ನವದೆಹಲಿ: ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT) ಮೂಲಕ ಆನ್ಲೈನ್ ಫಂಡ್ ವಹಿವಾಟು ನಡೆಸುವವರಿಗೆ ಇಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್ಬಿಐ) ಒಳ್ಳೆಯ ಸುದ್ದಿ ಬಂದಿದೆ. ಆರ್ಬಿಐ ನಿರ್ದೇಶನದ ಪ್ರಕಾರ, ಇಂದಿನಿಂದ (ಡಿಸೆಂಬರ್ 16), ಬ್ಯಾಂಕ್ ಗ್ರಾಹಕರು ಏಳು ದಿನ 24 ಗಂಟೆಗಳ ಕಾಲ ನೆಫ್ಟ್(NEFT) ಸೌಲಭ್ಯವನ್ನು ಪಡೆಯಬಹುದಾಗಿದೆ. ಈಗ ಬ್ಯಾಂಕ್ ಗ್ರಾಹಕರು ಯಾವುದೇ ದಿನ ಮತ್ತು ಯಾವುದೇ ಸಮಯದಲ್ಲಿ ನೆಫ್ಟ್ ಮೂಲಕ ಒಂದು ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ಕಳುಹಿಸುವ ಸೌಲಭ್ಯವನ್ನು ಪಡೆಯಬಹುದು.
ಆನ್ಲೈನ್ನಲ್ಲಿ ಇತರ ಬ್ಯಾಂಕುಗಳ ಖಾತೆದಾರರಿಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಎನ್ಇಎಫ್ಟಿ(NEFT) ಎಂದು ಹೇಳಲಾಗುತ್ತದೆ. ಡಿಸೆಂಬರ್ 16 ರಿಂದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 24 ಗಂಟೆಗಳ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದಾಗಿ ಆರ್ಬಿಐ ಇತ್ತೀಚೆಗೆ ಹೇಳಿದೆ. ಇದಕ್ಕಾಗಿ ಬ್ಯಾಂಕುಗಳು ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಹಣವನ್ನು ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿತ್ತು.
ರಜಾದಿನಗಳು ಸೇರಿದಂತೆ ವಾರದಲ್ಲಿ ಏಳು ದಿನಗಳು ನೆಫ್ಟ್ ಅಡಿಯಲ್ಲಿ ವಹಿವಾಟು ಸೌಲಭ್ಯ ಲಭ್ಯವಿರುತ್ತದೆ ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಗಮನಿಸಬೇಕಾದ ಸಂಗತಿಯೆಂದರೆ, ಇದಕ್ಕೂ ಮೊದಲು, ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ನೆಫ್ಟ್ ವಹಿವಾಟು ನಡೆಸಲಾಗಿದ್ದರೆ, ಮೊದಲ ಮತ್ತು ಮೂರನೇ ಶನಿವಾರದಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ NEFT ಮೂಲಕ ಹಣದ ವಹಿವಾಟು ಸಾಧ್ಯವಾಗುತ್ತಿತ್ತು.