Shivam Dube Love Story: ಟೀಂ ಇಂಡಿಯಾ ಮಾತ್ರವಲ್ಲ, ಐಪಿಎಲ್ ಲೀಗ್’ನಲ್ಲೂ ಅಬ್ಬರಿಸುತ್ತಿರುವ ಶಿವಂ ದುಬೆ, ಜೂನಿಯರ್ ಧೋನಿ ಎಂದೇ ಖ್ಯಾತಿ ಪಡೆದವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾರತೀಯ ಆಲ್ರೌಂಡರ್ ಶಿವಂ ದುಬೆ ಆಡುತ್ತಿದ್ದಾರೆ. ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ಶಿವಂ ದುಬೆ ಅವರ ವೈಯಕ್ತಿಕ ಜೀವನವೂ ಬಲು ವಿಶೇಷವಾಗಿದೆ.
ಅಂದಹಾಗೆ ನಾವಿಂದು ಈ ಸುದ್ದಿಯಲ್ಲಿ ಶಿವಂ ದುಬೆ ಅವರ ಪ್ರೇಮ ಜೀವನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕುಟುಂಬದ ವಿರೋಧದ ಮಧ್ಯೆ ತನ್ನ ಪ್ರೀತಿಯನ್ನು ಕಾಪಾಡಿಕೊಂಡ ಪರಿ ಹೇಗೆ ಎಂಬುದೇ ವಿಶೇಷ.
ಟೀಂ ಇಂಡಿಯಾದ ಈ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಸುಮಾರು 3 ವರ್ಷಗಳ ಹಿಂದೆ ಮದುವೆಯ ವಿಷಯಕ್ಕೇ ಭಾರೀ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರ ಪ್ರೇಮ ಜೀವನ ಯಾವ ಸಿನಿಮಾಗೂ ಕಮ್ಮಿಯಿಲ್ಲ.
ಶಿವಂ ದುಬೆ 2021 ರಲ್ಲಿ ತನ್ನ ಪ್ರೇಯಸಿ ಅಂಜುಮ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದಹಾಗೆ ಶಿವಂ ದುಬೆ ಹಿಂದೂ ಧರ್ಮದಿಂದ ಬಂದರೆ, ಅಂಜುಮ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿ, ಶಿವಂ ಮತ್ತು ಅಂಜುಮ್ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಮದುವೆಗೆ ಮೊದಲು ಶಿವಂ ಮತ್ತು ಅಂಜುಮ್ ಖಾನ್ ಒಂದು ವರ್ಷ ಡೇಟಿಂಗ್ ಮಾಡಿದ್ದರು. ಆದರೆ ಈ ಸುದ್ದಿ ಯಾರ ಕಿವಿಗೂ ಬಿದ್ದಿರಲಿಲ್ಲ. ಆದರೆ ಯಾವಾಗ ಇವರಿಬ್ಬರ ಬಗ್ಗೆ ಮನೆಯವರಿಗೆ ತಿಳಿಯಿತೋ ಆಗ, ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅಂಜುಮ್ ಖಾನ್ ಮೂಲತಃ ಉತ್ತರ ಪ್ರದೇಶದವರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಅಂಜುಮ್ ಮಾಡೆಲ್ ಕೂಡ ಹೌದು. ಅಷ್ಟೇ ಅಲ್ಲ, ಅನೇಕ ಹಿಂದಿ ಧಾರಾವಾಹಿ ಮತ್ತು ಮ್ಯೂಸಿಕ್ ಆಲ್ಬಮ್ಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಅಂಜುಮ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಶಿವಂ ಮತ್ತು ಕುಟುಂಬದೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
ಕಡೆಗೆ ಎರಡೂ ಕಡೆಯವರನ್ನು ಒಪ್ಪಿಸಿ ಮದುವೆಯಾದ ಶಿವಂ ದುಬೆ ಮತ್ತು ಅಂಜುಮ್ ಈಗ ಸುಖೀ ಸಂಸಾರ ನಡೆಸುತ್ತಿದ್ದಾರೆ. ಅಂದಹಾಗೆ ತನ್ನ ಪ್ರೀತಿಗಾಗಿ ಎರಡೂ ಧರ್ಮದ ಪ್ರಕಾರ ಮದುವೆಯಾಗಿದ್ದರು .