Rohit Sharma and Virat Kohli: ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ದ ಸರಣಿ ನಡೆದು ಮುಗಿದಿದೆ. ಶ್ರೀಲಂಕಾ ವಿರುದ್ದದ ಮೂರು ಟಿ20 ಪಂದ್ಯಗಳನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದ್ದು, 3 ODI ಗಳ ಪೈಕಿ ಒಂದನ್ನು ಟೈ ಮಾಡಿಕೊಂಡು ಎರಡು ಪಂದ್ಯಗಳಲ್ಲಿ ಸೋತು ಬ್ಯೂ ಬಾಯ್ಸ್ ತವರಿಗೆ ಹಿಂತಿರುಗಿದ್ದಾರೆ.
ಶ್ರೀಲಂಕಾ ಪ್ರವಾಸದ ನಂತರ ಆಟಗಾರರಿಗೆ ಐದು ವಾರಗಲ ಕಾಲ ವಿಶ್ರಾಂತಿ ನೀಡಲಾಗಿದ್ದು, ಆಟಗಾರರು ಈ ಸಮಯವನ್ನು ಸದುಪಯೋಗ ಪಡಿಸಿಕೊಲ್ಳು ನಿರ್ಧರಿಸಿದ್ದಾರೆ. ಸಮಯವನ್ನು ವ್ಯರ್ತ ಮಾಡದೆ, ಆಟಗಾರರು ದೇಶಿಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ಹಾಗೂ ಟೀಂ ಇಂಡಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕೂ ಮುಂಚೆ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಸ್ಟಾರ್ ಆಟಗಾರರು ಸಮಯವನ್ನು ವ್ಯರ್ತ ಮಾಡದೆ, ಸದುಪಯೋಗ ಪಡಿಸಿಕೊಳ್ಳಲು ದೇಶೀಯ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ದುಲೀಪ್ ಟ್ರೋಫಿ ಆಡಲಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದ್ದು. ಈ ಟ್ರೋಫಿಯ ಪಂದ್ಯ ಯಾವಾಗ ಶುರುವಾಗಲಿದೆ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇಂಡಿಯಾ A, ಇಂಡಿಯಾ B, ಇಂಡಿಯಾ C, ಇಂಡಿಯಾ D, ಎಂದು ತಂಡವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು. ಯಾವ ಯಾವ ತಂಡದಲ್ಲಿ ಯಾವ ಯಾವ ಆಟಗಾರರು ಇರಲಿದ್ದಾರೆ ಎನ್ನುವುದನ್ನು ಶೀಘ್ರದಲ್ಲೆ ತೀರ್ಮಾನಿಸಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
ಇದನ್ನೂ ಓದಿ:
ರಾಷ್ಟ್ರೀಯ ಚಾನೆಲ್ ಒಂದರ ವರದಿಯ ಪ್ರಕಾರ ಈ ಟೂರ್ನಿ ಸೆಪ್ಟೆಂಬರ್ 5 ರಿಂದ ಶುರುವಾಗಲಿದ್ದು, ಶುಭಮನ್ ಗಿಲ್, ಕೆ.ಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಈ ಟೂರನಿಯಲ್ಲಿ ಆಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನೂ, ಟಿ 20 ವಿಶ್ವಕಪ್ ಗೆದ್ದ ನಂತರ ವಿಶ್ರಾಂತಿಯಲ್ಲಿರುವ ಬೂಮ್ರಾ ಶ್ರೀಲಂಕಾ ಪ್ರವಾಸದಿಂದ ದೂರ ಉಳಿದಿದ್ದರು, ಇದೀಗ ಬಾಂಗ್ಲದೇಶ ತಂಡದ ವಿರುದ್ಧ ಟೆಸ್ಟ್‌ನಿಂದಲೂ ಬೂಮ್ರಾ ಹೊರಗುಳಿದಿದ್ದು, ಈ ಟೂರ್ನಿಯಲ್ಲಿ ಭಾಗವಹಿಸಿದು ಕೂಡ ಡೌಟ್ ಎಂದೇ ಹೇಲಲಾಗುತ್ತಿದೆ.
ಇನ್ನೂ, ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎಂಟು ವರ್ಷಗಲ ನಂತರ ದೇಶಿಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಟೀಂ ಇಂಡಿಯಾದ ಸ್ಟಾರ್ ಆಟಗಾರರ ಕಾಳಗ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.