Fruits not eat at night : ಪ್ರತಿದಿನ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಆದರೆ ಕೆಲವೊಂದಿಷ್ಟು ಹಣ್ಣುಗಳನ್ನು ತಿನ್ನಲು ನಿರ್ದಿಷ್ಟ ಸಮಯವಿದೆ. ಇಲ್ಲದಿದ್ದರೆ ಅವುಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಅಲ್ಲದೆ, ಈ ಕೆಳಗೆ ನೀಡಿರುವ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ರಾತ್ರಿ ಮಲಗುವ ಮುನ್ನ ತಿನ್ನಬೇಡಿ..
Best time to eat fruits : ಹಣ್ಣುಗಳನ್ನು ತಿನ್ನಲು ಒಂದು ಸಮಯವಿರುತ್ತದೆ.. ಯಾವಾಗೆಂದರೆ ಆವಾಗ ಹಣ್ಣುಗಳನ್ನು ಸೇವಿಸುವಂತಿಲ್ಲ.. ಒಂದು ವೇಳೆ ತಿಂದರೆ, ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ.. ಕೆಲವು ಹಣ್ಣುಗಳು ರಾತ್ರಿ ಮಲಗುವ ಮುನ್ನ ತಿನ್ನುವುದು ಹಾನಿಕಾರಕ ಅಂತ ಹೇಳಲಾಗುತ್ತದೆ.. ಈ ಕೆಳಗೆ ನೀಡಿರುವ ಹಣ್ಣುಗಳನ್ನು ನೀವು ಮಲಗುವ ಮುನ್ನ ತಿನ್ನುತ್ತಿದ್ದರೆ, ಇಂದಿನಿಂದ ನಿಲ್ಲಿಸಿ.. ಆ ಹಣ್ಣುಗಳು ಯಾವುವು ಗೊತ್ತಾ..
ದ್ರಾಕ್ಷಿ ಆರೋಗ್ಯಕ್ಕೆ ಒಳ್ಳೆಯದು.. ಆದರೆ ರಾತ್ರಿ ಮಲಗುವ ಮುನ್ನ ಈ ಹಣ್ಣನ್ನು ತಿನ್ನುವುದು ಹಾನಿಕಾರಕ. ದ್ರಾಕ್ಷಿಯಲ್ಲಿ ಸಿಟ್ರಿಕ್ ಇದೆ.. ಇದರಿಂದಾಗಿ ಎದೆಯುರಿ ಉಂಟಾಗುವ ಸಾಧ್ಯತೆ ಹೆಚ್ಚು. ಅದೇ ಸಮಯದಲ್ಲಿ, ಇದು ರಕ್ತದಲ್ಲಿನ ಸಕ್ಕರೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ..
ರಾತ್ರಿ ಮಲಗುವ ಮುನ್ನ ಕಲ್ಲಂಗಡಿ ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ರಾತ್ರಿಯಲ್ಲಿ ಕಲ್ಲಂಗಡಿ ತಿನ್ನುವುದು ಹೆಚ್ಚಿನ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಇದರಿಂದ ರಾತ್ರಿ ನಿದ್ರೆಗೆ ಭಂಗ ಬರುವ ಸಾಧ್ಯತೆ ಇರುತ್ತದೆ. ಸರಿಯಾಗಿ ನಿದ್ದೆಯಾಗಲಿಲ್ಲ ಅಂದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ.
ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ ದೇಹಕ್ಕೆ ಒಳ್ಳೆಯದು. ಆದರೆ ರಾತ್ರಿಯಲ್ಲಿ ತಿನ್ನುವುದು ಹಾನಿಕಾರಕ. ರಾತ್ರಿ ಮಲಗುವ ಮುನ್ನ ಕಿತ್ತಳೆ ತಿನ್ನುವುದರಿಂದ ಅಸ್ವಸ್ಥತೆ ಉಂಟಾಗುತ್ತದೆ. ಇದು ಹೊಟ್ಟೆ ನೋವನ್ನು ತರುವ ಸಾಧ್ಯತೆ ಇದೆ..
ಪೇರಲದಲ್ಲಿ ನಾರಿನಂಶ ಅಧಿಕವಾಗಿದ್ದು, ಇದನ್ನು ತಿಂದರೆ ತೂಕ ಕಡಿಮೆಯಾಗಬಹುದು.. ಆದರೆ ರಾತ್ರಿ ಮಲಗುವ ಮುನ್ನ ಈ ಹಣ್ಣನ್ನು ತಿನ್ನುವುದು ತುಂಬಾ ಹಾನಿಕಾರಕ. ವಾಸ್ತವವಾಗಿ, ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ, ಇದು ರಾತ್ರಿಯಲ್ಲಿ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ..
ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ಗಳು ದೊರೆಯುತ್ತವೆ. ತಜ್ಞರ ಪ್ರಕಾರ, ಒಂದು ಬಾಳೆಹಣ್ಣು 150 ಕ್ಯಾಲೋರಿಗಳನ್ನು ಮತ್ತು 37.5 ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಆದರೆ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಬೊಜ್ಜು ಉಂಟಾಗಬಹುದು..