Train stoppage cancelled in Bangalore: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ (Bangalore Cantonment Railway Station) ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ ಈ ನಿಲ್ದಾಣದಿಂದ ಸಂಚರಿಸುವ ರೈಲು ಸೇವೆಳಗು ಬಂದ್ ಆಗಲಿವೆ ಎಂದು ನೈರುತ್ಯ ರೈಲ್ವೆ (South Western Railway) ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸುರುವ ನೈಋತ್ಯ ರೈಲ್ವೆ (South Western Railway), ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದ್ದು ಒಟ್ಟು 92 ದಿನಗಳ ಕಾಲ 41 ರೈಲುಗಳ ನಿಲುಗಡೆ ಬಂದ್ ಆಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ- ವಂದೇ ಭಾರತ್ ಎಕ್ಸ್ಪ್ರೆಸ್: ಕಲ್ಪತರು ನಾಡಿನ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಇಲಾಖೆ!
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ರದ್ದಾಗಲಿರುವ ರೈಲುಗಳ ವಿವರ ಕೆಳಕಂಡಂತಿದೆ (Train stoppage cancelled in Bangalore are as follows):-
>> ಪ್ರತಿದಿನ ಸಂಚರಿಸುವ ಮೈಸೂರು- ಎಸ್ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದು
>> ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು ನಿಲುಗಡೆ ರದ್ದು
>> ಸೆ. 6 ದಿನಕ್ಕೊಮ್ಮೆ ಸಂಚರಿಸುವ ಕೆಎಸ್ಆರ್ ಬೆಂಗಳೂರು (KSR Bengaluru)- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರದ್ದು
>> ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ರೈಲು (12677)
>> ಪ್ರತಿದಿನದ ಕೆಎಸ್ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608),
>> ಮುರ್ಡೇಶ್ವರ- ಎಸ್ ಎಂವಿಟಿ ಬೆಂಗಳೂರು (16586),
>> ಕೆಎಸ್ಆರ್ ಬೆಂಗಳೂರು- ಮಾರಿಕುಪ್ಪಂ (06396),
>> ಕೆಎಸ್ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515),
>> ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515),
>> ಕೆಎಸ್ಆರ್ ಬೆಂಗಳೂರು- ಕೋಲಾರ (06387),
>> ಕೆಎಸ್ಆರ್ ಬೆಂಗಳೂರು- ಭುವನೇಶ್ವರ (18464)
>> ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದು
>> ಕೆಎಸ್ಆರ್ ಬೆಂಗಳೂರು - ಜೋಳಪಟ್ಟಿ (06551),
>> ಕೆಎಸ್ಆರ್ ಬೆಂಗಳೂರು - ವೈಟ್ಫೀಲ್ಡ್ (01765)
>> ಕೆಎಸ್ಆರ್ ಬೆಂಗಳೂರು - ಬಂಗಾರಪೇಟೆ (06561/06389),
>> ಕೆಎಸ್ಆರ್ ಬೆಂಗಳೂರು - ಕುಪ್ಪಂ (06529) 01775),
>> ವಾರಕ್ಕೆ ಎರಡು ಬಾರಿ ಮೈಸೂರು-ಜೈಪುರ (12975) ರೈಲು ಸೆ. 21 ರಿಂದ ಡಿ.19.
>> ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786),
ಕೆಎಸ್ಆರ್ ಬೆಂಗಳೂರು- ಧರ್ಮಪುರಿ, ಕೆಎಸ್ಆರ್ ಬೆಂಗಳೂರು- ನವದೆಹಲಿ (12627),
>> ಕೆಎಸ್ಆರ್ ಬೆಂಗಳೂರು- ಸಿಎಸ್ಎಂಟಿ ಮುಂಬೈ (1302),
>> ಬೆಂಗಳೂರು ದೇಬ್ ನಾಂದೇಡ್ (16593) ಸೆ.20 ರಿಂದ ಡಿ.20 ನಿಲುಗಡೆ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ- ಯಶವಂತಪುರ ನಿಲ್ದಾಣದ ಪ್ಲಾಟ್ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.