Siddharth Aditi wedding : ತಮಿಳು ಖ್ಯಾತ ನಟ ಸಿದ್ದಾರ್ಥ್ ಮತ್ತು ಬಹುಭಾಷಾ ನಟಿ ಅದಿತಿ ರಾವ್ ಗುಟ್ಟಾಗಿ ಮದುವೆಯಾಗಿದ್ದಾರೆ (Siddharth and Aditi Rao Hydari tie the knot at a temple) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಇಬ್ಬರು ರಹಸ್ಯವಾಗಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ.. ಈ ಕುರಿತ ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ..
ನಟ ಸಿದ್ಧಾರ್ಥ್ ಕಾಲಿವುಡ್ನ ಟಾಪ್ ಹೀರೋಗಳಲ್ಲಿ ಒಬ್ಬರು. ಸೌತ್ ಸಿನಿ ಪ್ರೇಕ್ಷಕರಿಗೂ ಸಹ ಇವರು ಚಿರಪರಿಚಿತರು.
ಕಳೆದ ಕೆಲವು ತಿಂಗಳ ಹಿಂದೆ ಕಾವೇರಿ ಗಲಾಟೆ ಸಂದರ್ಭ ತಮ್ಮ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದು ಕರವೇ ಕಾರ್ಯಕರ್ತ ವಿರೋಧ ಎದುರಿಸಿದರು.
ಇನ್ನು ಸಿದ್ದಾರ್ಥ್ ಮತ್ತು ಅದಿತಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಿದ್ಧಾರ್ಥ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮಾಡುತ್ತಿದ್ದರು, ಇದೀಗ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಸಿದ್ಧಾರ್ಥ್, ನಟಿ ಸಮಂತಾ ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿ ಹರಿದಾಡಿತ್ತು, ಆದರೆ ಸ್ಯಾಮ್ ನಾಗ ಚೈತನ್ಯ ಅವರ ಕೈಹಿಡಿದರು.
ಈ ಹಿಂದೆ ಸಿದ್ಧಾರ್ಥ್ ಮೇಘನಾ ನಾರಾಯಣ ಎಂಬುವರ ಜೊತೆ ಮದುವೆಯಾಗಿದ್ದರು ಎಂದು ವರದಿಯಾಗಿತ್ತು.
ಸಿದ್ಧಾರ್ಥ್ ಮತ್ತು ಅದಿತಿ ʼಸಾಗರʼ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಮಯದಲ್ಲಿ ಪರಿಚಯವಾದ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು.
ಇದೀಗ ಅವರು, ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.