ಈ ತಂತ್ರಜ್ಞಾನದಿಂದ ಫೋನ್ 1 ನಿಮಿಷಕ್ಕೆ, ಕಾರ್ 10 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತಂತೆ!

New Technology: ಡೆಡ್ ಫೋನ್, ಡೆಡ್ ಲ್ಯಾಪ್‌ಟಾಪ್ ಅನ್ನು ಕೇವಲ ಒಂದೇ ಒಂದು ನಿಮಿಷದಲ್ಲಿ ಚಾರ್ಚ್ ಮಾಡಬಹುದಾದಂತಹ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬರಲಿದೆ. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ಕಾರನ್ನು ಕೇವಲ ಹತ್ತು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಂತೆ. 

Written by - Yashaswini V | Last Updated : May 28, 2024, 10:34 AM IST
  • ಸೂಪರ್ ಕೆಪಾಸಿಟರ್‌ಗಳು ತುಂಬಾ ವೇಗವಾಗಿ ಚಾರ್ಜ್ ಆಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.
  • ಅಯಾನುಗಳ ವೇಗವನ್ನು ಹೆಚ್ಚಿಸುವ ಮೂಲಕ ಅವುಗಳನ್ನು ಇನ್ನಷ್ಟು ವೇಗಗೊಳಿಸಬಹುದು.
  • ಈ ರೀತಿಯಲ್ಲಿ ಅವರು ಸೂಪರ್ ಕೆಪಾಸಿಟರ್ ಅನ್ನು ಇನ್ನಷ್ಟು ಉತ್ತಮಗೊಳಿಸುವ ಮಾರ್ಗವನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ತಂತ್ರಜ್ಞಾನದಿಂದ ಫೋನ್ 1 ನಿಮಿಷಕ್ಕೆ,  ಕಾರ್ 10 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತಂತೆ! title=

New Technology: ಭಾರತೀಯ ಮೂಲದ ವಿಜ್ಞಾನಿ, ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ರಾಸಾಯನಿಕ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಂಕುರ್ ಗುಪ್ತಾ (Ankur Gupta) ಮತ್ತು ಅವರ ತಂಡ ಅದ್ಭುತ ಆವಿಷ್ಕಾರವನ್ನು ಹೊರತಂದಿದೆ. ಈ ತಂತ್ರಜ್ಞಾನವನ್ನು ಬಳಸಿ ಪೂರ್ತಿ ಬ್ಯಾಟರಿ ಖಾಲಿಯಾಗಿರುವ ಫೋನ್, ಲ್ಯಾಪ್‌ಟಾಪ್ ಅನ್ನು ಕೇವಲ ಒಂದು ನಿಮಿಷದಲ್ಲಿ ಮತ್ತು ಎಲೆಕ್ಟ್ರಿಕ್ ಕಾರ್ ಅನ್ನು ಹತ್ತೇ ಹತ್ತು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂಬ ಅಂಶ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 

ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ (Journal Proceedings of the National Academy of Sciences) ಪ್ರಕಟವಾದ ಅಧ್ಯಯನದ ಪ್ರಕಾರ, ಸೂಕ್ಷ್ಮ ರಂಧ್ರಗಳ ಸಂಕೀರ್ಣ ಜಾಲದೊಳಗೆ ಸಣ್ಣ ಚಾರ್ಜ್ಡ್ ಕಣಗಳಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. 

ಈ ಅಧ್ಯಯದ ರುವಾರಿಯಾದ ಭಾರತೀಯ ಮೂಲದ ವಿಜ್ಞಾನಿ ಅಂಕುರ್ ಗುಪ್ತಾ  (Indian-born scientist Ankur Gupta) ಅವರ ಪ್ರಕಾರ, ಈ ಅಭೂತಪೂರ್ವ ಆವಿಷ್ಕಾರವು ಸೂಪರ್ ಕೆಪಾಸಿಟರ್‌ಗಳಂತಹ ಹೆಚ್ಚು ಪರಿಣಾಮಕಾರಿ ಶೇಖರಣಾ ಸಾಧನಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- WhatsApp ಹ್ಯಾಕ್ ಆಗದಂತೆ ತಡೆಯಲು ಈ ಐದು ಟಿಪ್ಸ್ ಅನುಸರಿಸಿ

