ನವದೆಹಲಿ: ಭಾರತೀಯ ರೈಲು ಇಲಾಖೆ ಖಾಲಿ ಇರುವ ಸುಮಾರು 1200 ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಈ ಬಾರಿಯ ವಿಶೇಷತೆ ಎಂದರೆ ಇದರಲ್ಲಿನ ಬಹುತೇಕ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ಲಿಖಿತ ಪರೀಕ್ಷೆ ಬರೆಯುವ ಅಗತ್ಯತೆ ಇಲ್ಲ. ಅಪರೆಂಟಿಸ್ ಕಾಯ್ದೆ ಅನ್ವಯ ಈಸ್ಟ್-ಕೋಸ್ಟ್ ರೇಲ್ವೆ ವಿಭಾಗ 1,216 ಹುದ್ದೆಗಳನ್ನು ಭರ್ತಿಗೆ ಅರ್ಜಿಗೆ ಆಹ್ವಾನಿಸಿದೆ. ಈ ಎಲ್ಲ ಹುದ್ದೆಗಳಿಗೆ ಕೇವಲ 8ನೇ ತರಗತಿ ಪಾಸಾಗಿರಬೇಕು.
ಈ ಕೆಳಗಿನ ಹುದ್ದೆಗಳು ಖಾಲಿ ಇವೆ
ಈ ಕುರಿತು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿರುವ ರೇಲ್ವೆ ಇಲಾಖೆ ಫಿಟರ್, ವೆಲ್ಡರ್, ಮೆಕ್ಯಾನಿಕ್, ಪೇಂಟರ್, ಶೀಟ್ ಮೆಟಲ್ ವರ್ಕರ್ ಹಾಗೂ ಟ್ರೇಡ್ ವೆಲ್ಡರ್ ಹುದ್ದೆಗಳು ಖಾಲಿ ಇವೆ ಎಂದಿದೆ. ಈ ಹುದ್ದೆಗಳಿಗೆ ಸೇರಿಕೊಳ್ಳಲು ಅಭ್ಯರ್ಥಿಗಳು ಯಾವುದೇ ತಾಂತ್ರಿಕ ಸಂಸ್ಥೆಯಿಂದ ಸರ್ಟಿಫಿಕೆಟ್ ಹೊಂದಿರುವುದು ಅಗತ್ಯವಿದೆ.
ವಿದ್ಯಾರ್ಹತೆ
ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ರೇಲ್ವೆ ವಿಭಾಗದ ಪ್ರಕಾರ ಅರ್ಜಿದಾರರು 8ನೇ ತರಗತಿಯಿಂದ 10ನೇ ತರಗತಿಯವರೆಗೆ ಓದಿರಬೇಕು. ಅಷ್ಟೇ ಅಲ್ಲ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅವರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರವೇಶ ಪರೀಕ್ಷೆ ಇಲ್ಲ
ಈಸ್ಟ್-ಕೋಸ್ಟ್ ರೇಲ್ವೆ ವಿಭಾಗ ಈ ಹುದ್ದೆಗಳ ಭರ್ತಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಹೇಳಿದ್ದು, ಎಲ್ಲ ಭರ್ತಿಗಳು ಅಪರೆಂಟಿಸ್ ಕಾಯ್ದೆ ಅನ್ವಯ ನಡೆಯಲಿವೆ ಎಂದಿದೆ.
ಶುಲ್ಕ
ರೇಲ್ವೆ ವಿಭಾಗದ ಅಧಿಕೃತ ವೆಬ್ಸೈಟ್ ಪ್ರಕಾರ ಸಾಮಾನ್ಯ ಹಾಗೂ OBC ಶ್ರೇಣಿಗಳ ಅರ್ಜಿದಾರರು ರೂ. 100 ಶುಲ್ಕ ಸಂದಾಯ ಮಾಡಬೇಕು. ಹಿಂದುಳಿದ ಜಾತಿ/ಹಿಂದುಳಿದ ವರ್ಗ, ಮಹಿಳಾ ಹಾಗೂ PWD ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 15 ವರ್ಷಗಳಾಗಿದ್ದರೆ, ಗರಿಷ್ಟ ವಯೋಮಿತಿ 24 ವರ್ಷಗಳಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಕಾಂಕ್ಷಿಗಳು rrcbbs.org.in ಗೆ ಭೇಟಿ ನೀಡಬೇಕು.