ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ

ರಾಮಲೀಲಾ ಮೈದಾನಕ್ಕೆ ಹೋಗುವ ಎಲ್ಲ ಮಾರ್ಗಗಳ ಮೇಲೆ ಸಿಸಿಟಿವಿಗಳ ಮೂಲಕ ತೀವ್ರ ನಿಗಾ ವಹಿಸಲಾಗುತ್ತಿದೆ. ಮೈದಾನದ ಹತ್ತಿರವಿರುವ ಕಟ್ಟಡಗಳ ಮೇಲೆಯೂ ಕೂಡ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ.

Written by - Nitin Tabib | Last Updated : Dec 22, 2019, 10:40 AM IST
ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ title=

ನವದೆಹಲಿ: ಇಂದು ಬೆಳಗ್ಗೆ 11ಗಂಟೆಗೆ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೆಶಕ್ಕಾಗಿ ದೆಹಲಿ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ರಾಮಲೀಲಾ ಮೈದಾನ ಮತ್ತು ಅದರ ಹತ್ತಿರದ ಪ್ರದೇಶ ಪೋಲೀಸ್ ಛಾವಣಿಯಾಗಿ ಮಾರ್ಪಟ್ಟಿದೆ.

ರಾಮಲೀಲಾ ಮೈದಾನಕ್ಕೆ ಹೋಗುವ ಎಲ್ಲ ಮಾರ್ಗಗಳ ಮೇಲೆ ಸಿಸಿಟಿವಿಗಳ ಮೂಲಕ ತೀವ್ರ ನಿಗಾ ವಹಿಸಲಾಗುತ್ತಿದೆ. ಮೈದಾನದ ಹತ್ತಿರವಿರುವ ಕಟ್ಟಡಗಳ ಮೇಲೆಯೂ ಕೂಡ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ದೇಶದ ಗುಪ್ತಚರ ಇಲಾಖೆಯ ಓರ್ವ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ " ಪ್ರಧಾನಿ ಮೋದಿ ಅವರ ಈ ಅತೀ ಸೂಕ್ಸ್ಮ ಸಭೆಯಲ್ಲಿ ಸರಿ ಸುಮಾರು ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೇ. ನಿಯಮಗಳ ಅನುಸಾರ ಪ್ರಧಾನಿಗಳ ಸುರಕ್ಷತೆಯ ಜವಾಬ್ದಾರಿ SPG ಮೆಲಿರಲಿದೆ. ಆದ್ರೆ, ಈ ಸಭೆ ದೆಹಲಿ ಪೋಲೀಸರ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ನಡೆಯಲಿದೆ. ಕೆಲವು ಗಂಟೆಗಳ ಹಿಂದೆಯಷ್ಟೇ ಈ ಪ್ರದೇಶದಲ್ಲಿ ಪೊಲೀಸ್ DCP ಕಚೇರಿಯ ಹೊರಗಡೆ ಕಿಡಿಗೇಡಿಗಳು ಹಲವಾರು ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರರಾಜಧಾನಿಯ ಸುಮಾರು 1734 ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸಿದ್ದಕ್ಕಾಗಿ ಮತ್ತು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು BJP ಬೆಳಗ್ಗೆ 11ಗಂಟೆಗೆ ರಾಮಲೀಲಾ ಮೈದಾನದಲ್ಲಿ ಈ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. 'ಧನ್ಯವಾದ ಮೋದಿ' ಸಮಾವೇಶದ ಮೂಲಕ ಪ್ರಧಾನಿ ಮೋದಿ ದೆಹಲಿ ವಿಧಾನಸಭೆ ಚುನಾವಣೆ-2020ರ ರಣಕಹಳೆ ಕೂಡ ಮೊಳಗಿಸಲಿದ್ದಾರೆ.

ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವಿಕೆಯಿಂದ ಸುಮಾರು 40 ಲಕ್ಷ ಜನರಿಗೆ ಮಾಲಿಕತ್ವ ಸಿಗುವ ದಾರಿ ಸುಗಮವಾದಂತಾಗಿದೆ. ಕಳೆದ ತಿಂಗಳಿನಲ್ಲಿಯೇ  ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಅನಧಿಕೃತ ಕಾಲೋನಿ ವಸತಿ ಆಸ್ತಿ ಹಕ್ಕುಗಳ ಗುರುತಿಸುವಿಕೆ ಮಸೂದೆ-2019 ಕ್ಕೆ ಅನುಮೋದನೆ ನೀಡಿದ್ದು ಇಲ್ಲಿ ಗಮನಾರ್ಹ. ಇದರಿಂದ ದೆಹಲಿಯ ಸುಮಾರು 1734 ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಸುಮಾರು 40 ಲಕ್ಷ ಜನರಿಗೆ ಅವರ ಆಸ್ತಿಯ ಮಾಲಿಕತ್ವದ ಹಕ್ಕು ಸಿಗುವ ಮಾರ್ಗ ಸುಗಮವಾದಂತಾಗಿದೆ.

Trending News