Maruti Suzuki Offers: ಈ ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್, ಇಂದೇ ಬುಕ್‌ ಮಾಡಿ

Maruti Suzuki Offers: ಮಾರುತಿ ಜಿಮ್ನಿ ಮೇಲೂ ಭರ್ಜರಿ ಕೊಡುಗೆ ಲಭ್ಯವಿದೆ. ಜಿಮ್ನಿಯ ಲೈಫ್‌ಸ್ಟೈಲ್‌ SU ಮೇಲೆ 50 ಸಾವಿರ ರೂ. ಕ್ಯಾಶ್‌ಬ್ಯಾಕ್‌ ಲಭ್ಯವಿದೆ. ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಹೊಂದಿದೆ. ಜಿಮ್ನಿಯ 1.5 ಲೀಟರ್‌ ಪೆಟ್ರೋಲ್‌ ಇಂಜಿನ್‌ 105hp, 134Nm ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.

Maruti Suzuki Offers: ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಾಪ್ 10 ಹೆಚ್ಚು ಮಾರಾಟವಾದ ಕಾರುಗಳನ್ನು ನೋಡಿದರೆ, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಕಾರುಗಳು ಮಾರುತಿ ಸುಜುಕಿ ಕಾರುಗಳಾಗಿವೆ. ತನ್ನ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುವ ಯೋಜನೆ ರೂಪಿಸಿರುವ ಮಾರುತಿಸುಜುಕಿ ನೆಕ್ಸಾ ಡೀಲರ್‌ಗಳು ಇದೀಗ ವಿವಿಧ ಕಾರುಗಳ ಖರೀದಿಯ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದಾರೆ. ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್‌ನಂತಹ ಪ್ರಯೋಜನಗಳು ಖರೀದಿದಾರರಿಗೆ ದೊರೆಯಲಿವೆ. ಯಾವ ಕಾರುಗಳ ಮೇಲೆ ನಗದು ರಿಯಾಯಿತಿ ಮತ್ತು ವಿನಿಮಯ ಕೊಡುಗೆಗಳು ಲಭ್ಯವಿವೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮಾರುತಿ ಗ್ರಾಂಡ್ ವಿಟಾರಾ ಹೈಬ್ರಿಡ್ ಖರೀದಿಯ ಮೇಲೆ ಪ್ರಸ್ತುತ 74 ಸಾವಿರ ರೂ. ಮೌಲ್ಯದ ಪ್ರಯೋಜನ ಲಭ್ಯವಿದೆ. ಇದರಲ್ಲಿ 20 ಸಾವಿರ ರೂ. ನಗದು, 50 ಸಾವಿರ ರೂ. ವಿನಿಮಯ ಬೋನಸ್, 4 ಸಾವಿರ ರೂ. ಕಾರ್ಪೊರೇಟ್ ಪ್ರಯೋಜನಗಳು. ಹೆಚ್ಚುವರಿಯಾಗಿ ನೀವು ಹೈಬ್ರಿಡ್ ರೂಪಾಂತರಗಳಲ್ಲಿ 3 ವರ್ಷಗಳ ವಿಸ್ತ್ರೃತ ವಾರಂಟಿ ಪಡೆಯಬಹುದು. ಪೆಟ್ರೋಲ್‌ ರೂಪಾಂತರಗಳ ಬೆಲೆ 14-64 ಸಾವಿರ ರೂ. ಆದರೆ CNG ಆವೃತ್ತಿಯ ಬೆಲೆ ಮೇಲೆ 4 ಸಾವಿರ ರೂ. ಮೌಲ್ಯದ ಕಾರ್ಪೊರೇಟ್‌ ಪ್ರಯೋಜನ  ದೊರೆಯಲಿವೆ. 

