ನವದೆಹಲಿ: ಹಿರಿಯ ನಟಿ ಶಬಾನಾ ಅಜ್ಮಿ ಎರಡು ವಾರಗಳ ಕಾಲ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ದಾಖಲಾದ ನಂತರ ಶನಿವಾರ ಮನೆಗೆ ಮರಳಿದರು.
69 ವರ್ಷದ ನಟಿ ಜನವರಿ 18 ರಂದು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್ಪ್ರೆಸ್ನಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರದಂದು ಶಬಾನಾ ಅಜ್ಮಿ ಚೇತರಿಸಿಕೊಂಡಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಬಾನಾ ಅಜ್ಮಿ ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
Thank you all for your prayers and wishes for my https://t.co/A21IxD7Usd back home now Thank you #Tina Ambani and Kokilaben Ambani hospital for the sterling care provided by the doctors team and the nursing staff. Im indebted and grateful🙏 pic.twitter.com/6a1PWsGKnn
— Azmi Shabana (@AzmiShabana) February 1, 2020
ಕಾರು ಅಪಘಾತ ಸಂಭವಿಸಿದಾಗ ಶಬಾನಾ ಅಜ್ಮಿ ಅವರ ಪತಿ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ಕೂಡ ವಾಹನದಲ್ಲಿದ್ದರು, ಆದರೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ರಾಯ್ಗಡ್ನ ಖಲಾಪುರ ಬಳಿ ಶಬಾನಾ ಅಜ್ಮಿಯ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ಆಕೆಯ ಚಾಲಕನ ಮೇಲೆ ದುಷ್ಕೃತ್ಯ ಮತ್ತು ಚಾಲನೆ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ.
We love you! Happy to hear you're better... See you soon and a big hug ❤️😘💞🤗🤗🤗 https://t.co/e7eK6jnCFN
— TheRichaChadha (@RichaChadha) February 1, 2020
ಶಬಾನಾ ಅಜ್ಮಿ ಮನೆಗೆ ಮರಳಿದ ನಂತರ ಹಲವಾರು ಸೆಲೆಬ್ರಿಟಿಗಳು ಟ್ವಿಟ್ಟರ್ ನಲ್ಲಿ ನಟಿ ಅವರನ್ನು ಹೃತ್ಪೂರ್ವಕ ಸಂದೇಶಗಳೊಂದಿಗೆ ಸ್ವಾಗತಿಸಿದರು. ನಟಿ ರಿಚಾ ಚಧಾ ಟ್ವೀಟ್ ಮಾಡಿ 'ನಾವು ನಿನ್ನನ್ನು ಪ್ರೀತಿಸುತ್ತೇವೆ! ನೀವು ಉತ್ತಮವಾಗಿದ್ದೀರಿ ಎಂದು ಕೇಳಲು ಸಂತೋಷವಾಗಿದೆ...ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.