South Actress Bhamaa Shared About Divorse: ಸ್ಯಾಂಡಲ್ವುಡ್ನಲ್ಲಿ ʻಮೊದಲಸಲʼ ಸಿನಿಮಾ ಮೂಲಕ ಪರಿಚಯವಾದ ಮಾಲಿವುಡ್ ನಟಿ ಭಾಮಾ ದಾಂಪ್ರತ್ಯ ಜೀವನದಲ್ಲಿ ಬಿರುಕು ಮೂಡಿದೆ. ನಟಿ ಭಾಮಾ ತಮ್ಮ ಅಪ್ಪ-ಅಮ್ಮ ನೋಡಿದ ಹುಡುಗ ಅರುಣ್ ಜಗದೀಶ್ ಅವರನ್ನು ಕಳೆದ ನಾಲ್ಕು ವರ್ಷ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದಾಗಿದೆಯೆಂಬ ಗಾಳಿ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಇದೀಗ ಈ ಸುದ್ದಿ ನಿಜವಾಗಿದೆ ಎನ್ನಲಾಗಿದೆ.
ಮಾಲಿವುಡ್ ನಟಿ ಭಾಮಾ ತಮ್ಮ ವಿಚ್ಛೇದನ ಸುಳಿವು ನೀಡಿರುವಂತೆ ಇದೆ. ಈ ನಟಿ ಇತ್ತೀಚೆಗೆ ತಮ್ಮ ಸೋಶಿಯಲ್ ಮಿಡಿಯಾದ ಖಾತೆಯಲ್ಲಿ ತಮ್ಮ ಮಗಳ ಜೊತೆಗಿರುವ ಫೋಟೋವನ್ನುನ ಶೇರ್ ಮಾಡಿಕೊಂಡು ತಾವು ಸಿಂಗಲ್ ಮದರ್ ಅನ್ನೋ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ. ಭಾಮಾ ಹಾಕಿರುವ ಈ ಪೋಸ್ಟ್ ಮೂಲಕ ಈಕೆ ಡಿವೋರ್ಸ್ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
ಇದನ್ನೂ ಓದಿ: ಮಾನ್ಸೂನ್ ವೇಳೆಗೆ "ಭಗೀರಥ"ನ ಆಗಮನ.. ಕುತೂಹಲ ಮೂಡಿಸಿದೆ ವಿಭಿನ್ನ ಕಥಾಹಂದರ ಹೊಂದಿರುವ ಟೀಸರ್!
ಹೌದು.. ಸೌತ್ ನಟಿ ಭಾಮಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನ ಪೋಸ್ಟ್ ಒಂದರಲ್ಲಿ ತಮ್ಮ ಮಗಳ ಜೊತೆಗಿನ ಫೋಟೋದೊಂದಿಗೆ ಕ್ಯಾಪ್ಶನ್ನಲ್ಲಿ "ನನಗೆ ನನ್ನ ಶಕ್ತಿ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ನಾನು ಸಿಂಗಲ್ ಮದರ್ ಆದ್ಮೇಲೆ ಆ ಶಕ್ತಿಯ ಅರಿವಾಗಿದೆ. ಈಗ ನಾನು ಮತ್ತು ನನ್ನ ಮಗಳು ಅಷ್ಟೇ" ಎಂದು ಬರೆದಿದ್ದಾರೆ. ಈ ರೀತಿ ನಟಿ ಭಾಮಾ ತಮ್ಮ ವಿಚ್ಛೇದನ ಕುರಿತಾಗಿ ಸುಳಿವು ನೀಡಿದ್ದಾರೆ.
ನಟಿ ಭಾಮಾ ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ʻಮೊದಲಸಲʼ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಂತರ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ʻಶೈಲೂʼ ಹಾಗೂ ʻಆಟೋರಾಜʼ, ದೂದ್ ಪೇಡ ದಿಗಂತ್ ಜೊತೆಗೆ ʻಬರ್ಫಿʼ, ಹಾಸ್ಯನಟ ಮಿತ್ರ ಜೊತೆಗೆ ʻರಾಗʼ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆಗೆ ʻಅರ್ಜುನ್ ʼ ಹೀಗೆ ಚಂದನವನದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.