ಹುತಾತ್ಮ ಪೊಲೀಸರಿಗೆ ಕರ್ನಾಟಕದ ವತಿಯಿಂದ ಗೌರವ ಸಮರ್ಪಣೆ

ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಕರ್ನಾಟಕದ ವತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ (ಪೆರೇಡ್) ನಡೆಸಿದರು.

Last Updated : Nov 8, 2019, 08:23 PM IST
ಹುತಾತ್ಮ ಪೊಲೀಸರಿಗೆ ಕರ್ನಾಟಕದ ವತಿಯಿಂದ ಗೌರವ ಸಮರ್ಪಣೆ title=

ನವದೆಹಲಿ: ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಕರ್ನಾಟಕದ ವತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ (ಪೆರೇಡ್) ನಡೆಸಲಾಯಿತು.

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಎಡಿಜಿಪಿ ಪಿ.ಎಸ್. ಸಂಧು, ಕೆಎಸ್ಆರ್ ಪಿ, ಎಡಿಜಿಪಿ ಅಲೋಕು ಕುಮಾರ್, ರಾಷ್ಟ್ರೀಯ ಭದ್ರತಾ ದಳದ, ಡಿಐಜಿ ಶ್ರೀಮತಿ ಸೋನಿಯಾ ನಾರಂಗ್, ಸಿಬಿಐ  ನಿವೃತ್ತಿ ಮಹಾನಿರ್ದೇಶಕ ಕಾರ್ತಿಕೇಯನ್ ಅವರ ಉಪಸ್ಥಿತಿ ಮತ್ತು ಕಮಾಡೆಂಟ್ ರಾಮಕೃಷ್ಣ ಪ್ರಸಾದ್ ನೇತೃತ್ವದ ಕೆಎಸ್ಆರ್ ಪಿ 3ನೇ ಪಡೆಯು ಶುಕ್ರವಾರ ಇಲ್ಲಿನ ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಕರ್ನಾಟಕದ ವತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ (ಪೆರೇಡ್) ನಡೆಸಿದರು. ಹುತಾತ್ಮ ಪೊಲೀಸರ ಗೌರವಾರ್ಥ 20 ನಿಮಿಷಗಳ ಕಾಲ ಡ್ರಿಲ್ ಮಾಡಲಾಯಿತು. 

ಬಳಿಕ ಸುದ್ದಿಗಾರರದೊಂದಿಗೆ ಮಾತನಾಡಿದ ರಾಜ್ಯದ ಪೊಲೀಸ್ ಮಹಾ ನಿರ್ದಾಶಕಿ ನೀಲಮಣಿ ಎನ್ ರಾಜು, ರಾಜ್ಯ ಪೊಲೀಸರ ಪರವಾಗಿ ರಾಷ್ಟ್ರೀಯ ಸ್ಮಾರಕದಲ್ಲಿ ನಮನ ಸಲ್ಲಿಸಿದ್ದೇವೆ. ಪ್ರತಿಯೊಂದು ರಾಜ್ಯವೂ ಬಂದು ಇಲ್ಲಿ ಬಂದು ಪೆರೇಡ್ ಮಾಡಬೇಕು ಹಾಗೂ ನಮನ ಸಲ್ಲಿಸಬೇಕು. ಇಂದು ಕರ್ನಾಟಕ ರಾಜ್ಯ ಪೊಲೀಸರಿಂದ ನಮನ ಸಲ್ಲಿಸಲಾಗಿದೆ. ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಇಡೀ ಪೊಲೀಸ್ ಚರಿತ್ರೆ ದಾಖಲಿಸಲಾಗಿದೆ ಎಂದು ತಿಳಿಸಿದರು.
 

Trending News