Kareena Kapoor Saif Ali Khan Love Story: ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್’ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದ್ದು, ಅನೇಕರಿಗೆ ಮೆಚ್ಚುಗೆಯ ಜೋಡಿಯೂ ಹೌದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಿನಿಮಾವೊಂದರ ಚಿತ್ರೀಕರಣದ ವೇಳೆ ಈ ಜೋಡಿ ಪ್ರೀತಿಸಲು ಶುರು ಮಾಡಿದ್ದರು ಎಂದು ಹೇಳಲಾಗುತ್ತದೆ. ಆದರೆ ಸೆಲೆಬ್ರಿಟಿ ಛಾಯಾಗ್ರಾಹಕ ದಬ್ಬೂ ರತ್ನಾನಿ ಸೈಫ್ ಮತ್ತು ಕರೀನಾ ಲವ್ ಸ್ಟೋರಿ ಬಗ್ಗೆ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದರು.
ಕರೀನಾ ಮತ್ತು ಸೈಫ್ ಅವರ ಪ್ರೇಮಕಥೆ ಶುರುವಾಗಿದ್ದು 2005 ರಲ್ಲಿ. ಅದೂ ಕೂಡ ತನ್ನ ಸ್ಟುಡಿಯೋದಲ್ಲಿ ಎಂದು ಹೇಳಿದ್ದಾರೆ.
ದಬ್ಬೂ ರತ್ನಾನಿ ರೆಡ್ಡಿಟ್’ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಅನೇಕರು ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ಒಬ್ಬ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಹಳೆಯ ಫೋಟೋವನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ದಬ್ಬೂ ರತ್ನಾನಿ, 'ಇಬ್ಬರೂ ನನ್ನ ಸ್ಟುಡಿಯೋದಲ್ಲಿ ಮೊದಲ ಬಾರಿಗೆ ಭೇಟಿಯಾದರು' ಎಂದು ಬರೆದು ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, “ಎಲ್ಲವೂ ಆರಂಭವಾದ ಸ್ಥಳ” ಎಂಬ ಕ್ಯಾಪ್ಶನ್ ಕೂಡ ನೀಡಿದ್ದಾರೆ. ಎಂದು ಉತ್ತರವನ್ನೂ ಬರೆದಿದ್ದಾರೆ.
ಕರೀನಾ ಕಪೂರ್ ಜೊತೆ ಡೇಟಿಂಗ್ ಮಾಡುವ ಮೊದಲು ಸೈಫ್ ಅಲಿಖಾನ್ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದಹಾಗೆ ಇವರಿಬ್ಬರ ಮದುವೆಗೆ ಕರೀನಾ ಬಂದು ಶುಭಕೋರಿದ್ದು, ಆ ಸಂದರ್ಭದಲ್ಲಿ ಸೈಫ್, ಥ್ಯಾಂಕ್ಯೂ ಮಗಳೇ ಎಂದು ಹೇಳಿದ್ದರಂತೆ.
ಆದರೆ 13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ 2004 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು. ಇಬ್ಬರಿಗೂ ಇಬ್ಬರು ಮಕ್ಕಳಿದ್ದು, ಅವರ ಹೆಸರು ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್.
ಇನ್ನು ಇದೆಲ್ಲಾ ನಡೆದ ಬಳಿಕ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಈ ಎಲ್ಲಾ ಮಾತುಗಳಿಗೆ ತೆರೆ ಎಳೆದ ಜೋಡಿ 2012ರಲ್ಲಿ ವಿವಾಹವಾದರು.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರ ಹೆಸರು ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್. ಮದುವೆಗೂ ಮುನ್ನ ಕರೀನಾ ಮತ್ತು ಸೈಫ್ 'ಎಲ್ ಒಸಿ ಕಾರ್ಗಿಲ್', 'ಓಂಕಾರ', 'ತಶನ್', 'ಕುರ್ಬಾನ್' ಮತ್ತು 'ಏಜೆಂಟ್ ವಿನೋದ್' ಚಿತ್ರಗಳಲ್ಲಿ ಕೆಲಸ ಮಾಡಿದ್ದರು.