ಗೆಳೆಯನ ಮಗಳ ಜೊತೆ 63 ವಯಸ್ಸಿನ ಸ್ಟಾರ್ ಹೀರೋ ರೊಮ್ಯಾನ್ಸ್..! ಏನ್‌ ಗುರು ಇದು.. ಫ್ಯಾನ್ಸ್‌ ಶಾಕ್‌

ಸಾಮಾನ್ಯವಾಗಿ ಸ್ಟಾರ್ ಹೀರೋ, ಪರ್ಫೆಕ್ಟ್ ಆನ್-ಸ್ಕ್ರೀನ್ ಕೆಮಿಸ್ಟ್ರಿ ಇರುವ ಹೀರೋಯಿನ್ ಜೊತೆ ಮ್ಯಾಚ್ ಆಗಬಹುದು. ಆದರೆ ಈಗ ಸೀನಿಯರ್ ಹೀರೋಗೆ ಹೀರೋಯಿನ್ ಗಳನ್ನು ಸೆಟ್ ಮಾಡುವುದು ತುಂಬಾ ಕಷ್ಟವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..

Written by - Krishna N K | Last Updated : Jul 6, 2024, 04:59 PM IST
    • ಸೀನಿಯರ್ ಹೀರೋಗೆ ಹೀರೋಯಿನ್ ಗಳನ್ನು ಸೆಟ್ ಮಾಡುವುದು ತುಂಬಾ ಕಷ್ಟ.
    • ಹಿರಿಯ ನಾಯಕರ ಜೊತೆ ನಟಿಸಲು ಹೀರೋಯಿನ್‌ಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ.
    • ಕಿರಿಯ ನಾಯಕಿಯರನ್ನು ಹಾಕಿದರೂ ಸಹ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಔಟ್ ಆಗಲ್ಲ..
ಗೆಳೆಯನ ಮಗಳ ಜೊತೆ 63 ವಯಸ್ಸಿನ ಸ್ಟಾರ್ ಹೀರೋ ರೊಮ್ಯಾನ್ಸ್..! ಏನ್‌ ಗುರು ಇದು.. ಫ್ಯಾನ್ಸ್‌ ಶಾಕ್‌ title=
Aishwarya rajesh

Actor victory venkatesh with Aishwarya : ಈಗ ಸೀನಿಯರ್ ಹೀರೋಗೆ ಹೀರೋಯಿನ್ ಗಳನ್ನು ಸೆಟ್ ಮಾಡುವುದು ತುಂಬಾ ಕಷ್ಟ. ಹಿರಿಯ ನಾಯಕರ ಜೊತೆ ಸಿನಿಮಾ ಮಾಡಲು ಇತ್ತೀಚಿನ ಸ್ಟಾರ್ ಹೀರೋಯಿನ್‌ಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕಿರಿಯ ನಾಯಕಿಯರನ್ನು ಹಾಕಿದರೂ ಸಹ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಔಟ್ ಆಗುವುದಿಲ್ಲ.. 

ಇದರಿಂದಾಗಿ ಸಿನಿಮಾದಲ್ಲಿ ತಮ್ಮ ಪತ್ನಿ ಪಾತ್ರಕ್ಕೆ ತಮಿಳಿನ ನಟಿ ಐಶ್ವರ್ಯಾ ರಾಜೇಶ್ ಅವರನ್ನು ಹಿರಿಯ ನಾಯಕ ವೆಂಕಟೇಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂದಹಾಗೆ ವಿಕ್ಟರಿ ವೇಂಕಟೇಶ್‌ ಅವರ ವಯಸ್ಸು 63, ಐಶ್ವರ್ಯಾ ವಯಸ್ಸು 34..

ಇದನ್ನೂ ಓದಿ:ಐವರು ಪತ್ನಿಯರ ಜೊತೆ ಹನಿಮೂನ್‌ ಮಾಡಿಕೊಂಡ ಸ್ಟಾರ್‌ ನಟ..! ಯಾರದು ಗೊತ್ತೆ..?

ಐಶ್ವರ್ಯಾ ರಾಜೇಶ್ ಮೂಲತಹ ತೆಲುಗು ನಟನ ಮಗಳು. ಅವರ ತಂದೆ ರಾಜೇಶ್ ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಹೆಸರುಗಳಿಸಿದ್ದರು. ಆದರೆ ಅವರ ಕುಟುಂಬ ಚೆನ್ನೈನಲ್ಲಿ ನೆಲೆಸಿರುವುದರಿಂದ.. ಅಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದರು.. ಸಧ್ಯ ಸ್ವಪ್ರಯತ್ನದಿಂದ ಐಶ್ವರ್ಯಾ ಅತ್ಯಂತ ಪ್ರತಿಭಾವಂತ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.. 

ಇದೇ ವೇಳೆ... ವೆಂಕಟೇಶ್ ಮತ್ತು ಅನಿಲ್ ರಾವಿಪುಡಿ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದಲ್ಲಿ ವೆಂಕಟೇಶ್ ಪತ್ನಿಯಾಗಿ ಐಶ್ವರ್ಯಾ ರಾಜೇಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ಅಲ್ಲದೆ, ಅವರ ಗೆಳತಿಯ ಪಾತ್ರದಲ್ಲಿ ಮೀನಾಕ್ಷಿ ಚೌಧರಿ ನಟಿಸಲಿದ್ದಾರೆ. ಐಶ್ವರ್ಯಾ ರಾಜೇಶ್ ಅವರ ತಂದೆ ರಾಜೇಶ್ ಮತ್ತು ವೆಂಕಟೇಶ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಆಕಸ್ಮಿಕ ಘಟನೆ, ದರ್ಶನ್ ಒಳ್ಳೆ ವ್ಯಕ್ತಿ : ಬಿಸಿ ಪಾಟೀಲ್‌

ಈ ನಡುವೆ ಹೊಸ ಸಿನಿಮಾದಲ್ಲಿ ಗೆಳೆಯನ ಮಗಳ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ನೆಟ್ಟಿಗರು ತಮಾಷೆಯಾಗಿ ಮಾತನಾಡುತ್ತಿದ್ದಾರೆ. ಇದುವರೆಗೆ ಅನಿಲ್ ರವಿಪುಡಿ ಜೊತೆಯಲ್ಲಿ ಮಾಡಿದ ಎಫ್2 ಮತ್ತು ಎಫ್3 ಸಿನಿಮಾಗಳು ಒಳ್ಳೆಯ ಹಿಟ್ ಆಗಿದ್ದವು. ಈಗ ಈ ಕಾಂಬಿನೇಷನ್‌ನಲ್ಲಿ ಮೂರನೇ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ..

ದಿಲ್ ರಾಜು ನಿರ್ಮಾಣದ ಈ ಚಿತ್ರವನ್ನು ಮುಂದಿನ ವರ್ಷ ಸಂಕ್ರಾಂತಿಯಂದು ಯಾವುದೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ವರ್ಷ, ವೆಂಕಟೇಶ್ ಅಭಿನಯದ ಸೈಂಧವ್ ಚಿತ್ರವು ಡಿಸಾಸ್ಟರ್ ಆಗಿತ್ತು. ಮುಂಬರುವ ಸಿನಿಮಾದ ಮೇಲೆ ವಿಕ್ಟರ್‌ ಅಭಿಮಾನಿಗಳ ನಿರೀಕ್ಷೆ ಇದೆ.. ಕಾಯ್ದು ನೋಡೋಣ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News