IPL 2024, RCB vs CSK: ಇದು ಯಶ್ ದಯಾಳ್ ಜೀರೋ To ಹೀರೋ ಆದ ಕಥೆ. RCBಗೆ ಅದೃಷ್ಟದ ಗೆಲುವು ತಂದುಕೊಟ್ಟ ಯಶ್ ದಯಾಳ್ ಇದೀಗ ಹೀರೋ ಆಗಿ ಬದಲಾಗಿದ್ದಾರೆ. ತಮ್ಮ ಅದ್ಭುತ ಬೌಲಿಂಗ್ನಿಂದ CSKಯನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗುವ ಮೂಲಕ RCB ಪ್ಲೇಆಫ್ಗೆ ಪ್ರವೇಶಿಸುವಂತೆ ಮಾಡಿದ ಯಶ್ ದಯಾಳ್ಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಹೌದು, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಐಪಿಎಲ್ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಕೈಲಿ 5 ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಯಶ್ ದಯಾಳ್ ಹೊಡೆಸಿಕೊಂಡಿದ್ದರು. ಇದು ಯುವ ಕ್ರಿಕೆಟಿಗನ ಕರಿಯರ್ ಮೇಲೆ ಅಪಾರ ಪ್ರಭಾವ ಬೀರಿದ ಕಳಪೆ ದಾಖಲೆಯಾಗಿತ್ತು. ಈ ಪಂದ್ಯದ ಬಳಿಕ ಯಶ್ ದಯಾಳ್ ವ್ಯಾಪಕ ಟೀಕೆ ಮತ್ತು ಟ್ರೋಲ್ಗೆ ತುತ್ತಾಗಿದ್ದರು.
Look what we made of that 1% chance 🥹#PlayBold #ನಮ್ಮRCB #IPL2024 #RCBvCSK
— Royal Challengers Bengaluru (@RCBTweets) May 18, 2024
ಇದನ್ನೂ ಓದಿ: ಫಾಫ್ ಡು ಪ್ಲೆಸಿಸ್ ಔಟ್ ಅಥವಾ ನಾಟೌಟ್? RCBಗೆ ಮತ್ತೆ ಮೋಸ ಮಾಡಿದ್ರಾ ಅಂಪೈರ್!!
ಅಂದು ಗುಜರಾತ್ ಪರ ಆಡುತ್ತಿದ್ದ ಯಶ್ ದಯಾಳ್ರನ್ನು 2024ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ 5 ಕೋಟಿ ರೂ.ಗೆ ಖರೀದಿಸಿತು. ಆರಂಭಿಕ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಯಶ್ ದಯಾಳ್ ನಂತರ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ಆರಂಭಿಕ ಪಂದ್ಯಗಳಲ್ಲಿ ಕಳಪೆ ಬೌಲಿಂಗ್ನಿಂದ ಸತತ ಸೋಲು ಕಂಡು ಕಂಗೆಟ್ಟಿದ್ದ ಆರ್ಸಿಬಿಗೆ ಯಶ್ ದಯಾಳ್ ಬೆಂಕಿ ಬೌಲಿಂಗ್ ಮೂಲಕ ಶಕ್ತಿ ತುಂಬಿದರು. ಯಶ್ ದಯಾಳ್ ಕಮ್ಬ್ಯಾಕ್ ಮಾಡಿದ್ದನ್ನು ಕಂಡು ಸಹ ಆಟಗಾರರಷ್ಟೇ ಅಲ್ಲ, ಮಾಜಿ ಆಟಗಾರರು ಸಹ ಬಾಯ್ ಮೇಲೆ ಬೆರಳು ಇಟ್ಟುಕೊಂಡಿದ್ದರು.
