Actress Roja Viral Video: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅಕ್ರಮ ಎಸಗಿರುವ ಆರೋಪ ಹೊತ್ತಿರುವ ರಾಜಕಾರಣಿ ಹಾಗೂ ಬಹುಭಾಷಾ ತಾರೆ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿ ಜೊತೆಗೆ ಅಸಡ್ಡೆಯಿಂದ ವರ್ತಿಸಿದ್ದಕ್ಕೆ ಟಾಲಿವುಡ್ ನಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿ ಸೇವೆ ಸಲ್ಲಿಸಿದ್ದ ರೋಜಾ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದರು. ತಿರುಪತಿಯ ದರ್ಶನ ಟಿಕೆಟ್ ವಿಷಯದಲ್ಲಿ ಅವರು ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿ: ಈ ಹಾಟ್ ಬ್ಯೂಟಿ ಯಾವುದೇ ಸೂಪರ್ ಮಾಡೆಲ್ ಅಥವಾ ನಟಿಯಲ್ಲ, ಹೊರತಾಗಿ ಐಪಿಎಸ್ ಅಧಿಕಾರಿ ಅಂದ್ರೆ ನೀವು ನಂಬ್ತೀರಾ..?
Original video Roja Caste Discrimination:
While leaders like DyCM @PawanKalyan are trying to close gap with Sanitation workers by with:
“Nenu mi relli kulasthudini”
YCP leaders still in Caste Discrimination,
Remaining SC/ST should realize & leave YCP pic.twitter.com/S7z3cTq0J6— 𝗚𝗹𝗮𝘀𝘀𝗶𝘁 (@LetsGlassIt) July 16, 2024
ಇದೀಗ ದೇವಸ್ಥಾನದಲ್ಲಿ ಸೆಲ್ಫಿ ವೇಳೆ ಅಂತರ ಕಾಯ್ದುಕೊಳ್ಳುವಂತೆ ಸ್ವಚ್ಛತಾ ಸಿಬ್ಬಂದಿಗೆ ಸನ್ನೆ ಮಾಡುವ ಮೂಲಕ ನಟಿ ಅಸಡ್ಡೆಯಿಂದ ವರ್ತಿಸಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ನಟಿ ರೋಜಾ ಭೇಟಿ ನೀಡಿದ್ದರು. ಈ ವೇಳೆ ಅನೇಕ ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ನಟಿ ಬಳಿಗೆ ಬಂದು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುವ ಇಬ್ಬರು ಮಹಿಳಾ ಕಾರ್ಮಿಕರು ನಟಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ನಟಿ ಅವರಿಗೆ ಸನ್ನೆ ಮಾಡುವ ಮೂಲಕ ಹತ್ತಿರ ಬರದಂತೆ ತಡೆದಿದ್ದಾರೆ.
ಇದನ್ನೂ ಓದಿ: ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್
ಮತ ಕೇಳುವಾಗ ಮನೆ ಬಾಗಿಲಿಗೆ ಹೋಗುವ ಇಂತಹ ರಾಜಕಾರಣಿಗಳು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ? ತಮ್ಮ ಸಿನಿಮಾ ನೋಡಿ.. ನೋಡಿ... ಅಂತಾ ಪ್ರತಿಯೊಬ್ಬರಲ್ಲೂ ಬೇಡಿಕೊಳ್ಳುವ ಇವರು ನಾಚಿಕೆ ಇಲ್ಲದವರು, ಸ್ವಚ್ಛತಾ ಸಿಬ್ಬಂದಿ ಜೊತೆಗೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲವೆಂದು ರೋಜಾ ವಿರುದ್ಧ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು ಅನೇಕರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.