ಚಿರಂಜೀವಿ ಪತ್ನಿ ಪವನ್ ಕಲ್ಯಾಣ್‌ಗೆ ಕೊಟ್ಟ ಪೆನ್ನಿನ ಬೆಲೆ ಎಷ್ಟು ಗೊತ್ತೆ..? ಮನೆ ಕಟ್ಟಬಹುದು..

Pawan Kalyan Pen price : ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಜನಸೇನೆಯ ಪವನ್ ಕಲ್ಯಾಣ್ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿರುವ ಪವನ್ ಅವರಿಗೆ ಚಿರು ಪತ್ನಿ, ಅತ್ತಿಗೆ ಸುರೇಖಾ ಅವರು ಪೆನ್ನು ಉಡುಗೊರೆಯಾಗಿ ನೀಡಿದರು. ಇದೀಗ ಈ ಪೆನ್ನ ಬೆಲೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

Written by - Krishna N K | Last Updated : Jun 16, 2024, 06:13 PM IST
    • ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಜನಸೇನೆ ಪಕ್ಷದ ಪವನ್ ಕಲ್ಯಾಣ್ ಅಧಿಕಾರ ಸ್ವೀಕಾರ
    • ಪವನ್ ಅವರಿಗೆ ಚಿರು ಪತ್ನಿ, ಅತ್ತಿಗೆ ಸುರೇಖಾ ಅವರು ಪೆನ್ನು ಉಡುಗೊರೆಯಾಗಿ ನೀಡಿದ್ದಾರೆ.
    • ಈ ಪೆನ್ನಿನ ಬೆಲೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.
ಚಿರಂಜೀವಿ ಪತ್ನಿ ಪವನ್ ಕಲ್ಯಾಣ್‌ಗೆ ಕೊಟ್ಟ ಪೆನ್ನಿನ ಬೆಲೆ ಎಷ್ಟು ಗೊತ್ತೆ..? ಮನೆ ಕಟ್ಟಬಹುದು.. title=

DCM Pawan Kalyan : 2009 ರಿಂದ ಪವನ್ ಕಲ್ಯಾಣ್ ಕಾಯುತ್ತಿದ್ದ ಆ ಸುದೀನ ಕೊನೆಗೆ ಬಂದಿದೆ. ಪವನ್ ಕಲ್ಯಾಣ್ ಚಿರಂಜೀವಿಯವರ ಪ್ರಜಾರಾಜ್ಯ ಪಾರ್ಟಿ ರಾಜ್ಯ ಯುವ ಸಂಘಟನೆ ಮುಖ್ಯಸ್ಥರಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ, ಚಿರಂಜೀವಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಿದ ನಂತರ, 2014 ರಲ್ಲಿ, ಅಣ್ಣಾ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಪವನ್ ಕಲ್ಯಾಣ್ ತಮ್ಮದೇ ಆದ ಜನಸೇನಾ ಪಕ್ಷವನ್ನು ಸ್ಥಾಪಿಸಿದರು.

ಅಂದಿನ ಚುನಾವಣೆಯಲ್ಲಿ ಅವರು ತೆಲುಗು ದೇಶಂ ಮತ್ತು ಬಿಜೆಪಿಯ ಮೈತ್ರಿಯನ್ನು ಬೆಂಬಲಿಸಿದರು. ಆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸ್ಪರ್ಧಿಸಿರಲಿಲ್ಲ. 2019 ರಲ್ಲಿ ಅವರು ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷಗಳನ್ನು ಬಿಟ್ಟು ಬಿಎಸ್ಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಚುನಾವಣಾ ಕಣಕ್ಕೆ ಪ್ರವೇಶಿಸಿದರು. ಆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಭೀಮಾವರಂ ಮತ್ತು ಗಜುವಾಕದಿಂದ ಸ್ಪರ್ಧಿಸಿ, ಸೋಲು ಅನುಭವಿಸಿದರು. 

ಇದನ್ನೂ ಓದಿ:ಸೈಫ್-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದವನು ಇಂದು ಸ್ಟಾರ್ ನಟ! ಆತ ಬೇರಾರು ಅಲ್ಲ…

2024ರಲ್ಲಿ ವೈಸಿಪಿ ಮುಖ್ಯಸ್ಥ ಜಗನ್ ಅವರನ್ನು ಕೆಳಗಿಳಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದು ಇದೀಗ ಗೆಲುವಿನ ನಗೆ ಬೀರಿದ್ದಾರೆ. ಅಂದುಕೊಂಡಂತೆ ಎಪಿ ಚುನಾವಣೆಯಲ್ಲಿ ಮೈತ್ರಿ ಸಂಚಲನ ಮೂಡಿಸಿದೆ. ವಿಶೇಷ ಅಂದ್ರೆ, ಜನಸೇನೆಯಿಂದ ಸ್ಪರ್ಧಿಸಿದ ಎಲ್ಲಾ ಸ್ಪರ್ಧಿಗಳು ಗೆಲುವು ಕಂಡಿದ್ದಾರೆ.

ಸಧ್ಯ ಪವನ್ ಕಲ್ಯಾಣ್ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಪಂಚಾಯತ್ ರಾಜ್, ಪರಿಸರ ಮತ್ತು ಪ್ರವಾಸೋದ್ಯಮ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅವರಿಗೆ ಸಚಿವರಾಗಿ ಸಹಿ ಹಾಕಲು ಅತ್ತಿಗೆ ಸುರೇಖಾ ಪೆನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪೆನ್ ಡಿಸ್ನಿ ಆವೃತ್ತಿಯ ಪೆನ್.. ಇದರ ಬೆಲೆ 2 ಲಕ್ಷ 53 ಸಾವಿರಕ್ಕೂ ಹೆಚ್ಚು ಎಂದು ವರದಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News