Vitamin B12 Deficiency : ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ವಿಟಮಿನ್. ಹಾಗಾಗಿ ದೇಹದಲ್ಲಿ ಈ ವಿಟಮಿನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ವಿಟಮಿನ್ ಬಿ 12 ದೇಹದಲ್ಲಿ ಹಾಗೆಯೇ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ಬಿ 12 ಉತ್ಪತ್ತಿಯಾಗಬೇಕಾದರೆ ಕೆಲವೊಂದು ವಸ್ತುಗಳನ್ನು ಸೇವಿಸಬೇಕು.ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್ ಬಿ 12 ಕೊರತೆಯಿದ್ದರೆ ಈ ಆಹಾರಗಳನ್ನು ಸೇವಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ಸರಿದೂಗಿಸಬಹುದು.
ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ಈ ಆಹಾರ ವಸ್ತುಗಳನ್ನು ಸೇವಿಸಿ :
ಮಾಂಸ :
ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ.ಪ್ರತಿದಿನ ಮಾಂಸವನ್ನು ಸೇವಿಸಿದರೆ, ದೇಹಕ್ಕೆ ವಿಟಮಿನ್ ಬಿ 12 ಹೇರಳವಾಗಿ ಸಿಗುತ್ತದೆ. ಇದರೊಂದಿಗೆ ನಿಮ್ಮ ದೇಹದಲ್ಲಿನ ಅನೇಕ ವಸ್ತುಗಳ ಕೊರತೆಯೂ ದೂರವಾಗುತ್ತದೆ.
ಇದನ್ನೂ ಓದಿ : ಮೈ ಮೇಲೆ ಈ ಲಕ್ಷಣಗಳು ಕಾಣಿಸಿಕೊಂಡಿದೆಯಾ ? ಹಾಗಿದ್ದರೆ ಖಂಡಿತವಾಗಿಯೂ ಶುಗರ್ ಹೆಚ್ಚಾಗಿದೆ ಎಂದರ್ಥ
ಟ್ಯೂನ ಮೀನು :
ಟ್ಯೂನ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ.ಈ ಮೀನಿನಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ.ಆದ್ದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಬಿ12 ಕೊರತೆ ನಿವಾರಣೆಯಾಗುತ್ತದೆ.
ಹಾಲು ಮತ್ತು ಡೈರಿ ಉತ್ಪನ್ನಗಳು :
ಹಾಲು ಮತ್ತು ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಬೆಣ್ಣೆ, ಪನೀರ್ ಇವುಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಅನೇಕ ಜೀವಸತ್ವಗಳಿರುತ್ತವೆ.ಆದ್ದರಿಂದ ಮೀನು ಮಾಂಸ ತಿನ್ನದೇ ಇರುವವರು ಪ್ರತಿದಿನ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು.
ಇದನ್ನೂ ಓದಿ : Health Tips: ಫಾಸ್ಟ್ಫುಡ್ನಲ್ಲಿ ಬಳಸುವ ಸೈಲೆಂಟ್ ಕಿಲ್ಲರ್ ʼಅಜಿನೊಮೊಟೊʼ ಬಗ್ಗೆ ಎಚ್ಚರ!
ಮೊಟ್ಟೆ :
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಾಡುತ್ತಿದ್ದರೆ ಪ್ರತಿದಿನ ಮೊಟ್ಟೆ ಸೇವಿಸಬೇಕು. ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.