Viral News: ತನ್ನನ್ನು ಗರ್ಭಿಣಿ ಮಾಡಿದ್ದಲ್ಲದೆ ನಿರ್ಲಕ್ಷ್ಯ ತೋರುತ್ತ ಮೋಸ ಮಾಡಿದ್ದಾನೆಂದು ಕುಪಿತಳಾದ ಯುವತಿಯೊಬ್ಬಳು ಬಾಯ್ ಫ್ರೆಂಡ್ನ ಮರ್ಮಾಂಗವನ್ನೇ ಕತ್ತರಿಸಿಹಾಕಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ರಕ್ತಸ್ರಾಯದಿಂದ ನಿಶ್ಯಕ್ತನಾಗಿದ್ದ ಆ ವ್ಯಕ್ತಿ ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.
ಉದ್ಯೋಗ ನಿಮಿತ್ತ ಪ್ರಕಾಶಂ ಜಿಲ್ಲೆಯ ತೋರರಗುಡಿಪಾಡು ಎಂಬಲ್ಲಿಗೆ ಬಂದಿದ್ದ ಬಿಹಾರದ ಮೂಲದ ವಿಜಯ್ ಯಾದವ್ ಸ್ಥಳೀಯ ಡೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಆತನಿಗೆ ಮದುವೆಯಾಗಿದ್ದರೂ ಪತ್ನಿಯನ್ನು ಬಿಹಾರದಲ್ಲೇ ಬಿಟ್ಟು ಬಂದಿದ್ದ. ಆದರೆ ಯುವತಿಯೊಬ್ಬಳ ಪರಿಚಯವಾಗಿ ಆಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಆತ್ಮೀಯತೆ ಏರ್ಪಟ್ಟು ದೈಹಿಕ ಸಂಪರ್ಕಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಒಂದಲ್ಲ..ಎರಡಲ್ಲ...23 ರೈಲ್ವೆಗಳು ನಿಲ್ಲುತ್ತವೆ ಈ ಸ್ಟೇಶನ್ ನಲ್ಲಿ..! ಅಚ್ಚರಿ ಹಾಗೂ ರೋಚಕ ಕಥನಗಳಿವೆ ಇಲ್ಲಿ..!
ಕೆಲ ದಿನಗಳಿಂದ ತೋರರಗುಡಿಪಾಡುವಿನ ಬಾಡಿಗೆ ಮನೆಯಲ್ಲಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ವಿಜಯ್ ತನ್ನತ್ತ ಗಮನ ಹರಿಸುತ್ತಿಲ್ಲ, ತನ್ನ ಸಂಪಾದನೆಯನ್ನೆಲ್ಲ ಬಿಹಾರದಲ್ಲಿರುವ ಹೆಂಡತಿಗೆ ಕಳುಹಿಸುತ್ತಿದ್ದಾನೆ. ತನ್ನನ್ನು ಸರಿಯಾಗಿ ನೋಡಿಕೊಳ್ಳದೆ ತೊಂದರೆ ಕೊಡುತ್ತಿದ್ದಾನೆಂದು ಕೋಪಗೊಂಡಿದ್ದಳಂತೆ. ಇದೇ ವಿಚಾರವಾಗಿ ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ಸಹ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ಶನಿವಾರ ಮಧ್ಯಾಹ್ನ ವಿಜಯ್ ಡೇರಿಯ ಕೊಠಡಿಯಲ್ಲಿ ಮಲಗಿದ್ದ. ಈ ವೇಳೆ ಚಾಕು ಹಿಡಿದು ಬಂದ ಯುವತಿ ನೇರವಾಗಿ ಆತನ ಮರ್ಮಾಂಗವನ್ನೇ ಕೊಯ್ದುಹಾಕಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಒಂಗೋಲು ರಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಸಾವು-ಬದುಕಿನ ನಡುವೆ ನಡೆಸುತ್ತಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವತಿಯನ್ನು ಒಂಗೋಲು ಮಹಿಳಾ ಕಲ್ಯಾಣ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಭಾರತದ ಈ ಗ್ರಾಮದಲ್ಲಿ ಯಾವ ಮಹಿಳೆಯೂ ಬಟ್ಟೆ ಧರಿಸುವುದಿಲ್ಲ! ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.