royal challengers bengaluru: ಐಪಿಎಲ್ 2024 ರ, ಪಂದ್ಯಾವಳಿಯ 41 ನೇ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಈ ಹಣಾಹಣಿ ಪಂದ್ಯದಲ್ಲಿ ಆರ್‌ಸಿಬಿ 35 ರನ್‌ಗಳಿಂದ ಎಸ್‌ಆರ್‌ಎಚ್ ವಿರುದ್ಧ ಜಯ ಸಾಧಿಸಿದೆ.
ಇದನ್ನೂ ಓದಿ-Sachin Tendulkar: ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ.. ಸಚಿನ್ ತೆಂಡೂಲ್ಕರ್ ಎಷ್ಟು ಸಾವಿರ ಕೋಟಿ ಆಸ್ತಿಗೆ ಒಡೆಯ ಗೊತ್ತಾ?
ಈ ಪಂದ್ಯಲ್ಲಿ ಟಾಸ್ ಗೆದ್ದ ಆರ್‌ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೇಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.. ನಂತರ ರಜತ್ ಪಾಟಿದಾರ್ ಹಾಗೂ ಕ್ಯಾಮರೂನ್ ಅವರ ಭರ್ಜರಿ ಬ್ಯಾಟಿಂಗ್‌ನಿಂದ ನಿಗದಿತ 20 ಓರವ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 206 ರನ್ ಗಳಿಸಿ ಹೈದರಾಬಾದ್ ಗೆಲುವಿಗೆ 207 ರನ್ ಟಾರ್ಗೆಟ್ ನೀಡಿತು.. ಈ ಸ್ಕೋರ್ ಬೆನ್ನತ್ತಿದ ಹೈದರಾಬಾದ್ ತಂಡ 20 ಓವರ್ಗೆ 8 ವಿಕೆಟ್‌ಗೆ 171 ಗಳಿಸಿ 35 ರನ್‌ಗಳ ಅಂತರದಿಂದ ಮುಗ್ಗರಿಸಿತು..
ರೋಚಕ ಪಂದ್ಯದಲ್ಲಿ RCB ನೀಡಿದ ದೊಡ್ಡ ಟಾರ್ಗೆಟ್‌ನ್ನು ಹಿಂಬಾಲಿಸಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತವಾಯಿತು.. ತಂಡದ ಪ್ರಮುಖ ಆಟಗಾರ ಟ್ರಾವಿಸ್ ಹೆಡ್ ಕೇವಲ 1 ರನ್ ಗಳಿಸಿ ಔಟಾದರು.. ಆದರೆ ಅಡೇನ್ ಮಾರ್ಕಮ್ 7 ರನ್, ಅಭಿಷೇಕ್ ಶರ್ಮಾ 31 ರನ್, ಹೆನ್ರಿಚ್ ಕ್ಲಾಸಿನ್ 7 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಪ್ಯಾಟ್ ಕಮೀನ್ಸ್ 31 ರನ್, ಅಬ್ದುಲ್ ಸಮೀದ್ 10 ರನ್, ಭುವನೇಶ್ವರ್ ಕುಮಾರ್ 13 ರನ್ ಗಳಿಸಿದರು.. ಈ ಮೂಲಕ ಕಳೆದ ಪಂದ್ಯಗಳಲ್ಲಿ ಅಬ್ಬರದಿಂದ ಆಟವಾಡಿದ್ದ ಹೈದರಾಬಾದ್ ಇಂದು ತನ್ನ ತವರು ಮೈದಾನದಲ್ಲಿಯೇ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋಲುಂಡಿತು..
ಕಳೆದ ಪಂದ್ಯದಲ್ಲಿ ಬೆಂಗಳೂರು ತವರು ನೆಲವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾದಾಗ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಗಳಿಸಿ ಇತಿಹಾಸ ನಿರ್ಮಿಸಿದ್ದರು. ಹೈದರಾಬಾದ್ 20 ಓವರ್‌ಗಳಲ್ಲಿ 287 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ಮತ್ತು RCB ಆಟಗಾರರು ಕೇವಲ 262 ರನ್ ಗಳಿಸಿ ಸೋಲುಂಡಿದ್ದರು.. ಇಂದು ಕೂಡ ಉಭಯ ತಂಡಗಳ ನಡುವಿನ ಹೋರಾಟ ರೋಚಕವಾಗಿರಬಹುದು ಎಂದು ನಿರೀಕ್ಷಿಸಲಾಗಿತ್ತು.. ಆದರೆ, ಬೆಂಗಳೂರು ಭಾರಿ ಮೊತ್ತ ಗಳಿಸಿ ಹೈದರಾಬಾದ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