Kargil Vijay Diwas: ʼಕಾರ್ಗಿಲ್ ವಿಜಯ ದಿವಸʼದ ಮಹತ್ವ ಮತ್ತು ಇತಿಹಾಸ ತಿಳಿಯಿರಿ

Kargil Vijay Diwas: ʼಕಾರ್ಗಿಲ್ ವಿಜಯ್ ದಿವಸ್ʼ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಗೌರವಿಸುತ್ತದೆ. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಸ್ಥೈರ್ಯಕ್ಕೆ ಗೌರವವಾಗಿ ಪ್ರತಿವರ್ಷವೂ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

Written by - Puttaraj K Alur | Last Updated : Jul 26, 2024, 11:39 AM IST
  • ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ ದಿವಸʼವನ್ನು ಆಚರಿಸಲಾಗುತ್ತದೆ
  • 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಆಚರಣೆ
  • ಭಾರತೀಯ ಸೈನಿಕರು ತೋರಿದ ಶೌರ್ಯ, ತ್ಯಾಗ ಮತ್ತು ಬಲಿದಾನದ ಬಗ್ಗೆ ಸ್ಮರಣೆ
Kargil Vijay Diwas: ʼಕಾರ್ಗಿಲ್ ವಿಜಯ ದಿವಸʼದ ಮಹತ್ವ ಮತ್ತು ಇತಿಹಾಸ ತಿಳಿಯಿರಿ  title=
ಕಾರ್ಗಿಲ್ ವಿಜಯ ದಿವಸ

Kargil Vijay Diwas: ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ ದಿನʼ ಎಂದು ಕರೆಯಲ್ಪಡುವ ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವು ರಕ್ತಸಿಕ್ತ ಮತ್ತು ಸುದೀರ್ಘ ಸಂಘರ್ಷದ ಉದ್ದಕ್ಕೂ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವುದಾಗಿದೆ.
ಕಾರ್ಗಿಲ್ ವಿಜಯ್ ದಿವಸ್ ಮಹತ್ವ

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಮಾಡಿದ ಸೈನಿಕರ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು ಆಚರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಡೆದ ಈ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನಿ ಪಡೆಗಳು ರಹಸ್ಯವಾಗಿ ಭಾರತದ ಭೂಪ್ರದೇಶಕ್ಕೆ ನುಗ್ಗಿದಾಗ ಮತ್ತು ಪ್ರಮುಖ ಪರ್ವತ ಹೊರಠಾಣೆಗಳ ನಿಯಂತ್ರಣ ತೆಗೆದುಕೊಂಡಾಗ ಸಂಘರ್ಷವು ಭುಗಿಲೆದ್ದಿತು. ಕಷ್ಟಕರವಾದ ಗುಡ್ಡಗಾಡು ಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯು ವೀರಾವೇಶದಿಂದ ಹೋರಾಡಿತು. 

ಇದನ್ನೂ ಓದಿ: ಇಲ್ಲೊಂದು ದೇವಾಲಯ..ಇಲ್ಲಿ ಹವಾಮಾನ ಮುನ್ಸೂಚನೆ ನಿಖರವಾಗಿ 7 ದಿನಗಳ ಮುಂಚೆಯೇ ತಿಳಿಯುತ್ತೆ!!

ಕಾರ್ಗಿಲ್ ಗಡಿ ನಿಯಂತ್ರಣ ರೇಖೆಯ(LC) ಭಾರತದ ಭಾಗದಲ್ಲಿ ಪಾಕಿಸ್ತಾನ ಸೇನೆ ಬೆಂಬಲಿತ ಶಸ್ತ್ರಸಜ್ಜಿತ ಭಯೋತ್ಪಾದಕರ ಅಪ್ರಚೋದಿತ ಒಳನುಗ್ಗುವಿಕೆಯಿಂದ 'ಆಪರೇಷನ್ ವಿಜಯ್' ಆರಂಭವಾಗಿತ್ತು. ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ ಪಾಕಿಸ್ತಾನಿ ಪಡೆಗಳು ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡಿತು. ಜುಲೈ 14, 1999ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ಅವರು ʼಆಪರೇಷನ್ ವಿಜಯ್ʼ ಯಶಸ್ವಿಯಾಗಿದೆ ಎಂದು ಘೋಷಿಸಿದರು. 

ಕಾರ್ಗಿಲ್ ವಿಜಯ್ ದಿವಸ್ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಗೌರವಿಸುತ್ತದೆ. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಸ್ಥೈರ್ಯಕ್ಕೆ ಗೌರವವಾಗಿ ಪ್ರತಿವರ್ಷವೂ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

ಇದನ್ನೂ ಓದಿ: ವಾಯು ರಕ್ಷಣಾ ರೆಜಿಮೆಂಟ್ ಮೊದಲ ಮಹಿಳಾ ಅಧಿಕಾರಿಯಾಗಿ ಕರ್ನಲ್ ಅಂಶು ಜಮ್ವಾಲ್ ನೇಮಕ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News