ತ್ವರಿತ ಚಾರ್ಜ್ ಆಗುವಿಕೆ: 
ಸಂಶೋಧಕರ ಪ್ರಕಾರ, ಸೂಪರ್ ಕೆಪಾಸಿಟರ್ (Super Capacitor) ಶಕ್ತಿಯ ಶೇಖರಣಾ ಸಾಧನವಾಗಿದೆ. ಇದು ಸಣ್ಣ ಅಯಾನು ಸಂಗ್ರಹ ರಂಧ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಇವು ಬ್ಯಾಟರಿಗಳಿಗೆ ಹೋಲಿಸಿದರೆ, ಸೂಪರ್‌ಕೆಪಾಸಿಟರ್‌ಗಳು ವೇಗವಾಗಿ ಚಾರ್ಜಿಂಗ್ ಸಮಯ ಮತ್ತು ಉಡಾವಣಾ ಜೀವನವನ್ನು ಹೊಂದಿವೆ ಎಂದು ಅಂಕುರ್ ಗುಪ್ತಾ ಹೇಳಿದ್ದಾರೆ. 

ಈ ಹೊಸ ಆವಿಷ್ಕಾರವು ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸಾಧನಗಳಲ್ಲಿ ಶಕ್ತಿಯನ್ನು ಸಂಗ್ರಹಿಸಲು ಮಾತ್ರವಲ್ಲದೆ ವಿದ್ಯುತ್‌ನ ಸಂಪೂರ್ಣ ಕಾರ್ಯವಿಧಾನಕ್ಕೂ ಬಹಳ ಮುಖ್ಯವಾಗಿದೆ ಎಂದು ಈ ಸಂಶೋಧನೆಯ  ಸಹಾಯಕ ಪ್ರಾಧ್ಯಾಪಕರೊಬ್ಬರು  ತಿಳಿಸಿದ್ದಾರೆ. ವಿದ್ಯುತ್ ವ್ಯವಸ್ಥೆಗೆ ಸಂಬಂಧಿಸಿದಂತೆ, ಅಗತ್ಯಕ್ಕೆ ಅನುಗುಣವಾಗಿ ಬದಲಾಗುತ್ತಿರುವ ವಿದ್ಯುತ್ ಅನ್ನು ಸರಿಯಾಗಿ ನಿರ್ವಹಿಸಲು, ಕಡಿಮೆ ಸಮಯದಲ್ಲಿ ವಿದ್ಯುತ್ ಉಳಿಸುವ ಮತ್ತು ಹೆಚ್ಚಿನ ಅಗತ್ಯದ ಸಮಯದಲ್ಲಿ ತ್ವರಿತವಾಗಿ ವಿದ್ಯುತ್ ನೀಡುವ ಇಂತಹವುಗಳ ಅವಶ್ಯಕತೆಯಿದೆ ಎಂದವರು ಉಲ್ಲೇಖಿಸಿದ್ದಾರೆ. 

ಇದನ್ನೂ ಓದಿ- Jio Prepaid Plans: ಜಿಯೋದ ಈ ಯೋಜನೆಗಳಲ್ಲಿ Netflix, Amazon Prime, Disney+ Hotstar ಫುಲ್ ಫ್ರೀ
 
ಸೂಪರ್ ಕೆಪಾಸಿಟರ್‌ನ ವಿಶೇಷತೆ ಬಗ್ಗೆ ಸಂಶೋಧಕರು ಹೇಳಿದ್ದೇನು? 

ಸಂಶೋಧಕರ ಪ್ರಕಾರ, ಸೂಪರ್ ಕೆಪಾಸಿಟರ್‌ನ ಪ್ರಮುಖ ವಿಶೇಷತೆ ಅದರ ವೇಗ. ಈ ಸಂಶೋಧನೆಯು ಸಾವಿರಾರು ಸಣ್ಣ ಅಂತರ್ಸಂಪರ್ಕಿತ ರಂಧ್ರಗಳನ್ನು ಒಳಗೊಂಡಿರುವ ಸಂಕೀರ್ಣ ಜಾಲದಲ್ಲಿ ಕೆಲವೇ ನಿಮಿಷಗಳಲ್ಲಿ ಅಯಾನುಗಳ ಚಲನೆಯನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ. ಈ ಆವಿಷ್ಕಾರದ ಮೊದಲು, ವಿಜ್ಞಾನಿಗಳು ನೇರ ರಂಧ್ರದಲ್ಲಿ ಅಯಾನುಗಳ ಚಲನೆಯ ಬಗ್ಗೆ ಮಾತ್ರ ತಿಳಿದಿದ್ದರು ಎಂದು ಸಂಶೋಧಕರ ತಂಡ ಮಾಹಿತಿ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News