6️⃣ IN 6️⃣ and off we gooooo to the Playoffs 🥹
If this isn’t playing bold then we don’t know what is. 12th Man Army, this is for you. Everything is for you! 🫶#PlayBold #ನಮ್ಮRCB #IPL2024 #RCBvCSK pic.twitter.com/2yBGOh9Gis
— Royal Challengers Bengaluru (@RCBTweets) May 18, 2024
ಅದರಂತೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ʼಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಯಶ್ ದಯಾಳ್ ಆರ್ಸಿಬಿಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಕೊನೆಯ ಓವರ್ನಲ್ಲಿ ಪ್ಲೇ ಆಫ್ ಪ್ರವೇಶಿಸಲು CSKಗೆ 6 ಎಸೆತಗಳಲ್ಲಿ 17 ರನ್ಗಳ ಅವಶ್ಯಕತೆ ಇತ್ತು. ಯಶ್ ದಯಾಳ್ ಬೌಲಿಂಗ್ ಮಾಡಲು ಬಂದಾಗ ಕ್ರೀಸ್ನಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಇದ್ದರು. ಯಶ್ ದಯಾಳ್ ಎಸೆದ ಮೊದಲ ಎಸೆತವನ್ನೇ ಧೋನಿ ಸಿಕ್ಸರ್ಗೆ ಅಟ್ಟಿದರು. ಇದರಿಂದ ಆರ್ಸಿಬಿ ಅಭಿಮಾನಿಗಳ ಮುಖ ಕಳಾಹೀನವಾಗಿತ್ತು. ಈ ವೇಳೆ ಸ್ವಲ್ಪವೂ ವಿಚಲಿತನಾಗದ ಯಶ್ ದಯಾಳ್ 2ನೇ ಎಸೆತದಲ್ಲಿ ಧೋನಿ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!
RCB ne 10th pr start kiya aur csk ne 1st pr
Aaj esa nahi hai
pic.twitter.com/wvwF1MTjPk— Nakali Duniya (@NakaliDuniya) May 18, 2024
ನಂತರ 4 ಎಸೆತಗಳಲ್ಲಿ 11 ರನ್ಗಳ ಅವಶ್ಯಕತೆ ಇತ್ತು. ಧೋನಿ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ ಕ್ರೀಸ್ಗೆ ಶಾರ್ದೂಲ್ ಠಾಕೂರ್ ಬಂದಿದ್ದರು. ಯಶ್ ದಯಾಳ್ ಎಸೆದ 3ನೇ ಎಸೆತವನ್ನು ಅವರು ಮಿಸ್ ಮಾಡಿದರು. ನಂತರ 4ನೇ ಎಸೆತದಲ್ಲಿ ಸಿಂಗಲ್ ರನ್ ನೀಡಿ ರವೀಂದ್ರ ಜಡೇಜಾಗೆ ಸ್ಟ್ರೈಕ್ ನೀಡಿದರು. ಈ ವೇಳೆ CSKಗೆ 2 ಎಸೆತಗಳಲ್ಲಿ 10 ರನ್ಗಳ ಅವಶ್ಯಕತೆ ಇತ್ತು. ಎಲ್ಲರೂ ಜಡೇಜಾ 2 ಸಿಕ್ಸರ್ ಬಾರಿಸುತ್ತಾರೆ ಅಂದುಕೊಂಡಿದ್ದರು. ಆದರೆ ಯಶ್ ದಯಾಳ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
5ನೇ ಎಸೆತವನ್ನು ಅದ್ಭುತವಾಗಿ ಎಸೆಯುವ ಮೂಲಕ ಮಿಸ್ ಮಾಡಿಸಿದರು. ಈ ವೇಳೆ ಮೈದಾನದಲ್ಲಿಯೇ ದಿನೇಶ್ ಕಾರ್ತಿಕ್ ಮತ್ತು ದಯಾಳ್ ಸಂಭ್ರಮಿಸಲು ಶುರು ಮಾಡಿದರು. ಅತ್ತ ಡಗ್ಔಟ್ನಲ್ಲಿ ಸಹ ಆಟಗಾರರು ಸಹ ಕುಣಿದು ಕುಪ್ಪಳಿಸಿದರು. ಅಂತಿಮವಾಗಿ ಕೊನೆಯ ಎಸೆತವನ್ನು ಅದ್ಭುತವಾಗಿ ಎಸೆದ ಯಶ್ ದಯಾಳ್ ಅದನ್ನೂ ಮಿಸ್ ಮಾಡುವ ಮೂಲಕ RCBಗೆ 17 ರನ್ಗಳ ಅದ್ಭುತ ಗೆಲುವು ತಂದುಕೊಟ್ಟರು. ಅಂದು ಜೀರೋ ಆಗಿದ್ದ ಯಶ್ ಇಂದು ಹೀರೋ ಆಗಿ ಮಿಂಚಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.