ಕಾಂಗ್ರೆಸ್ ಅಂಗಳದಲ್ಲಿ 'ಮಹಾ' ಚೆಂಡು!

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನದ ನಂತರ ಶಿವಸೇನೆ ಸರ್ಕಾರ ರಚಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ.

Last Updated : Nov 11, 2019, 02:06 PM IST
ಕಾಂಗ್ರೆಸ್ ಅಂಗಳದಲ್ಲಿ 'ಮಹಾ' ಚೆಂಡು! title=

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನದ ನಂತರ ಶಿವಸೇನೆ ಸರ್ಕಾರ ರಚಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಶರದ್ ಪವಾರ್ ಅವರ ಪಕ್ಷದ ಎನ್‌ಸಿಪಿ ಜೊತೆ ಶಿವಸೇನೆ ಮಾತುಕತೆ ನಡೆಯುತ್ತಿದೆ. ಈ ಸಂಬಂಧ ಶರದ್ ಪವಾರ್ ಎನ್‌ಸಿಪಿಯ ಹಿರಿಯ ನಾಯಕರ ಸಭೆ ಕರೆದಿದ್ದರು. ಶಿವಸೇನೆಗೆ ಬೆಂಬಲ ನೀಡುವ ವಿಷಯದಲ್ಲಿ ಕಾಂಗ್ರೆಸ್ ನಿರ್ಧಾರದ ನಂತರ ಎನ್‌ಸಿಪಿ ಮುಂದಿನ ಹೆಜ್ಜೆ ಇಡಲಿದೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಇದೀಗ ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚಿಸುವ ವಿಚಾರವಾಗಿ ಚೆಂಡು ಕಾಂಗ್ರೆಸ್ ಅಂಗಳದಲ್ಲಿದ್ದು,  ಕಾಂಗ್ರೆಸ್ ಹೈಕಮಾಂಡ್ ಸಂಜೆ ನಾಲ್ಕು ಗಂಟೆಗೆ ಮಹಾರಾಷ್ಟ್ರ ಘಟಕದೊಂದಿಗೆ ಸಭೆ ನಡೆಸಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿದೆ. ಸಂಜೆ ಐದು ಗಂಟೆಯಿಂದ 8 ಗಂಟೆಯೊಳಗೆ ನೂತನ ಸರ್ಕಾರ ರಚನೆ ಕುರಿತು ಒಂದು ಚಿತ್ರಣ ಹೊರಬೀಳುವ ಸಾಧ್ಯತೆ ಇದೇ ಎಂದು ನಿರೀಕ್ಷಿಸಲಾಗುತ್ತಿದೆ.
ಮೂಲಗಳ ಪ್ರಕಾರ, ಸಂಜೆ 5 ಗಂಟೆಯೊಳಗೆ ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಬಳಿಕ ಎನ್‌ಸಿಪಿ ಶಿವಸೇನೆಗೆ ಬೆಂಬಲ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ಅದರ ನಂತರ ಸಂಜೆ 7 ಗಂಟೆ ಸುಮಾರಿಗೆ ಶಿವಸೇನೆ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಇಂದು ಸಂಜೆ ಏಳೂವರೆ(7:30) ಒಳಗೆ ನಿರ್ಧಾರ ತಿಳಿಸುವಂತೆ ರಾಜ್ಯಪಾಲರು ಶಿವಸೇನೆಗೆ ಗಡುವು ನೀಡಿದ್ದಾರೆ.  288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 145 ಶಾಸಕರು ಅಗತ್ಯವಿದೆ. ಬಿಜೆಪಿಯಲ್ಲಿ 105 ಶಾಸಕರು ಇದ್ದಾರೆ. ಸಂಖ್ಯಾ ಬಲದ ದೃಷ್ಟಿಯಿಂದ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ. ಶಿವಸೇನೆ (56), ಎನ್‌ಸಿಪಿ (54) ಮತ್ತು ಕಾಂಗ್ರೆಸ್ (44) ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ, ಅವರು ಕೆಲವು ಸ್ವತಂತ್ರರು ಸೇರಿದಂತೆ ಒಟ್ಟು 161 ಶಾಸಕರ ಬೆಂಬಲವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

Trending News