ಶಾಕಿಂಗ್‌ ನ್ಯೂಸ್‌...! ಸಿನಿರಂಗಕ್ಕೆ ಗುಡ್‌ ಬೈ ಹೇಳಲು ರೆಡಿಯಾದ ಸ್ಟಾರ್‌ ನಟಿ... ಏಕೆ ಗೊತ್ತೆ?

Dushara Vijayan : 60 ವಯಸ್ಸಾದರೂ ಅಮ್ಮ, ಅತ್ತಿಗೆ, ಅಜ್ಜಿ ಪಾತ್ರ ಮಾಡುತ್ತ ಸಿನಿರಂಗದಲ್ಲಿ ಇರುವವರ ನಡುವೆ ಇಲ್ಲೊಬ್ಬ ನಟಿ 35 ವರ್ಷ ವಯಸ್ಸಾದ ನಂತರ ಚಿತ್ರರಂಗವನ್ನು ಬಿಟ್ಟು ಬೇರೆ ಕೆಲಸ ಮಾಡುವುದಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ.. ಇದರಿಂದ ಅವರ ಅಭಿಮಾನಿಗಳಿಗೆ ದುಃಖ ಉಂಟಾಗಿದೆ.. ಯಾರು ಆ ನಟಿ..? ಅವರ ನಿರ್ಧಾರವೇನು..? ಬನ್ನಿ ತಿಳಿಯೋಣ..
 

1 /8

ದುಷಾರಾ ವಿಜಯನ್ ತಮಿಳು ಚಿತ್ರರಂಗದ ಜನಪ್ರಿಯ ನಟಿ.  

2 /8

ʼಬೋದಿ ಏರಿ ಬುದ್ದಿ ಮಾರಿʼ ಎಂಬ ತಮಿಳು ಸಿನಿಮಾದ ಮೂಲಕ ದುಷಾರಾ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.  

3 /8

ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯದ ಮೂಲಕ ಮೆಚ್ಚುಗೆ ಪಡೆದರು. ನಂತರ ಪಾ ರಂಜಿತ್ ನಿರ್ದೇಶನದ ಸರ್ಪಟ್ ಪರಂಪರೈನಲ್ಲಿ ಆರ್ಯ ಎದುರು ಮರಿಯಮ್ಮ ಪಾತ್ರವನ್ನು ನಿರ್ವಹಿಸಿದರು.‌  

4 /8

ಸರ್ಪಟ್‌ ಪರಂಪರೆಯ ನಂತರ, ಅವರು ಪಾ ರಂಜಿತ್ ಅವರ ನಕ್ಷತ್ರಂ ನಾಗರಗಂತದಲ್ಲಿ ನಟಿಸಿ ಪ್ರಶಂಸೆಗೆ ಪಾತ್ರರಾದರು.   

5 /8

ಧನುಷ್ ನಿರ್ದೇಶನದ 50 ನೇ ಚಿತ್ರ ʼರಾಯನ್‌ʼ ನಲ್ಲಿ ಧನುಷ್ ಅವರ ತಂಗಿಯಾಗಿ ನಟಿಸಿದ್ದಾರೆ ದುಷಾರಾ.  

6 /8

ಈ ಸಿನಿಮಾ ಜುಲೈ 26 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ನಿರತವಾಗಿದೆ.  

7 /8

ನಟಿ ದುಶಾರ ವಿಜಯನ್ ಇತ್ತೀಚೆಗೆ ರಾಯನ್‌ ಚಿತ್ರದ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ "ನನಗೆ 35 ವರ್ಷವಾದಾಗ ನಾನು ಚಿತ್ರರಂಗವನ್ನು ತ್ಯಜಿಸಿ, ಪ್ರಪಂಚ ಸುತ್ತಲು ಹೋಗುತ್ತೇನೆ" ಅಂತ ಹೇಳಿಕೊಂಡಿದ್ದಾರೆ.   

8 /8

ಅಲ್ಲದೇ ಈ ಜಗತ್ತಿನಲ್ಲಿ ತಾವು ಭೇಟಿ ನೀಡದ ಸ್ಥಳಗಳೇ ಇಲ್ಲ ಎನ್ನುವ ರೀತಿಯಲ್ಲಿ ವಿಶ್ವ ಪರ್ಯಟನೆ ಮಾಡುವ ತಮ್ಮ ಬಯಕೆಯನ್ನ ವ್ಯಕ್ತಪಡಿಸಿದರು. ನಟಿ ತುಷಾರಾ ಅವರಿಗೆ ಈಗ 26 ವರ್ಷ.