Health Tips: ಪುರುಷರ ಆ ʼಶಕ್ತಿʼಗೆ ಈ ಆಹಾರಗಳನ್ನು ಸೇವಿಸಬೇಕು

Foods to Boost Male Health: ಪುರುಷರು ಪ್ರತಿದಿನ ಬಾದಾಮಿ ಸೇವಿಸಬೇಕು. ಬಾದಾಮಿಯಲ್ಲಿ ಮೆಗ್ನೀಸಿಯಮ್ ಹೇರಳವಾಗಿ ಕಂಡುಬರುತ್ತದೆ. ಈ ಮೆಗ್ನೀಸಿಯಮ್ ಸ್ನಾಯು ಮತ್ತು ನರಗಳನ್ನು ಬಲಗೊಳಿಸುತ್ತದೆ. ಬಾದಾಮಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

Health tips for men: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರಪದ್ಧತಿಯಿಂದ ಇಂದು ಅನೇಕರು ಹಲವಾರು ಕಾಯಿಲೆಗಳಿಂದ ತುತ್ತಾಗುತ್ತಿದ್ದಾರೆ. ಬಿಡುವಿಲ್ಲದ ಕೆಲಸ ಮತ್ತು ಒತ್ತಡಮಯವ ಪರಿಸ್ಥಿತಿಯಿಂದ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಅನೇಕರು ಪೋಷಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಹೀಗಾಗಿ ಅವರು ಆರೋಗ್ಯಕರ ಆಹಾರ ಸೇವಿಸುವುದು ಅತಿ ಅವಶ್ಯಕವಾಗಿದೆ. ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಪುರುಷರ ದೈಹಿಕ ದೌರ್ಬಲ್ಯಗಳನ್ನು ಹೋಗಲಾಡಿಸಲು ಕೆಲವು ಆಹಾರಗಳನ್ನು ಸೇವಿಸಿಬೇಕು. ಈ ಆಹಾಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಪುರುಷರು ನಿಯಮಿತವಾಗಿ ಹಸಿರು ಸೊಪ್ಪನ್ನು ಸೇವಿಸಬೇಕು. ಹಸಿರು ಸೊಪ್ಪುಗಳ ಪೈಕಿ ಪಾಲಕ್ ಸೇವಿಸುವುದು ತುಂಬಾನೇ ಒಳ್ಳೆಯದು. ಪಾಲಕ ದೇಹದಲ್ಲಿನ ರಕ್ತದ ಹರಿವನ್ನು ಸರಿಪಡಿಸಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದನ್ನು ಸಲಾಡ್ ರೀತಿಯಲ್ಲಿ ಅಥವಾ ಪ್ರೋಟೀನ್ ಶೇಕ್ ಜೊತೆಗೆ ಸೇವಿಸಬಹುದು.

2 /5

ಪುರುಷರು ಪ್ರತಿದಿನ ಬಾದಾಮಿ ಸೇವಿಸಬೇಕು. ಬಾದಾಮಿಯಲ್ಲಿ ಮೆಗ್ನೀಸಿಯಮ್ ಹೇರಳವಾಗಿ ಕಂಡುಬರುತ್ತದೆ. ಈ ಮೆಗ್ನೀಸಿಯಮ್ ಸ್ನಾಯು ಮತ್ತು ನರಗಳನ್ನು ಬಲಗೊಳಿಸುತ್ತದೆ. ಬಾದಾಮಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕವಾಗಿದೆ. ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬಾದಾಮಿ ಸೇವಿಸುವುದು ಉತ್ತಮ ಫಲಿತಾಂಶ ನೀಡುತ್ತದೆ.

3 /5

ಪುರುಷರು ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸಬೇಕು. ಟೊಮೆಟೊ ಮತ್ತು ಕಲ್ಲಂಗಡಿ ಲೈಕೋಪೀನ್‌ ಸಮೃದ್ಧ ಆಹಾರಗಳಾಗಿವೆ. ಈ ಹಣ್ಣುಗಳು ಉತ್ಕರ್ಷಣ ನಿರೋಧಕವಾಗಿದ್ದು, ಪುರುಷರನ್ನು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ. ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆಯನ್ನೂ ಕಡಿಮೆ ಮಾಡುತ್ತದೆ. ಕಲ್ಲಂಗಡಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಇದರಲ್ಲಿರುವ ಸಿಟ್ರುಲೈನ್ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.  

4 /5

ಆಲೂಗಡ್ಡೆಯಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚು ಪೊಟ್ಯಾಸಿಯಮ್ ಇರುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ʼಸಿʼ ಮತ್ತು ಫೈಬರ್ ಇದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಲೂಗಡ್ಡೆಯಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಪುರುಷರು ನಿಯಮಿತವಾಗಿ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. 

5 /5

ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಸರು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಅವಶ್ಯಕ. ಪುರುಷರಿಗೆ ಮಹಿಳೆಯರಂತೆ ಆಸ್ಟಿಯೊಪೊರೋಸಿಸ್ ಅಪಾಯವಿದ್ದು, ಹೀಗಾಗಿ ಪುರುಷರು ಪ್ರತಿದಿನ ಮೊಸರು ಸೇವಿಸಬೇಕು. ಮೊಸರಿಗೆ ಸಕ್ಕರೆ ಬದಲು ಹಣ್ಣುಗಳನ್ನು ಬೆರೆಸಿ ತಿನ್ನುವುದು ಉಪಯುಕ್ತವೆಂದು ಹೇಳಲಾಗಿದೆ.