Poha Health Benefits: ಬೆಳಗಿನ ಉಪಹಾರ ಅವಲಕ್ಕಿ ತಿನ್ನುವುದರಿಂದ ಸಿಗುತ್ತೆ ಈ 10 ಪ್ರಯೋಜನಗಳು!

Poha Health Benefits: ಬೆಳಗಿನ ಉಪಾಹಾರದಲ್ಲಿ ಅಥವಾ ಸಂಜೆಯ ಸ್ನ್ಯಾಕ್ಸ್‌ನಲ್ಲಿ ಸೇವಿಸಿದಾಗ ಅವಲಕ್ಕಿ ಸೇವಿಸಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. 

Written by - Chetana Devarmani | Last Updated : Apr 4, 2024, 07:44 AM IST
  • ಅವಲಕ್ಕಿ ಸೇವಿಸುವುದರಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ
  • ಇದು ಕೆಲವು ಸಮಸ್ಯೆಗಳನ್ನು ದೂರ ಮಾಡುತ್ತದೆ
  • ಅವಲಕ್ಕಿ ತಿನ್ನುವುದರಿಂದ ಸಿಗುವ 10 ಪ್ರಯೋಜನಗಳು
Poha Health Benefits: ಬೆಳಗಿನ ಉಪಹಾರ ಅವಲಕ್ಕಿ ತಿನ್ನುವುದರಿಂದ ಸಿಗುತ್ತೆ ಈ 10 ಪ್ರಯೋಜನಗಳು! title=

Avalakki Health Benefits: ಅವಲಕ್ಕಿ ಬೆಳಗಿನ ಉಪಾಹಾರ ಅಥವಾ ಸಂಜೆಯ ತಿಂಡಿಯಲ್ಲಿ ಸೇವಿಸಬಹುದಾದ ಬೆಸ್ಟ್‌ ಆಹಾರ. ಅವಲಕ್ಕಿ ಸೇವಿಸುವುದರಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ. ಇದು ಕೆಲವು ಸಮಸ್ಯೆಗಳನ್ನು ದೂರ ಮಾಡುತ್ತದೆ. ಅವಲಕ್ಕಿ ತಿನ್ನುವುದರಿಂದ ಸಿಗುವ 10 ಆರೋಗ್ಯ ಪ್ರಯೋಜನಗಳು ಇಲ್ಲಿವೆ. 

ಕಾರ್ಬೋಹೈಡ್ರೇಟ್‌ 

ಅವಲಕ್ಕಿ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿವೆ. ಇದು ನಿಮಗೆ ದಿನವಿಡೀ ಬೇಕಾದ ಶಕ್ತಿಯನ್ನು ನೀಡುತ್ತದೆ. ಅವಲಕ್ಕಿಯನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಿದರೆ ದಿನವಿಡೀ ಚಟುವಟಿಕೆಯಿಂದ ಕೂಡಿರುತ್ತೀರಿ.

ಕ್ಯಾಲೋರಿ

ಅವಲಕ್ಕಿಯಲ್ಲಿ ಕ್ಯಾಲೋರಿ ಮಟ್ಟವು ತುಂಬಾ ಕಡಿಮೆಯಾಗಿದೆ. ತೂಕ ಇಳಿಕೆ ಮಾಡಲು ಶ್ರಮಿಸುತ್ತಿರುವವರು ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಸೇವಿಸಬೇಕು. ಇದರಿಂದ ಅವರು ತೂಕ ಹೆಚ್ಚಾಗುವುದಿಲ್ಲ.

ಗ್ಲುಟನ್ ಮುಕ್ತ 

ಅವಲಕ್ಕಿ ಗ್ಲುಟನ್ ಮುಕ್ತವಾದ ಆಹಾರವಾಗಿದೆ. ಇದು ಗ್ಲುಟನ್ ಅಲರ್ಜಿಯಿಂದ ಬಳಲುತ್ತಿರುವವರಿಗೆ ಉತ್ತಮ ಉಪಹಾರವಾಗಿದೆ.

ಇದನ್ನೂ ಓದಿ: ಬೆಳಗಿನ ಉಪಾಹಾರಕ್ಕೆ ಓಟ್ಸ್ ಜೊತೆ ಒಂದು ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನ

ಸುಲಭವಾಗಿ ಜೀರ್ಣವಾಗುತ್ತದೆ

ಅವಲಕ್ಕಿ ಯಿಂದ ಮಾಡಿದ ಯಾವುದೇ ಆಹಾರವನ್ನು ಸೇವಿಸಿದರೂ, ಅದು ಸುಲಭವಾಗಿ ಜೀರ್ಣವಾಗುತ್ತದೆ 

ಕಬ್ಬಿಣಾಂಶ 

ಅವಲಕ್ಕಿ ಕಬ್ಬಿಣಾಂಶ ಹೊಂದಿದೆ. ಇದು ದೇಹದಲ್ಲಿ ರಕ್ತದ ಮಟ್ಟವನ್ನು ಕಾಪಾಡುತ್ತದೆ. ರಕ್ತಹೀನತೆಯ ತೊಂದರೆಗಳನ್ನು ತಡೆಗಟ್ಟಲು ಹಿಮೋಗ್ಲೋಬಿನ್ ಅನ್ನು ಸರಿಯಾಗಿ ನಿರ್ವಹಿಸುತ್ತದೆ.

ಫೈಬರ್ 

ಅವಲಕ್ಕಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

ಪೋಷಕಾಂಶ ಸಮೃದ್ಧ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅವಲಕ್ಕಿ ವಿಟಮಿನ್ ಬಿ1, ಬಿ2, ಬಿ3, ಬಿ6 ಹೊಂದಿದೆ. ನಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣ, ಮೆಗ್ನೀಸಿಯಮ್, ರಂಜಕದಂತಹ ಖನಿಜಗಳು ಅವಲಕ್ಕಿಯಲ್ಲಿವೆ.

ಕೊಬ್ಬಿನ ಪ್ರಮಾಣ ಕಡಿಮೆ

ಅವಲಕ್ಕಿಯಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಿದ್ದು, ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಆದ್ದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಇದನ್ನೂ ಓದಿ: ದೇಹದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತೆ ಈ ಒಣ ಎಲೆ ನೆನೆಸಿಟ್ಟ ನೀರು! ಮಧುಮೇಹಕ್ಕೂ ಪರಮೌಷಧಿ! 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News