ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರಾ ಸಾಯಿ ಪಲ್ಲವಿ? ವೈರಲ್‌ ಪೋಟೋ ನೋಡಿ ಫ್ಯಾನ್ಸ್‌ ಶಾಕ್!!

South Actress Sai Pallavi: ಸೌತ್‌ನ ಫೇಮಸ್‌ ನಟಿ.. ಪಡ್ಡೆ ಹುಡುಗರ ಕ್ರಷ್‌.. ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು.. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪೋಟೋವೊಂದು ಸಖತ್‌ ಸದ್ದು ಮಾಡುತ್ತಿದೆ.. 

Written by - Savita M B | Last Updated : May 2, 2024, 10:18 AM IST
  • ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳನ್ನು ಸೆಳೆಯುವ ನಟಿಯರೂ ಇದ್ದಾರೆ.
  • ಸಾಯಿ ಪಲ್ಲವಿ ಕಮರ್ಷಿಯಲ್‌ ನಟಿಯಲ್ಲ
 ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರಾ ಸಾಯಿ ಪಲ್ಲವಿ? ವೈರಲ್‌ ಪೋಟೋ ನೋಡಿ ಫ್ಯಾನ್ಸ್‌ ಶಾಕ್!! title=

Sai Pallavi: ನಟಿಯಾಗಲು ಮೊದಲು ಬೇಕಾಗಿರುವುದು ಸೌಂದರ್ಯ.. ಹೆಚ್ಚು ಆಕರ್ಷಕ ನೋಟವನ್ನು ಹೊಂದಿರುವ ನಾಯಕಿಯರನ್ನು ನೋಡಲು ಜನ ಇಷ್ಟಪಡುತ್ತಾರೆ.. ಆದರೆ ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳನ್ನು ಸೆಳೆಯುವ ನಟಿಯರೂ ಇದ್ದಾರೆ.. ಅವರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು... 

ಸಾಯಿ ಪಲ್ಲವಿ ಕಮರ್ಷಿಯಲ್‌ ನಟಿಯಲ್ಲ.. ಅವರು ನಾಯಕಿಯ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.. ವ್ಯಕ್ತಿತ್ವ, ಸೌಂದರ್ಯದಲ್ಲಿ ನಟಿ ಸಾಯಿಪಲ್ಲವಿ ಇತರ ನಾಯಕಿಯರಿಗಿಂತ ಸ್ವಲ್ಪ ಮೇಲೆಯೇ ಇದ್ದಾರೆ.. ಸದ್ಯ ಸೌತ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.. ಯಿಪಲ್ಲವಿಯ ನ್ಯಾಚುರಲ್‌ ಬ್ಯೂಟಿಗೆ ಅಭಿಮಾನಿಗಳು ಫಿದಾನ ಆಗಿದ್ದಾರೆ. 

ಇದನ್ನೂ ಓದಿ-Vivah Muhurat 2024: 24 ವರ್ಷಗಳ ನಂತರ ಈ ತಿಂಗಳುಗಳಲ್ಲಿ ಇಲ್ಲ ಮದುವೆ ಮಹೂರ್ತ..!
 
ಈ ಜನರೇಷನ್ ನಾಯಕಿಯರಲ್ಲಿ ಸಾಯಿ ಪಲ್ಲವಿ ತುಂಬಾ ವಿಶೇಷ. ಏಕೆಂದರೆ ನಟಿ ಬಹುತೇಕ ವಿತ್‌ಔಟ್‌ ಮೇಕ್‌ ಅಪ್‌ ನಟನೆ ಮಾಡುತ್ತಾರೆ.. ಗ್ಲಾಮರಸ್ ಪಾತ್ರಗಳಿಂದ ದೂರವಿರುವ ಇವರು ಹೆಚ್ಚು ನಾಯಕಿ ಪ್ರಧಾನ ಪ್ರಾತಗಳತ್ತ ಒಲವು ತೋರುತ್ತಾರೆ. 

ಅನೇಕ ನಾಯಕಿಯರು ಸೌಂದರ್ಯಕ್ಕಾಗಿ ದೇಹದ ಕೆಲವು ಭಾಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅದೇ ರೀತಿ ಇದೀಗ ನಟಿ ಸಾಯಿ ಪಲ್ಲವಿ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.  

