ನವದೆಹಲಿ: ಭಾರತದ ಅನೌಪಚಾರಿಕ ಭೇಟಿಯಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಇಂದು ಚೆನ್ನೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಬಲಿಪುರಂ ದೇವಾಲಯಗಳಲ್ಲಿಗೆ ಕರೆದೊಯ್ದರು.
Mahabalipuram: PM Narendra Modi with Chinese President Xi Jinping at the round boulder known as Krishna’s Butter Ball. pic.twitter.com/Jr0TxTXINp
— ANI (@ANI) October 11, 2019
ಚೀನಾದ ಅಧ್ಯಕ್ಷರು ಭಾರತಕ್ಕೆ ಕಾಲಿಡುತ್ತಿದ್ದಂತೆ 'ಭಾರತಕ್ಕೆ ಸ್ವಾಗತ, ಅಧ್ಯಕ್ಷ ಕ್ಸಿ ಜಿನ್ಪಿಂಗ್! ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸ್ವಾಗತಿಸಿದರು.ಪ್ರಧಾನಿ ಮೋದಿ ಪಂಚೆಯುಟ್ಟು ಗಮನ ಸೆಳೆದರೆ, ಕ್ಸಿ ಅವರು ಬಿಳಿ ಅಂಗಿ ಹಾಗೂ ಪ್ಯಾಂಟ್ ನಲ್ಲಿ ಮಿಂಚಿದರು. ಉಭಯ ನಾಯಕರು ಮಹಾಬಲಿಪುರಂ ದೇವಸ್ತಾನದ ಹುಲ್ಲು ಹಾಸಿನ ಮೇಲೆ ಸ್ವಲ್ಪ ಹೊತ್ತು ವಿಹರಿಸಿದರು. ಈಗ ಕ್ಸಿ ಅವರ ಭೇಟಿ ಎರಡು ದಿನಗಳ ಹಿಂದೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿದ ನಂತರ ಬಂದಿರುವುದು ಮಹತ್ವ ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ನಡುವಿನ ಸಭೆ ಶನಿವಾರ ಬೆಳಿಗ್ಗೆ ನಡೆಯಲಿದೆ. ಉಭಯ ನಾಯಕರು ಆರು ಗಂಟೆಗಳ ಮಾತುಕತೆ ನಡೆಸಲಿದ್ದು, ತದನಂತರ ಪ್ರತ್ಯೇಕ ಹೇಳಿಕೆಗಳನ್ನು ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉನ್ನತ ಮಟ್ಟದಲ್ಲಿ ಸಂಪರ್ಕಗಳನ್ನು ನಿರ್ಮಿಸುವುದು ಮತ್ತು ಪ್ರಮುಖ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
#WATCH PM Narendra Modi with Chinese President Xi Jinping visit the Krishna’s Butter Ball, Mahabalipuram #TamilNadu pic.twitter.com/TMgWuChdd1
— ANI (@ANI) October 11, 2019
ಪ್ರಧಾನಿ ಮೋದಿ ಹಾಗೂ ಕ್ಸಿ ನಡುವಿನ ಸಭೆಯಲ್ಲಿ ತರಬೇತಿ, ಹಣಕಾಸು ಮತ್ತು ಭಯೋತ್ಪಾದನೆ ಕುರಿತ ವಿಚಾರವಾಗಿ ಚರ್ಚೆ ನಡೆಯಲಿದೆ. ಇದಲ್ಲದೆ ವ್ಯಾಪಾರ, ರಕ್ಷಣಾ ಮತ್ತು ಗಡಿ ಸಮಸ್ಯೆಗಳ ಕುರಿತಾಗಿಯೂ ಉಭಯ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಭಾರತ-ಚೀನಾ ಗಡಿಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಉಭಯ ನಾಯಕರು ಗಮನಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.