Vajramuni: ಪ್ರಾಣ ಇರೋವರೆಗೂ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡಲ್ಲವೆಂದಿದ್ದ ವಜ್ರಮುನಿ

ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳು ವಜ್ರಮುನಿ ಅವರಿಗೆ ಆಫರ್‌ಗಳನ್ನು ನೀಡಿ ಕರೆದರೂ ಸಹ, ʼಕನ್ನಡ ನನಗೆ ಅನ್ನ ನೀಡಿದೆ, ಅದಕ್ಕೆ ನಾನೆಂದು ದ್ರೋಹ ಬಗೆಯುವುದಿಲ್ಲʼ ಎನ್ನುವ ಮೂಲಕ ಕನ್ನಡದ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದ ವಜ್ರಮುನಿಯವರು ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಲಿಲ್ಲ.

Written by - Puttaraj K Alur | Last Updated : May 13, 2024, 07:06 PM IST
  • ಪರ ಭಾಷೆಗಳ ಸಿನಿಮಾಗೆ 'ನೋ' ಹೇಳಿದ್ದ ನಟಭಯಂಕರ ವಜ್ರಮುನಿ..!
  • ಬೇರೆ ಭಾಷೆ ಸಿನಿಮಾದಲ್ಲಿ ಕನ್ನಡ ಖ್ಯಾತ ನಟ ವಜ್ರಮುನಿ ನಟಿಸಲಿಲ್ಲ ಯಾಕೆ..?
  • ಹಿರಿಯ ನಟ ವಜ್ರಮುನಿಯವರನ್ನು ಕಟ್ಟಿ ಹಾಕಿತ್ತು ಕನ್ನಡದ ಮೇಲಿನ ಪ್ರೀತಿ
Vajramuni: ಪ್ರಾಣ ಇರೋವರೆಗೂ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡಲ್ಲವೆಂದಿದ್ದ ವಜ್ರಮುನಿ title=
ನಟಭಯಂಕರ ವಜ್ರಮುನಿ

Nata Bhayankara Vajramuni: ಎಂತಹದ್ದೇ ಪಾತ್ರ ನೀಡಿದರೂ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ನಟಭಯಂಕರ ಖ್ಯಾತಿಯ ವಜ್ರಮುನಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಪ್ರಾಣ ಇರೋವರೆಗೂ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡಲ್ಲವೆಂದು ಅವರು ಶಪಥ ಮಾಡಿದ್ದರು. ಅವರು ಈ ನಿರ್ಧಾರ ಮಾಡಿದ್ದು ಯಾಕೆ? ವಜ್ರಮುನಿಯವರ ಬಗ್ಗೆ ಮತ್ತಷ್ಟು ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ. 

ಕಣ್ಣಿನಲ್ಲೇ ಭಯಂಕರ ಅಭಿನಯದ ಮೂಲಕ ಪ್ರೇಕ್ಷಕರನ್ನು ನಡುಗುವಂತೆ ಮಾಡುತ್ತಿದ್ದ ವಜ್ರಮುನಿ ಅಭಿನಯಕ್ಕೆ ಸರಿಸಾಟಿ ನೀಡುವಂತಹ ನಟ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಹುಟ್ಟಿಲ್ಲ.. ಮತ್ತೆಂದು ಹುಟ್ಟೋದು ಇಲ್ಲ ಎಂದರೆ ತಪ್ಪಾಗಲಾರದು.  ಸಾಮಾನ್ಯವಾಗಿ ಸದಾನಂದ ಸಾಗರ ಎಂಬ ಹೆಸರು ಕೇಳಿದರೆ ಯಾರಿಗೂ ಅಷ್ಟು ಬೇಗ ಈ ಪ್ರಖ್ಯಾತ ಕಲಾವಿದನ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ವಜ್ರಮುನಿ ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಭಯಾನಕ ಕಣ್ಣೋಟ, ಕಂಚಿನ ಕಂಠ, ಗರ್ಜಿಸಿ ಎದುರಿಗಿರುವವರನ್ನು ಬೆಚ್ಚಿ ಬೀಳುವಂತೆ ಮಾಡುತ್ತಿದ್ದ ನಟನ ಪರಿಚಯವಾಗಿಬಿಡುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಜ್ರಮುನಿ ಅವರು ಹೇಗೆ ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೂ ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದಂತಹ ನಟ.

