ನಟ ಸಿದ್ದಾರ್ಥ್ ಅವರನ್ನ ಮದುವೆಯಾಗಲಿರುವ ಅದಿತಿ ರಾವ್ ಹೈದರಿ ಮೊದಲ ಪತಿ ಯಾರು ಗೊತ್ತಾ? ಖ್ಯಾತ ನಟಲ್ಲದೇ, ಸರ್ಕಾರಿ ಅಧಿಕಾರಿಯೂ ಆಗಿದ್ದ ಈತ!!

Aditi Rao Hydari first husband: ಶ್ರೀರಂಗಾಪುರ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹೀರೋ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾವಾದರು ಎನ್ನಲಾಗಿತ್ತು.. ಆದರೆ ಅವರು ಮದುವೆಯಾಗಿಲ್ಲ ಕೇವಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸ್ವತಃ ಅದಿತಿ ರಾವ್ ಹೈದರಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ. ಹಾಗಾದ್ರೆ  ನಟಿ ಅದಿತಿಯ ಮೊದಲ ಪತಿ ಯಾರು? 

Written by - Savita M B | Last Updated : Mar 29, 2024, 08:32 AM IST
  • ಟಾಲಿವುಡ್ ಬ್ಯೂಟಿ ಅದಿತಿ ರಾವ್ ಹೈದರಿ ನಾಯಕ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ.
  • ಹೀರೋ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾವಾದರು ಎನ್ನಲಾಗಿತ್ತು.
  • ಹಾಗಾದ್ರೆ ನಟಿ ಅದಿತಿ ಮೊದಲ ಪತಿಯ ಬಗ್ಗೆ ಇದೀಗ ತಿಳಿಯೋಣ
ನಟ ಸಿದ್ದಾರ್ಥ್ ಅವರನ್ನ ಮದುವೆಯಾಗಲಿರುವ ಅದಿತಿ ರಾವ್ ಹೈದರಿ ಮೊದಲ ಪತಿ ಯಾರು ಗೊತ್ತಾ? ಖ್ಯಾತ ನಟಲ್ಲದೇ, ಸರ್ಕಾರಿ ಅಧಿಕಾರಿಯೂ ಆಗಿದ್ದ ಈತ!! title=

Aditi Rao Hydari: ಕಳೆದ ಕೆಲವು ದಿನಗಳಿಂದ ಟಾಲಿವುಡ್ ಬ್ಯೂಟಿ ಅದಿತಿ ರಾವ್ ಹೈದರಿ ನಾಯಕ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ.  ಇಬ್ಬರೂ ಕೆಲವು ತಿಂಗಳುಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀ ರಂಗಾಪುರ ರಂಗನಾಥ ಸ್ವಾಮಿ ದೇವಸ್ಥಾನದ ಮಂಟಪದಲ್ಲಿ ಅವರ ಮದುವೆ ನಡೆದಿದೆ ಎಂಬ ವದಂತಿಗಳು ಕೇಳಿಬಂದಿವೆ. ಆದರೆ ಅದು ಮದುವೆಯಲ್ಲ.. ನಿಶ್ಚಿತಾರ್ಥ ಅಷ್ಟೆ. ಇತ್ತೀಚೆಗಷ್ಟೇ ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಪ್ರಕಟಿಸಿ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಚಿತಪಡಿಸಿದರು. ಹಾಗಾದ್ರೆ ನಟಿ ಅದಿತಿ ಮೊದಲ ಪತಿಯ ಬಗ್ಗೆ ಇದೀಗ ತಿಳಿಯೋಣ.. 
 
ನಟಿ ಅದಿತಿ ರಾವ್ ಹೈದರಿ ಅವರ ಮೊದಲ ಪತಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ಅವರು OTT ನಲ್ಲಿ ದೊಡ್ಡ ಮನ್ನಣೆ ಪಡೆದರು. ಅದಿತಿ ಅವರ ಮೊದಲ ವಿವಾಹವು ಜನಪ್ರಿಯ ನಟ ಸತ್ಯದೀಪ್ ಮಿಶ್ರಾ ಅವರೊಂದಿಗೆ 2002 ರಲ್ಲಿ ಆಗಿತ್ತು. ಹಲವು ವರ್ಷಗಳಿಂದ ಸಂದರ್ಶನಗಳಲ್ಲಿ ಎಲ್ಲಿಯೂ ತನ್ನ ಮದುವೆಯ ಬಗ್ಗೆ ಪ್ರಸ್ತಾಪಿಸದ ಅದಿತಿ, 2013 ರಲ್ಲಿ ಸಂದರ್ಶನವೊಂದರಲ್ಲಿ ತಾವು ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ-Thalaivar 171: ಸೂಪರ್‌ ಸ್ಟಾರ್ ರಜನಿಕಾಂತ್‌ ಹೊಸ ಸಿನಿಮಾದ ಪೋಸ್ಟರ್‌ ಔಟ್!‌

ಅದಿತಿಯ ಮೊದಲ ಪತಿ, ಸತ್ಯದೀಪ್ ಮಿಶ್ರಾ, ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಮತ್ತು ಕಾರ್ಪೊರೇಟ್ ವಕೀಲರಾಗಿ ದೀರ್ಘಕಾಲ ಕೆಲಸ ಮಾಡಿದ್ದಾರೆ.. 

ಇದನ್ನೂ ಓದಿ-Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ!

ಅದಿತಿಯ ಮೊದಲ ಪತಿ ಸತ್ಯದೀಪ್ ಮುಂಬೈನಲ್ಲಿ ಜಾಹೀರಾತಿನಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಸಿನಿಮಾ ‘ಚಿಲ್ಲರ್ ಪಾರ್ಟಿ’. ಆದರೆ ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಚಿತ್ರದ ಮೂಲಕ ಅವರಿಗೆ ಮನ್ನಣೆ ಸಿಕ್ಕಿತು. ಈ ಚಿತ್ರದಲ್ಲಿ ಅವರು ರಾಣಿ ಮುಖರ್ಜಿ ಜೊತೆ ಕಾಣಿಸಿಕೊಂಡಿದ್ದರು. ನಂತರ ಸತ್ಯದೀಪ್ ಚಿತ್ರಗಳಲ್ಲಿ ಹೆಚ್ಚು ಮನ್ನಣೆ ಪಡೆಯದ ಕಾರಣ, ಅವರು OTT ಕಡೆಗೆ ತಿರುಗಿದರು. 

ಅದಿತಿ ರಾವ್ ಹೈದರಿಯಿಂದ ವಿಚ್ಛೇದನದ ನಂತರ, ಸತ್ಯದೀಪ್ ಮಿಶ್ರಾ ಅವರು 27 ಜನವರಿ 2013 ರಂದು ಟಾಪ್ ನಟಿ ನೀನಾ ಗುಪ್ತಾ ಅವರ ಪುತ್ರಿ ಮಸಾಬಾ ಗುಪ್ತಾ ಅವರನ್ನು ವಿವಾಹವಾದರು. ಇದು ಮಸಾಬಾ ಅವರ ಎರಡನೇ ವಿವಾಹವೂ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News