Zee AI Exit Poll: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ?

Zee AI Exit Poll: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ NDA ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ INDIA 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ.

Written by - Puttaraj K Alur | Last Updated : Jun 2, 2024, 08:57 PM IST
  • ಇದೇ ಮೊದಲ ಬಾರಿಗೆ ಭಾನುವಾರ ZEE NEWS AI ಎಕ್ಸಿಟ್ ಪೋಲ್‌
  • ಕೃತಕ ಬುದ್ಧಿಮತ್ತೆ ಮೂಲಕ 10 ಕೋಟಿ ಜನರ ಅಭಿಪ್ರಾಯ ಸಂಗ್ರಹ
  • NDA ಮತ್ತು INDIA ಮೈತ್ರಿಕೂಟಕ್ಕೆ ಎಷ್ಟು ಸ್ಥಾನ ಬರಲಿದೆ ಗೊತ್ತಾ..?
Zee AI Exit Poll: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ? title=
ZEE NEWS AI ಎಕ್ಸಿಟ್ ಪೋಲ್‌

Zee AI Exit Poll: ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 4ರ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ. ಈ ಎಕ್ಸಿಟ್‌ ಪೋಲ್‌ ಭವಿಷ್ಯ ನಿಜವಾಗಲಿದೆಯೇ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. 

ಈ ನಡುವೆ ಇದೇ ಮೊದಲ ಬಾರಿಗೆ ಭಾನುವಾರ ZEE NEWS AI ಎಕ್ಸಿಟ್ ಪೋಲ್‌ ಪ್ರಕಟವಾಗಿದೆ. ಈ ಎಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆಗೆ AI ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ZEE NEWS ಎಕ್ಸಿಟ್ ಪೋಲ್‌ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಫಲಿತಾಂಶವು ಕೇವಲ AI ಎಕ್ಸಿಟ್ ಪೋಲ್ ಮುನ್ಸೂಚನೆಯಾಗಿದ್ದು, ನಿಜವಾದ ಫಲಿತಾಂಶವಲ್ಲ. ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ NDA ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ INDIA 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ.

ಇದನ್ನೂ ಓದಿ: Lok Sabha Election 2024:  ಕಾಂಗ್ರೆಸ್ ಪಕ್ಷ 100 ಸೀಟು ಗೆದ್ದಲ್ಲಿ ಬಿಜೆಪಿಗೆ ಎದುರಾಗಲಿದೆ ಕಂಟಕ...!

ಉತ್ತರಪ್ರದೇಶದಲ್ಲಿ NDA ಗೆಲುವು ಸಾಧ್ಯತೆ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 80 ಸ್ಥಾನಗಳ ಪೈಕಿ ಉತ್ತರ ಪ್ರದೇಶದಲ್ಲಿ NDA ಮೈತ್ರಿಕೂಟ 52-58 ಸ್ಥಾನಗಳನ್ನು ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟವು 22-26 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇತರರು 1 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆಂದು ಹೇಳಲಾಗಿದೆ.

ಆಂಧ್ರಪ್ರದೇಶದಲ್ಲಿ ಯಾರಿಗೆ ವಿಜಯ..?: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ಆಂಧ್ರಪ್ರದೇಶದಲ್ಲಿ NDA ಮೈತ್ರಿಕೂಟಕ್ಕೆ 12-15 ಸ್ಥಾನಗಳು ಲಭಿಸಿದರೆ, ಇಂಡಿಯಾ ಮೈತ್ರಿಕೂಟಕ್ಕೆ 2-4 ಸ್ಥಾನಗಳು ಮತ್ತು ಇತರರಿಗೆ 6-10 ಸ್ಥಾನಗಳು ದೊರೆಯಲಿದೆ ಎಂದು ಹೇಳಲಾಗಿದೆ. 

ಬಿಹಾರದಲ್ಲಿ ಯಾರಿಗೆ ಹೆಚ್ಚು ಸ್ಥಾನ?: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 40 ಸ್ಥಾನಗಳ ಪೈಕಿ ಬಿಹಾರದಲ್ಲಿ NDA ಮೈತ್ರಿಕೂಟಕ್ಕೆ 15-25 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-25 ಸ್ಥಾನಗಳ ಲಭಿಸಲಿವೆ ಎಂದು ಹೇಳಲಾಗಿದೆ.

ಕರ್ನಾಟಕ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 28 ಸ್ಥಾನಗಳ ಪೈಕಿ ಕರ್ನಾಟಕದಲ್ಲಿ NDA ಮೈತ್ರಿಕೂಟಕ್ಕೆ 10-14 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 12-20 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 29 ಸ್ಥಾನಗಳ ಪೈಕಿ ಮಧ್ಯಪ್ರದೇಶದಲ್ಲಿ NDA ಮೈತ್ರಿಕೂಟಕ್ಕೆ 16-22 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 8-12 ಸ್ಥಾನಗಳು ಲಭಿಸಲಿವೆ.

ಮಹಾರಾಷ್ಟ್ರ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 48 ಸ್ಥಾನಗಳ ಪೈಕಿ ಮಹಾರಾಷ್ಟ್ರದಲ್ಲಿ NDA ಮೈತ್ರಿಕೂಟಕ್ಕೆ 26-34 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 15-21 ಸ್ಥಾನಗಳು ಲಭಿಸಲಿವೆ.

ರಾಜಸ್ಥಾನ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 25 ಸ್ಥಾನಗಳ ಪೈಕಿ ರಾಜಸ್ಥಾನದಲ್ಲಿ NDA ಮೈತ್ರಿಕೂಟಕ್ಕೆ 15-19 ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 6-10 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ.

ತಮಿಳುನಾಡು: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, 39 ಸ್ಥಾನಗಳ ಪೈಕಿ ತಮಿಳುನಾಡಿನಲ್ಲಿ NDA ಮೈತ್ರಿಕೂಟಕ್ಕೆ 19-12, ಇಂಡಿಯಾ ಮೈತ್ರಿಕೂಟಕ್ಕೆ 21-27 ಮತ್ತು ಇತರರು 3-5 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಂಡಿಯಾ ಒಕ್ಕೂಟ ಅಧಿಕಾರಕ್ಕೇರಿದ್ರೆ ರಾಹುಲ್‌ ಗಾಂಧಿ ಪ್ರಧಾನಿ

ಪಶ್ಚಿಮ ಬಂಗಾಳ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ NDA ಮೈತ್ರಿಕೂಟ 20-24 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟಿಎಂಸಿ 16-22 ಸ್ಥಾನಗಳನ್ನು ಪಡೆಯಬಹುದು. ಇಂಡಿಯಾ ಮೈತ್ರಿಕೂಟವು 0-1 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News