ಇದನ್ನೂ ಓದಿSalaar 2 : ಸಲಾರ್ ಸೀಕ್ವೆಲ್ ನಲ್ಲಿ ಪವರ್ ಪ್ಯಾಕ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ !!

ಚಿಕ್ಕಂದಿನಿಂದಲೂ ಕಲೆಯ ಮೇಲೆ ಅಗಾಧ ಆಸಕ್ತಿ ಹೊಂದಿದ್ದ ವಜ್ರಮುನಿಯವರು ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಸಾಕಷ್ಟು ನಾಟಕಗಳಿಗೆ ಬಣ್ಣ ಹಚ್ಚಿದ್ದರು. ತಮ್ಮ ಊರಿನಲ್ಲಿ ನಡೆದ ʼಪ್ರಚಂಡ ರಾವಣʼ ನಾಟಕದಲ್ಲಿ ಅಭಿನಯಿಸುವ ಮೂಲಕ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡ ವಜ್ರಮುನಿ ಅವರಿಗೆ ಸಿನಿಮಾಗಳ ಅವಕಾಶ ಕೈಬೀಸಿ ಕರೆದವು. ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತಮ್ಮ ಕೊನೆಯ ದಿನಗಳವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟನಾಗಿ ಮೆರೆದರು.

ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳು ವಜ್ರಮುನಿ ಅವರಿಗೆ ಆಫರ್‌ಗಳನ್ನು ನೀಡಿ ಕರೆದರೂ ಸಹ, ʼಕನ್ನಡ ನನಗೆ ಅನ್ನ ನೀಡಿದೆ, ಅದಕ್ಕೆ ನಾನೆಂದು ದ್ರೋಹ ಬಗೆಯುವುದಿಲ್ಲʼ ಎನ್ನುವ ಮೂಲಕ ಕನ್ನಡದ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದ ವಜ್ರಮುನಿಯವರು ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಲಿಲ್ಲ. ಆಗಿನ ಸ್ಟಾರ್ ಕಲಾವಿದರಷ್ಟೇ ಬೇಡಿಕೆಯನ್ನು ಹೊಂದಿದ್ದ ವಜ್ರಮುನಿ ಅವರಿಗೆ ಒಂದು ಸಿನಿಮಾದಲ್ಲಿ ಅಭಿನಯಿಸಲು ಹತ್ತರಿಂದ ಐವತ್ತು ಸಾವಿರ ರೂ. ಸಂಭಾವನೆ ನೀಡಲಾಗುತ್ತಿತ್ತಂತೆ. ಆಗಿನ ಹತ್ತು ಸಾವಿರ ಈಗಿನ ಒಂದು ಲಕ್ಷಕ್ಕೆ ಸಮ. ಹಾಗಿದ್ದರೂ ಇವರು ಪರಭಾಷೆಗಳಲ್ಲಿ ಸಿನಿಮಾ ಒಪ್ಪಿಕೊಳ್ಳದೆ ಇರುವುದು, ಇವರಿಗಿದ್ದ ಕನ್ನಡದ ಮೇಲಿನ ಪ್ರೀತಿಯನ್ನು ತೋರಿಸಿಸುತ್ತದೆ. 

ಇದನ್ನೂ ಓದಿ: A : 'ಯುಐ' ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿ

ಅಂದಿನ ಮೈಸೂರು ರಾಜ್ಯಕ್ಕೆ ಸೇರಿದ ಬೆಂಗಳೂರಿನ ಜಯನಗರದ ಕನಕನಪಾಳ್ಯದಲ್ಲಿ 1944ರ ಮೇ 11ರಂದು ಜನಿಸಿದ್ದ ವಜ್ರಮುನಿಯವರು 1969ರಲ್ಲಿ ತೆರೆಕಂಡ ʼಮಲ್ಲಮ್ಮನ ಪವಾಡʼ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಅವರು ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2006ರ ಜನವರಿ 5ರಂದು ತಮ್ಮ 61ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News