ಈ ಹಣ್ಣುಗಳು ನಮ್ಮ ದೇಹಕ್ಕೆ ಸಂಜೀವಿನಿಯೇ ಆದರೂ ಇವುಗಳ ಬೀಜ ಮಾತ್ರ ವಿಷ ! ತಮಾಷೆಗೂ ಸೇವಿಸಬೇಡಿ

Fruits with seeds: ಈ ಬೀಜಗಳು ಕೆಲವು ವಿಷಕಾರಿ ಅಂಶಗಳನ್ನು ಹೊಂದಿರಬಹುದು ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವುದು ಆಹಾರ ತಜ್ಞರ ಮಾತು. 

Written by - Ranjitha R K | Last Updated : Jul 1, 2024, 02:18 PM IST
  • ಉತ್ತಮ ಆರೋಗ್ಯಕ್ಕಾಗಿ, ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವಿಸುವುದು ಮುಖ್ಯ.
  • ತಪ್ಪಾದ ರೀತಿಯಲ್ಲಿ ಆಹಾರ ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿ
  • ಕೆಲವು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ಈ ಹಣ್ಣುಗಳು ನಮ್ಮ ದೇಹಕ್ಕೆ ಸಂಜೀವಿನಿಯೇ ಆದರೂ ಇವುಗಳ ಬೀಜ ಮಾತ್ರ ವಿಷ ! ತಮಾಷೆಗೂ ಸೇವಿಸಬೇಡಿ title=

Fruits with seeds : ಉತ್ತಮ ಆರೋಗ್ಯಕ್ಕಾಗಿ, ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವಿಸುವುದು ಮುಖ್ಯ.ತಪ್ಪಾದ ರೀತಿಯಲ್ಲಿ ಆಹಾರ ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.ಇನ್ನು ಕೆಲವು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.ಆದರೆ  ಅವುಗಳ ಬೀಜ ಮಾತ್ರ ಆರೋಗ್ಯಕ್ಕೆ ಹಾನಿಕಾರಕ.ಈ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾಕೆಂದರೆ, ಈ ಬೀಜಗಳು ಕೆಲವು ವಿಷಕಾರಿ ಅಂಶಗಳನ್ನು ಹೊಂದಿರಬಹುದು ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವುದು ಆಹಾರ ತಜ್ಞರ ಮಾತು. 

ಈ ಹಣ್ಣುಗಳ ಬೀಜ ಹಾನಿಕಾರಕ : 
ಆಪಲ್ :

ದಿನಕ್ಕೊಂದು ಸೇಬು ತಿನ್ನುತ್ತಾ ಬಂದರೆ ವೈದ್ಯರ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲವಂತೆ. ಆದರೆ ಅದೇ ಸೇಬಿನ ಬೀಜವನ್ನು ಸೇವಿಸಿದರೆ ವೈದ್ಯರ ಬಳಿ ಖಂಡಿತಾ ತೆರಳಲೇ ಬೇಕಾಗುತ್ತದೆ.ಸೇಬಿನ ಬೀಜಗಳು ಸೈನೈಡ್ ಎಂಬ ವಿಷಕಾರಿ ಸಂಯುಕ್ತವನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಸೇಬಿನ ಬೀಜಗಳನ್ನು ಸೇವಿಸುವುದರಿಂದ ಸೈನೈಡ್ ವಿಷ ಉಂಟಾಗುತ್ತದೆ.ಸೇಬಿನ ಬೀಜಗಳನ್ನು ಸೇವಿಸುವುದರಿಂದ ತಲೆನೋವು,ತಲೆತಿರುಗುವಿಕೆ,ವಾಕರಿಕೆ,ವಾಂತಿ, ಕಾಣಿಸಿಕೊಳ್ಳುತ್ತದೆ.ತೀವ್ರತರವಾದ ಪ್ರಕರಣಗಳಲ್ಲಿ ಸಾವು ಕೂಡಾ ಸಂಭವಿಸಬಹುದು. 

