ಮಹಿಳಾ ಸುರಕ್ಷತೆಗಾಗಿ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ!

ರಾಜ್ಯವ್ಯಾಪಿ ಸಹಾಯ ಸಂಖ್ಯೆ 100, 112 ಮತ್ತು 181 ಅನ್ನು ಡಯಲ್ ಮಾಡುವ ಮೂಲಕ ಈ ಸೇವೆಯನ್ನು ಬಳಸಬಹುದು. ಈ ಸಂಖ್ಯೆಗಳಿಗೆ ಡಯಲ್ ಮಾಡಿದರೆ ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಸಂಪರ್ಕ ಹೊಂದುತ್ತಾರೆ.

Last Updated : Dec 4, 2019, 02:09 PM IST
ಮಹಿಳಾ ಸುರಕ್ಷತೆಗಾಗಿ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ! title=

ನವದೆಹಲಿ: ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಶ್ಲಾಘನೀಯ ಪ್ರಯತ್ನದತ್ತ ಮುಖ ಮಾಡಿದೆ. ಮಹಿಳೆಯರನ್ನು ಸುರಕ್ಷಿತವಾಗಿ ಮನೆ ಬಿಡಲು ಉಚಿತ ಪೊಲೀಸ್ ನೆರವು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ ಪ್ರಕಟಿಸಿದ್ದಾರೆ. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಮಹಿಳೆಯರಿಗೆ ಈ ನೆರವು ಲಭ್ಯವಾಗಲಿದೆ ಎಂದು ಅವರು ಘೋಷಿಸಿದರು. ಒಂದು ವೇಳೆ ಮಹಿಳೆ ಈ ಸಮಯದ ನಡುವೆ ಎಲ್ಲೋ ಸಿಲುಕಿಕೊಂಡಿದ್ದರೆ ಅಥವಾ ಮನೆಗೆ ತೆರಳುವ ಮಧ್ಯೆ ಅವರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ, ಅವರು ರಾಜ್ಯವ್ಯಾಪಿ ಸಹಾಯ ಸಂಖ್ಯೆ 100, 112 ಮತ್ತು 181 ಅನ್ನು ಡಯಲ್ ಮಾಡುವ ಮೂಲಕ ಈ ಸೇವೆಯನ್ನು ಬಳಸಬಹುದು. ಈ ಸಂಖ್ಯೆಗಳಿಗೆ ಡಯಲ್ ಮಾಡಿದರೆ ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಸಂಪರ್ಕ ಹೊಂದುತ್ತಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ರಾಜ್ಯಾದ್ಯಂತ ಈ ಸೌಲಭ್ಯದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಕರ್ ಗುಪ್ತಾ ಅವರಿಗೆ ನಿರ್ದೇಶನ ನೀಡಿದ್ದಾರೆ. ಪ್ರತಿ ರಾಜ್ಯ ಸರ್ಕಾರವು ಈ ರೀತಿಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ಯಾಕ್ಸಿಗಳು ಅಥವಾ ದ್ವಿ ಚಕ್ರ ವಾಹನಗಳು ಸೇರಿದಂತೆ ಸ್ವಂತ ವಾಹನಗಳನ್ನು ಹೊಂದಿರದ ಮಹಿಳೆಯರಿಗೆ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯ ಲಭ್ಯವಿರುತ್ತದೆ. ಮಹಿಳಾ ಕರೆ ಮಾಡುವವರಿಗೆ ಸಂಪೂರ್ಣ ಭದ್ರತೆಯ ಅರಿವನ್ನು ನೀಡಲು, ಸಾರಿಗೆ ಸಮಯದಲ್ಲಿ ಕನಿಷ್ಠ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯಾದರೂ ಅವರೊಂದಿಗೆ ಬರಬೇಕೆಂದು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಪಿಸಿಆರ್ ವಾಹನಗಳನ್ನು ಮೊಹಾಲಿ, ಪಟಿಯಾಲ ಮತ್ತು ಬತಿಂಡಾ ರಾಜ್ಯಗಳಲ್ಲಿ ಒದಗಿಸಲಾಗುವುದು. ಇದರೊಂದಿಗೆ ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಈ ಸೌಲಭ್ಯ ಒದಗಿಸಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಈ ಯೋಜನೆ ಅನುಷ್ಠಾನಕ್ಕೆ ಡಿಎಸ್ಪಿ / ಎಸಿಪಿ ನೋಡಲ್ ಅಧಿಕಾರಿಗಳಿರುತ್ತಾರೆ. ಅವರ ಸಂಖ್ಯೆಗಳು ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪೊಲೀಸರ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಎಂದವರು ಮಾಹಿತಿ ನೀಡಿದ್ದಾರೆ.

Trending News