ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆಯೇ ಸೇವಿಸಿ !ಜೋತು ಬಿದ್ದ ಹೊಟ್ಟೆ ಚಪ್ಪಟೆಯಾಗುವುದರಲ್ಲಿ ಡೌಟ್ ಬೇಡವೇ ಬೇಡ !

ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. 
 

ಬೆಂಗಳೂರು : ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸೌತೆಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಹೊಂದಿರುತ್ತದೆ. ಇದು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಒಂದು ತಿಂಗಳ ಕಾಲ ನಿತ್ಯ ರಾತ್ರಿ ಸಮಯದಲ್ಲಿ ಸೌತೆಕಾಯಿ ಸೇವಿಸಿದರೆ ದೇಹ ತೂಕ ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. 

2 /7

ಸೌತೆಕಾಯಿಯನ್ನು ಟೊಮೆಟೊ,ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಉಪ್ಪು,ಕಾಳುಮೆಣಸು ಮತ್ತು ನಿಂಬೆ ರಸವನ್ನು ಬೆರೆಸಿ ಸಲಾಡ್ ರೀತಿಯಲ್ಲಿ ಸೇವಿಸಿದರೆ ರುಚಿಕರವಾಗಿಯೂ ಇರುತ್ತದೆ ಜೊತೆಗೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.  

3 /7

ಸೌತೆಕಾಯಿಯನ್ನು ಸಿಪ್ಪೆ ಸಮೇತ ತುರಿದುಕೊಂಡು ಮೊಸರಿನಲ್ಲಿ ಕಲಸಿ ಉಪ್ಪು, ಜೀರಿಗೆ ಪುಡಿ,ಕಾಳುಮೆಣಸಿನ ಪುಡಿ,ಕೊತ್ತಂಬರಿ ಪುಡಿ ಹಾಕಿ  ಸೇವಿಸಿದರೆ ದೇಹವನ್ನು ತಂಪಾಗಿಸುತ್ತದೆ.ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

4 /7

ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಮೊಸರಿನಲ್ಲಿ ಸಂಜೆ ವೇಳೆಗೆ  ಸೇವಿಸಿ.ಇದನ್ನು ಸೇವಿಸಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ.    

5 /7

ಸೌತೆಕಾಯಿಯನ್ನು ಕತ್ತರಿಸಿ ಮತ್ತು ಬಾಳೆಹಣ್ಣು,ಪಾಲಕ್ ಮತ್ತು ಮೊಸರು ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ. ಅಗತ್ಯ ಎನಿಸಿದರೆ ಸ್ವಲ್ಪ ತೆಂಗಿನಕಾಯಿಯನ್ನೂ ಸೇರಿಸಬಹುದು.ಈ ಸ್ಮೂಥಿ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. 

6 /7

ಡಿಟಾಕ್ಸ್ ನೀರನ್ನು ತಯಾರಿಸಲು,ಸೌತೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಅದರಲ್ಲಿ ಪುದೀನಾ,ನಿಂಬೆ ರಸ ಮತ್ತು ಶುಂಠಿ ಸೇರಿಸಿ  ಕುದಿಸಿ ನಂತರ ಕುಡಿಯಿರಿ. ಈ ನೀರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

7 /7

ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.