BMTC Recruitment: 2,500 ಕಂಡಕ್ಟರ್ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ

BMTC Recruitment 2024: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ಕಂಡಕ್ಟರ್‌ ಲೈಸೆನ್ಸ್, ಬ್ಯಾಡ್ಜ್ ಹೊಂದಿರಬೇಕು.

Written by - Puttaraj K Alur | Last Updated : Mar 27, 2024, 01:28 PM IST
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ನೇಮಕಾತಿ
  • ಖಾಲಿ ಇರುವ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಕಂಡಕ್ಟರ್‌ ಲೈಸೆನ್ಸ್ ಮತ್ತು ಬ್ಯಾಡ್ಜ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
BMTC Recruitment: 2,500 ಕಂಡಕ್ಟರ್ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ   title=
Job Openings

BMTC Recruitment 2024: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ 2,500 ಕಂಡಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕುಳಿದ ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ಕಂಡಕ್ಟರ್‌ ಲೈಸೆನ್ಸ್, ಬ್ಯಾಡ್ಜ್ ಹೊಂದಿರಬೇಕು.

ಇದನ್ನೂ ಓದಿ: Sachin Tendulkar : ಮಹಾರಾಷ್ಟ್ರದ ಸೆಮಿಕಂಡಕ್ಟರ್ ಉದ್ಯಮಕ್ಕೆ 5000 ಕೋಟಿ ಹೂಡಿಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗ

ವಯೋಮಿತಿ: ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ, 2A, 2B, 3A ಮತ್ತು 3Bಗೆ 38, SC/ST ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷ, SC/ST ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ 5 ಹಾಗೂ ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. 

ದೇಹದಾರ್ಢ್ಯತೆ: ಪುರುಷರು 160 ಸೆ.ಮೀ, ಮಹಿಳೆಯರು 150 ಸೆಂ. ಮೀ ಎತ್ತರವಿರಬೇಕು.

ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ 1 ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ 9,100 ರೂ. ನೀಡಲಾಗುತ್ತದೆ. ವರ್ಷದ ಬಳಿಕ 2 ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕವಾದ ಅಭ್ಯರ್ಥಿಗೆ ಮಾಸಿಕ 18,660- 25,300 ರೂ. ವೇತನವಿರುತ್ತದೆ. 2 ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆ ಪೂರೈಸಿದ ಬಳಿಕ ಅಭ್ಯರ್ಥಿಗಳ ನೇಮಕಾತಿಯನ್ನು ಖಾಯಂಗೊಳಿಸಲಾಗುತ್ತದೆ.

ಆಯ್ಕೆ: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಶುಲ್ಕ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 750 ರೂ. ಮತ್ತು SC/ST, ಪ್ರವರ್ಗ 1, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತ ಅಭ್ಯರ್ಥಿಗಳು cetonline.karnataka.gov.inಗೆ ಭೇಟಿ ನೀಡಬಹುದು.

ಇದನ್ನೂ ಓದಿ: Daily GK Quiz: ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News