2 /5

ಮಾರುತಿ ಫ್ರಾಂಕ್ಸ್ ಟರ್ಬೊ-ಪೆಟ್ರೋಲ್‌ ರೂಪಾಂತರಗಳ ಮೇಲೆ 57 ಸಾವಿರ ರೂ. ರಿಯಾಯಿತಿ ಲಭ್ಯವಿದೆ. ಇದರಲ್ಲಿ 15 ಸಾವಿರ ರೂ. ನಗದು ರಿಯಾಯಿತಿ, 10 ಸಾವಿರ ರೂ. ವಿನಿಮಯ ಬೋನಸ್, 2 ಸಾವಿರ ರೂ. ಕಾರ್ಪೊರೇಟ್ ಪ್ರಯೋಜನಗಳು ಮತ್ತು 3 ಸಾವಿರ ರೂ. ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್ ಲಭ್ಯವಿದೆ. ಈ ತಿಂಗಳು ಫ್ರಾಂಕ್ಸ್ NA ಪೆಟ್ರೋಲ್ ರೂಪಾಂತರಗಳಲ್ಲಿ 27 ಸಾವಿರ ರೂ. ರಿಯಾಯಿತಿ, CNG ಆವೃತ್ತಿ ಗಳು 12 ಸಾವಿರ ರೂ. ರಿಯಾಯಿತಿಯಲ್ಲಿ ಲಭ್ಯವಿದೆ.

3 /5

ಮಾರುತಿ ಜಿಮ್ನಿ ಮೇಲೂ ಭರ್ಜರಿ ಕೊಡುಗೆ ಲಭ್ಯವಿದೆ. ಜಿಮ್ನಿಯ ಲೈಫ್‌ಸ್ಟೈಲ್‌ SU ಮೇಲೆ 50 ಸಾವಿರ ರೂ. ಕ್ಯಾಶ್‌ಬ್ಯಾಕ್‌ ಲಭ್ಯವಿದೆ. ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಹೊಂದಿದೆ. ಜಿಮ್ನಿಯ 1.5 ಲೀಟರ್‌ ಪೆಟ್ರೋಲ್‌ ಇಂಜಿನ್‌ 105hp, 134Nm ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಿದೆ.

4 /5

ಮಾರುತಿ ಬಲೆನೊ ATM ರೂಪಾಂತರದ ಮೇಲೆ ಗ್ರಾಹಕರಿಗೆ ಸುಮಾರು 57,100 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಈ ಪೈಕಿ 35 ಸಾವಿರ ರೂ. ನಗದು ಪ್ರಯೋಜನಗಳು, 15 ಸಾವಿರ ರೂ. ವಿನಿಯಮ ಬೋನಸ್‌, 2 ಸಾವಿರ ರೂ. ಕಾರ್ಪೊರೇಟ್‌ ಬೋನ್‌ ನೀಡಲಾಗುತ್ತಿದೆ. ಮಾರುತಿ ಇತ್ತೀಚೆಗೆ ತನ್ನ ಸಂಪೂರ್ಣ AMT ಶ್ರೇಣಿಯ ಬಲೆಯನ್ನು ಕೊಂಚ ಕಡಿತಗೊಳಿಸಿದೆ. ಮ್ಯಾನುವಲ್ ರೂಪಾಂತರಗಳ ಮೇಲೆ 52,100 ರೂ. CNG ಆವೃತ್ತಿಯ ಮೇಲೆ 32,100 ರೂ. ರಿಯಾಯಿತಿ ಲಭ್ಯವಿದೆ. 

5 /5

ಮಾರುತಿ ಇಗ್ನಿಸ್ 5-ಸ್ಪೀಡ್ AMT ರೂಪಾಂತರಗಳ ಮೇಲೆ 58,100 ರೂ. ಮೌಲ್ಯದ ಪ್ರಯೋಜನಗಳು ಲಭ್ಯವಿದೆ. ಆದರೆ 5-ಸ್ಪೀಡ್ ಮ್ಯಾನುವಲ್ ರೂಪಾಂತರಗಳ ಮೇಲೆ 53,100 ರೂ. ರಿಯಾಯಿತಿ ಸಿಗಲಿದೆ. ಇಗ್ನಿಸ್ 1.2-ಲೀಟರ್ ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದ್ದು, ಇದು 83hp ಮತ್ತು 113Nm ಟಾರ್ಕ್ ಉತ್ಪಾದಿಸುತ್ತದೆ.