Shani Dev: ಶನಿವಾರ ಈ ಕೆಲಸ ಮಾಡಿದ್ರೆ ಶನಿ ದೋಷ ಬರಬಹುದು!

Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.

Shani Dev: ಶನಿವಾರವಾ ಶನಿ ದೇವನಿಗೆ ಸಮರ್ಪಿತವಾದ ವಾರವಾಗಿದೆ. ಸಾಮಾನ್ಯವಾಗಿ ಈ ದಿನ ಶುಭ ಕೆಲಸಗಳನ್ನು ಮಾಡುವುದಿಲ್ಲ. ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ದೋಷ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲಸಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಶನಿವಾರವನ್ನು ಶನಿ & ಭೈರವನಿಗೆ ಸಮರ್ಪಿಸಲಾಗಿದೆ. ಶನಿದೇವನ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ, ಅವರಿಗೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಶನಿವಾರದಂದು ಕಪ್ಪು ಎಳ್ಳು ಅಥವಾ ಅದರಿಂದ ಮಾಡಿದ ಯಾವುದೇ ಖಾದ್ಯವನ್ನು ಶನಿ ದೇವರಿಗೆ ಅರ್ಪಿಸಬೇಕು. ಶನಿದೇವನು ಇದರಿಂದ ಸಂತಸಗೊಂಡು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬುತ್ತಾನೆಂಬ ನಂಬಿಕೆಯಿದೆ.

2 /5

ಶನಿವಾರ ಮದುವೆ, ಮುಂಜಿ, ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮವಾದ ದಿನವಲ್ಲ. ಆದರೆ ಅಪರಕ್ರಿಯೆಗಳನ್ನು ಮಾಡುವುದಕ್ಕೆ ಸಮಸ್ಯೆಯಿಲ್ಲ. ಅದೇ ರೀತಿ ಶುಭ ವಸ್ತುಗಳು, ಮಂಗಲ ವಸ್ತುಗಳನ್ನು ಖರೀದಿಸಲೂ ಇಂದಿನ ದಿನ ಶುಭ ದಿನವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

3 /5

ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬಾರದಂತೆ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬೇಡಿ. ಅದೇ ರೀತಿ ಛತ್ರಿ, ಉದ್ದಿನ ಬೇಳೆ ಮುಂತಾದ ವಸ್ತುಗಳನ್ನು ಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾದೀತು.

4 /5

ಶನಿಯ ವಕ್ರದೃಷ್ಟಿಯಿಂದ ಪಾರಾಗಬೇಕು ಎಂದರೆ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ ಅರಳಿ ಮರದ ಬುಡದಲ್ಲಿಡಬೇಕೆಂದು ಹೇಳಲಾಗುತ್ತದೆ. 

5 /5

ಶನಿದೇವನ ಅವಕೃಪೆಗೊಳಗಾಗಿದ್ದರೆ ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಮಾಡುವುದರಿಂದಲೂ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.