಇಂಡಿಯಾ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದು, ಒಂದು ರಾಷ್ಟ್ರೀಯ ಪ್ರಶಸ್ತಿ, ಆರು ಫಿಲಂಫೇರ್ ಪ್ರಶಸ್ತಿಗಳು, ಎರಡು ನಂದಿ ಪ್ರಶಸ್ತಿಗಳು ಮತ್ತು ತಮಿಳುನಾಡು ಸರ್ಕಾರದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಿದ್ದಾರೆ.