ಹೌದು ಎಲ್ಲರೂ ಗಮನಿಸಿರುವಂತೆ ಸಾಯಿ ಪಲ್ಲವಿ ಮುಖದಲ್ಲಿ ಮೊಡವೆಗಳಿವೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ಆ ಪಿಂಪಲ್ಸ್‌ಗಳೊಂದಿಗೆ ಆಕ್ಟ್‌ ಮಾಡಿದ್ದಾರೆ.. ಸದ್ಯ ಸಾಯಿಪಲ್ಲವಿ ಮುಖದಲ್ಲಿ ಮೊಡವೆ ಕಡಿಮೆಯಾಗಿವೆ.. ಹೀಗಾಗಿ ಅವರು ಸರ್ಜರಿ ಮಾಡಿಸಿಕೊಂಡಿದ್ದಾರಾ? ಇದ್ದಕ್ಕಿಂದ್ದಂತೆ ಮೊಡವೆಗಳು ಕಡಿಮೆಯಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳು ನೆಟಿಜನ್ಸ್‌ ಮನದಲ್ಲಿ ಮೂಡಿದ್ದವು.. ಈ ಎಲ್ಲ ಗೊಂದಲಗಳಿಗೆ ಸ್ವತಃ ಸಾಯಿ ಪಲ್ಲವಿ ಉತ್ತರ ನೀಡಿದ್ದಾರೆ.. 

ಈ ಬಗ್ಗೆ ಮಾತನಾಡಿದ ನಟಿ "ಪ್ರೇಮಂ ಸಿನಿಮಾದ ಟೈಮಲ್ಲಿ ನನ್ನ ಮುಖದಲ್ಲಿ ಮೊಡವೆಗಳು ಜಾಸ್ತಿ ಆಗ್ತಿತ್ತು. ಆ ಚಿತ್ರದಲ್ಲಿ ನನಗೆ ಆಫರ್ ಬರಲು ಮೊಡವೆಯೂ ಕಾರಣವಾಗಿತ್ತು. ಈಗ ನನ್ನ ಮುಖದಲ್ಲಿ ಮೊಡವೆಗಳಿಲ್ಲ. ಅದಕ್ಕೆ ಏನಾದರೂ ಚಿಕಿತ್ಸೆ ಪಡೆದಿದ್ದೀರಾ? ನೀವು ಚಿಕಿತ್ಸೆಯನ್ನು ಬಳಸಿದ್ದೀರಾ? ಎಂದು ಎಲ್ಲರೂ ಕೇಳುತ್ತಿದ್ದಾರೆ. 

ಇದನ್ನೂ ಓದಿ-ಜನ್ಮದಿನದಂದೇ 'ವೀರ್'ನಾಗಿ ಜೆಕೆ ಎಂಟ್ರಿ… ಹೇಗಿದೆ ಮೋಷನ್ ಪೋಸ್ಟರ್..?

ವಾಸ್ತವವಾಗಿ ನಾನು ಯಾವುದೇ ಚಿಕಿತ್ಸೆ ತೆಗೆದುಕೊಂಡಿಲ್ಲ... ಹದಿಹರೆಯದ ಹುಡುಗಿಯರಲ್ಲಿ ಮೊಡವೆ ಸಾಮಾನ್ಯ.. ಅವುಗಳಿಗೆ ಚಿಕಿತ್ಸೆ ಅಗತ್ಯವಿಲ್ಲ. ವಯಸ್ಸಾದಂತೆ ಕಡಿಮೆಯಾಗುತ್ತವೆ.. ನಾನು ಮುಖಕ್ಕೆ ಮತ್ತು ಕೂದಲಿಗೆ ಅಲೋವೆರಾ ಜೆಲ್ ಬಳಸುತ್ತೇನೆ. ಅದಕ್ಕೇ ನನ್ನ ಕೂದಲು ದಪ್ಪಗಿದೆ" ಎಂದಿದ್ದಾರೆ.. 

ಸಾಯಿ ಪಲ್ಲವಿ ಸದ್ಯ ನಾಗ ಚೈತನ್ಯ ಎದುರು ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.. ಇದಲ್ಲದೇ ಸಾಯಿ ಪಲ್ಲವಿಯ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಎದುರು ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News