ಇದನ್ನೂ ಓದಿ : ಈರುಳ್ಳಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು, ಬ್ಲಡ್‌ ಶುಗರ್‌ ಎಷ್ಟೇ ಹೆಚ್ಚಿದ್ದರೂ ತಕ್ಷಣ ಕಡಿಮೆಯಾಗುತ್ತದೆ !

ಪೀಚ್ : 
ಪೀಚ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಆದರೆ, ಅದರ ಬೀಜಗಳು ನಿಮಗೆ ಹಾನಿ ಮಾಡುತ್ತದೆ.ಪೀಚ್ ಬೀಜಗಳು ಅಮಿಗ್ಡಾಲಿನ್ ಅನ್ನು ಹೊಂದಿರುತ್ತವೆ. ಇದು ಸೈನೈಡ್ ನ ಒಂದು ರೂಪವಾಗಿದೆ.ಇದರ ಬೀಜಗಳನ್ನು ಸೇವಿಸುವುದರಿಂದ ವಿಷ ಉಂಟಾಗಬಹುದು ಮತ್ತು ತೊಂದರೆಗೆ ಸಿಲುಕಬಹುದು. 

ಏಪ್ರಿಕಾಟ್ :
ಏಪ್ರಿಕಾಟ್ ತುಂಬಾ ರುಚಿಕರ ಹಣ್ಣು. ಆದರೆ ಇದರ ಬೀಜ ನಿಮಗೆ ಹಾನಿಕಾರಕ. ಏಪ್ರಿಕಾಟ್ ಬೀಜಗಳು ಅಮಿಗ್ಡಾಲಿನ್ ಅನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ಸೈನೈಡ್ ವಿಷ ಉಂಟಾಗುತ್ತದೆ.ಇದನ್ನು ಸೇವಿಸಿದರೆ ವಾಕರಿಕೆ,ವಾಂತಿ,ತಲೆತಿರುಗುವಿಕೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು . 

ಚೆರ್ರಿ ಹಣ್ಣು : 
ಚೆರ್ರಿ ನೋಡಲು ಎಷ್ಟು ಸುಂದರವಾಗಿದೆಯೋ ಇದರ ರುಚಿ ಕೂಡಾ ಅಷ್ಟೇ ಸೊಗಸಾಗಿದೆ.ಆದರೆ ಚೆರ್ರಿ ಬೀಜಗಳು ಸೈನೋಜೆನಿಕ್ ಗ್ಲೈಕೋಸೈಡ್‌ಗಳನ್ನು ಹೊಂದಿರುತ್ತವೆ.ಇದು ಸೈನೈಡ್ ವಿಷವನ್ನು ಉಂಟುಮಾಡುತ್ತದೆ.ಇದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಚೆರ್ರಿ ಬೀಜಗಳನ್ನು ತಪ್ಪಿಯೂ ಸೇವಿಸಬೇಡಿ. 

ಇದನ್ನೂ ಓದಿ : ಥೈರಾಯ್ಡ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಆಹಾರ !ದಿನಕ್ಕೊಮ್ಮೆ ಸೇವಿಸಿದರೆ ಸಾಕು

ಪಿಯರ್ : 
ಪಿಯರ್ಸ್ ಅಥವಾ ನಾಶ್ ಪತಿಯನ್ನು ಅನೇಕ ಜನರು ಇಷ್ಟಪಡುತ್ತಾರೆ. ಈ ಹಣ್ಣಿನ ಬೀಜ ಕೂಡಾ ಹಾನಿಕಾರಕ.ಇದು ಸೈನೈಡ್ ಸಂಯುಕ್ತಗಳನ್ನು ಹೊಂದಿರುತ್ತವೆ.ದೊಡ್ಡ ಪ್ರಮಾಣದಲ್ಲಿ ಪಿಯರ್ಸ್ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. 

(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News