ನವದೆಹಲಿ: ಎಚ್‌ಡಿಎಫ್‌ಸಿ 2020 ರ ಹೊಸ ವರ್ಷದಂದು ಗೃಹ ಸಾಲ ಮತ್ತು ಸಾಲ ಹೊಂದಿರುವವರಿಗೆ ಉಡುಗೊರೆಯನ್ನು ನೀಡಿದೆ. ಗೃಹ ಸಾಲ ಕಂಪನಿ ಎಚ್‌ಡಿಎಫ್‌ಸಿ ಲಿಮಿಟೆಡ್ ತನ್ನ ಬಡ್ಡಿದರಗಳಲ್ಲಿ ಶೇಕಡಾ 0.05 ರಷ್ಟು ಕಡಿತವನ್ನು ಘೋಷಿಸಿದೆ. ಬ್ಯಾಂಕಿನ ಈ ನಿರ್ಧಾರವು ಗೃಹ ಸಾಲ ತೆಗೆದುಕೊಳ್ಳುವ ಹೊಸ ಮತ್ತು ಹಳೆಯ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ತನ್ನ ಚಿಲ್ಲರೆ ವಸತಿ ಸಾಲದ ಮೇಲಿನ ಪ್ರಮುಖ ಬಡ್ಡಿದರವನ್ನು (ಆರ್‌ಪಿಎಲ್‌ಆರ್) ಶೇಕಡಾ 0.05 ರಷ್ಟು ಕಡಿಮೆಗೊಳಿಸಿದೆ ಎಂದು ಹೇಳಿಕೆ ನೀಡಿದೆ. ಈ ಪರಿಷ್ಕೃತ ದರ ಜನವರಿ 6 ರಿಂದ ಅನ್ವಯವಾಗುತ್ತದೆ. ಆರ್‌ಪಿಎಲ್‌ಆರ್ ಆಧರಿಸಿ ಬ್ಯಾಂಕ್ ತನ್ನ ಗೃಹ ಸಾಲದ ಮೇಲಿನ ವೇರಿಯಬಲ್ ದರವನ್ನು ನಿರ್ಧರಿಸುತ್ತದೆ.
ಜನವರಿ 6 ರಿಂದ ಗೃಹ ಸಾಲಗಳಿಗೆ ಪರಿಣಾಮಕಾರಿ ದರಗಳು…
(ಮಹಿಳೆಯರಿಗಾಗಿ)
- 30 ಲಕ್ಷ ರೂ.ವರೆಗೆ - 8.05%
- 30 ರಿಂದ 75 ಲಕ್ಷ ರೂ. - 8.30%
- 75 ಲಕ್ಷಕ್ಕಿಂತ ಹೆಚ್ಚು - 8.40%
ಈ ದರಗಳು ಪುರುಷರಿಗೆ 5 ಬೇಸಿಸ್ ಪಾಯಿಂಟ್‌ಗಳು ಹೆಚ್ಚು. ಈ ಎಲ್ಲಾ ದರಗಳು ಸಂಬಳ ಪಡೆಯುವ ವರ್ಗಕ್ಕೆ ಲಾಭದಾಯಕವಾಗಿದೆ.
ಇದಕ್ಕೂ ಮೊದಲು ಎಸ್‌ಬಿಐ ಬಾಹ್ಯ ಮಾನದಂಡದ ಆಧಾರದ ಮೇಲೆ ತನ್ನ ಬಡ್ಡಿದರವನ್ನು ಜನವರಿ 1 ರಿಂದ ಶೇ 8.05 ರಿಂದ 7.80 ಕ್ಕೆ ಇಳಿಸಿದೆ.