ಚಿಕ್ಕೋಡಿ: ಪ್ರಮುಖವಾಗಿ ಲಿಂಗಾಯತ ಸಮುದಾಯ ರಾಜ್ಯದಲ್ಲಿ ಶಕ್ತಿಶಾಲಿಯಾಗಿದ್ದು, ಈಗಾಗಲೇ ಈ ಸಮುದಾಯವನ್ನು ಕಾಂಗ್ರೆಸ್ ಪಕ್ಕದಲ್ಲಿ ಕಡೆಗಣಿಸಲಾಗುತ್ತದೆ ಎಂಬ ಆರೋಪಿಗಳು ಆಗಾಗಾ ಕೇಳಿ ಬಂದಿದ್ದವು ಈ ಹಿನ್ನೆಲೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನದ ಬದಲು ಡಿಕೆ ಶಿವಕುಮಾರ್ ಕೆಪಿಸಿಸಿ ಪಟ್ಟ ನೀಡಲು ನಿರ್ಧರಿಸಿ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆಯಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸವದಿಯಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಿದ್ದರೂ, ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಮಾತು ಅವರ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದಲ್ಲಿ ಹಲವು ತಿಂಗಳುಗಳಿಂದ ಚರ್ಚೆ ಯಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ರಾಜಕಾರಣದಲ್ಲಿ ಸವದಿಯೊಂದಿಗೆ ಮುಚ್ಚಿದ ಕೆಂಡದಂತ ಬಾಂಧವ್ಯ ಇಟ್ಟುಕೊಂಡಿರುವ ಜಾರಕಿಹೊಳಿ ಬ್ರದರ್ಸ್ ಮಣಿಸಲು ಸವದಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಲು ಡಿಕೆ ಶಿವಕುಮಾರ್ ಒಲವು ತೋರಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ-ಸಿದ್ದರಾಮಯ್ಯ ನೇತೃತ್ವದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ
ಕಮಲ ಇಳಿಸಿ ಕೈ ಹಿಡಿದಾಗಿನಿಂದಲೂ ಲಕ್ಷ್ಮಣ ಸವದಿ ಸಿಎಂ ಸಿದ್ದರಾಮಯ್ಯರ ವಿರೋಧಿ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಶಾಸಕ ಸವದಿ ಕುರಿತು ಉತ್ತಮ ಅಭಿಪ್ರಾಯ ಹಾಗೂ ಆಪ್ತ ಬಾಂಧವ್ಯವನ್ನು ಇಟ್ಟುಕೊಂಡಿರುವ ಡಿಕೆ ಬ್ರದರ್ಸ್ ಜಾರಕಿಹೊಳಿ ಬ್ರದರ್ಸ್ ಗೆ ಟಕ್ಕರ್ ನೀಡಲು ಸವದಿ ಕಾರ್ಡ್ ಪ್ಲೇ ಮಾಡುವ ಸಿಎಂ ಬಣಕ್ಕೆ ಶಾಕ್ ನೀಡ್ತಾರಾ? ಎನ್ನುವ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಬಹುತೇಕ ಲಿಂಗಾಯತ ಶಾಸಕರ ಬೆಂಬಲ ಹೊಂದಿರುವ ಸವದಿ ಲಿಂಗಾಯತ ನಾಯಕರಲ್ಲಿ ಹಿರಿಯರೆನಿಸಿಕೊಂಡಿದ್ದಾರೆ. ಸವದಿ ಮಾತಿನಂತೆಯೇ ಮುನ್ನಡೆಯುವ ನಿಷ್ಠ ಶಾಸಕರ ತಂಡವು ಬೆನ್ನಿಗಿದೆ, ಹೀಗಾಗಿ ಪಕ್ಷದಲ್ಲಿ ಮುಖಂಡರು, ಶಾಸಕರ ಸಮನ್ವಯತೆ ಸಾಧಿಸುವಲ್ಲಿ ಸವದಿ ಹಿಂದೆ ಬೀಳುವುದಿಲ್ಲ. ಇದರಿಂದ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಲಾಭವಾಗಲಿದೆ ಎಂಬ ಮಾತೂ ಸಹ ಒಪ್ಪುವಂತಹದ್ದಾಗಿದೆ.
ಇದನ್ನೂ ಓದಿ-ವಾಲ್ಮೀಕಿ ಅಭಿವೃದ್ಧಿ ನಿಮಗ ಹಗರಣ : ಎಸ್ಐಟಿ ತನಿಖೆಯಲ್ಲಿ ಸ್ಪೋಟಕ ವಿಚಾರ ಬಯಲು
ಸಂಘಟನೆಯಲ್ಲಿ ಅನುಭವ, ಜನರೊಂದಿಗೆ ಆತ್ಮೀಯ ಒಡನಾಟ ಹಾಗೂ ಪಕ್ಷ ನಿಷ್ಠೆ ಸೇರಿದಂತೆ ಯಾವುದೇ ಸಮಯದಲ್ಲೂ ಸಹ ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ಬದ್ದರಾಗಿರುವ ನಾಯಕರಾಗಿರುವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುವ ಲಕ್ಷ್ಮಣ ಸವದಿಗೆ ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ ದೊರೆತಾಗ ಮಾತ್ರ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಲೆಕ್ಕಾಚಾರವಾಗಿದೆ.'ಶತ್ರುವಿನ ಶತ್ರು ಮಿತ್ರ' ಎಂಬಂತೆ ಜಾರಕಿಹೊಳಿ ಹಾಗೂ ಡಿಕೆ ಬ್ರದರ್ಸ್ ನಡುವಿನ ಮುಸುಕಿನ ಗುದ್ದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.
ಕೈ ಪಾಳಯದಲ್ಲಿನ ಡಿಸಿಎಂ ದಂಗಲ್ ಮತ್ತಷ್ಟು ಅಲ್ಲೋಲ! ಕಲ್ಲೋಲಕ್ಕೆ! ಕಾರಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವಾಮೀಜಿಯೊಬ್ಬರು ಬಹಿರಂಗವಾಗಿಯೇ ಸಿಎಂ ಸ್ಥಾನವನ್ನು ತ್ಯಾಗ ಮಾಡುವಂತೆ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಕೆಪಿಸಿಸಿ ಪಟ್ಟವನ್ನು ಬೇರೆಯವರಿಗೆ ನೀಡಿ ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒತ್ತಾಯಿಸಿರುವುದು ಸಹ ಈಗ ರಾಜಕೀಯ ವಲಯದಲ್ಲಿ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