Mosquito Repellent: ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳು ಮನುಷ್ಯರ ರಕ್ತ ಹೀರಲು ಶುರು ಮಾಡುತ್ತದೆ. ರಕ್ತ ಹೀರುವುದು ಆಗಿರಲಿ, ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹೊತ್ತು ತರುತ್ತದೆ. ಈ ಕಾಯಿಲೆಗಳು ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಿ ಬಿಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳು ಮನುಷ್ಯರ ರಕ್ತ ಹೀರಲು ಶುರು ಮಾಡುತ್ತದೆ. ರಕ್ತ ಹೀರುವುದು ಆಗಿರಲಿ, ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹೊತ್ತು ತರುತ್ತದೆ. ಈ ಕಾಯಿಲೆಗಳು ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಿ ಬಿಡುತ್ತದೆ.
ಸಾಮಾನ್ಯವಾಗಿ ಸೊಳ್ಳೆಗಳನ್ನು ಓಡಿಸುವುದು ಸುಲಭವಾದ ಕೆಲಸವಲ್ಲ ಅದೊಂದು ಸವಾಲಿನ ಕೆಲಸ ಎಂದೆ ಹೇಳಬಹುದು. ಎಷ್ಟೇ ಎಚ್ಚರಿಕೆ ವಹಿಸಿದರೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ ಮುಂತಾದ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ಹರಡುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ಮಳೆಗಾಲ ಶುರುವಾಗಿದೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಅಗತ್ಯ ಮುಂಜಾಗ್ರತೆ ವಹಿಸುವುದು ಅತ್ಯಾಗತ್ಯ. ಮಳೆಗಾಲದಲ್ಲಿ ಅಥವಾ ಹೆಚ್ಚು ಕಸ ಇರುವ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತವೆ.
ಸೊಳ್ಳೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅವಶ್ಯಕ. ಆದರೆ ಅದಕ್ಕಾಗಿ ನಾವು ಎಂದಿಗೂ ನಮಗೆ ಹಾನಿ ಮಾಡುವ ಸೊಳ್ಳೆ ನಿವಾರಕಗಳನ್ನು ಬಳಸಬಾರದು. ಅವು ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ.
ಹಾಗಾಗಿ ಸೊಳ್ಳೆಗಳನ್ನು ಸಾಧ್ಯವಾದಷ್ಟು ನೈಸರ್ಗಿಕವಾಗಿ ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ತೊಡಗುವುದು ಮುಖ್ಯ. ಅಂಗಡಿಗಳಲ್ಲಿ ಸಿಗುವ ವಾಣಿಜ್ಯ ಸೊಳ್ಳೆ ನಿವಾರಕಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ. ಆದರೆ ನೈಸರ್ಗಿಕ ಸೊಳ್ಳೆ ನಿವಾರಕಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಕೆಲವು ನೈಸರ್ಗಿಕ ಸೊಳ್ಳೆ ನಿವಾರಕಗಳನ್ನು ನೋಡೋಣ.
ಹಸುವಿನ ಸಗಣಿ ಹೊಗೆ: ಹಸುವಿನ ಸಗಣಿ ಸುಡುವ ಹೊಗೆಯು ನೊಣಗಳು, ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿಯಾಗಿದೆ. ಇವುಗಳನ್ನು ಒಂದೇ ಬಾರಿ ಸುಟ್ಟರೆ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಹೊಗೆ ಹೊರಸೂಸುತ್ತದೆ.
ಸಿಟ್ರೊನೆಲ್ಲಾ ಎಣ್ಣೆ : ಸಿಟ್ರೊನೆಲ್ಲಾ ಎಣ್ಣೆಯ ವಾಸನೆಗೆ ಸೊಳ್ಳೆಗಳು ಕಾಲ್ಕಿತ್ತುತ್ತದೆ, ಇದಕ್ಕೆ ನೀವು ಸ್ವಲ್ಪ ಸಿಟ್ರೊನೆಲ್ಲಾ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಮೈ ಮೇಲೆ ಹಚ್ಚಿಕೊಳ್ಳಿ, ಇದರಿಂದ ಸೊಳ್ಳೆಗಳು ಕಚ್ಚುವುದಿರಲಿ, ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಸಾಂಬ್ರಾಣಿ: ಸಾಂಬ್ರಾಣಿಯನ್ನು ನಾವು ಮನೆಯಲ್ಲಿ ಬಳಸುವುದು ಸಾಮಾನ್ಯ, ಆದರೆ ಇದು ಸೊಳ್ಳೆಗಳನ್ನು ಓಡಿಸಲು ಬೆಸ್ಟ್ ಪರಿಹಾರ ಎಂದು ನಿಮಗೆ ಗೊತ್ತಾ..? ಹೌದು ಈ ಸಾಂಬ್ರಾಣಿಯನ್ನು ಹಚ್ಚುವುದರಿಂದ ನೀವು ಸೊಳ್ಳೆಗಳನ್ನು ಓಡಿಸಬಹುದು. ಮನೆಯಲ್ಲಿ ಸಾಂಬ್ರಾನಿ ಹಚ್ಚಿ ಇದರ ಹೊಗೆಗೆ ಸೊಳ್ಳೆಗಳು ಮನೆಯೊಳಗೆ ನುಸುಳುವುದಿಲ್ಲ.
ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆ ಸೊಳ್ಳೆಗಳನ್ನು ಹೊಡೆದೋಡಿಸುವಲ್ಲಿ ತುಂಬಾನೇ ಪ್ರಯೋಜನಕಾರಿ. ನೀಲಗಿರಿ ಎಣ್ಣೆಯನ್ನು ಗೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಹಚ್ಚಿಕೊಳ್ಳಿ, ಈ ಎಣ್ಣೆಯ ವಾಸನೆಗೆ ಸೊಳ್ಳೆಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮನೆಮದ್ದುಗಳನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)