ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.ಸಾಯಂಕಾಲ ನಿಗದಿತ ಸಮಯದಲ್ಲಿ ಅರೆಮನೆಯ ಮುಂಬಾಗದಿಂದ 8ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಅರ್ಜುನ ಹೊತ್ತು ಸಾಗಲಿದ್ದಾನೆ.
ಮೈಸೂರು ದಸರಾ ೨೦೧೯ರ ಉತ್ಸವದಲ್ಲಿ ೬೧ ವರ್ಷದ ಬಲರಾಮ. ಸತತ ೧೪ ವರ್ಷಗಳ ಕಾಲ ಅಂಬಾರಿ ಹೊತ್ತಿರುವ ಹೆಗ್ಗಳಿಕೆ ಬಲರಾಮನಿಗಿದೆ.#MysuruDasara2019 pic.twitter.com/XgSnUfKCgR
— DD Chandana News (@DDChandanaNews) October 8, 2019
ಮೈಸೂರು ದಸರಾ ೨೦೧೯ರ ಉತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂದಿ ಪೂಜೆಗೆ ಆರತೀ ಬೆಳಗುತ್ತಿರುವ ದೃಶ್ಯ.#MysuruDasara2019 @BSYBJP pic.twitter.com/XxaHgbyFVb
— DD Chandana News (@DDChandanaNews) October 8, 2019
ಮೆರವಣಿಗೆಯಲ್ಲಿ ಎಲ್ಲ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ನಿರ್ಮಿಸಿರುವ ಸ್ಥಬ್ದ ಚಿತ್ರಗಳು ಗಮನ ಸೆಳೆದಿವೆ.ಭಾರತೀಯ ಯೋಧರು ನಡೆಸಿದ ಏರ್ ಸ್ಟ್ರೈಕ್ ನ ಸ್ತಬ್ಧಚಿತ್ರ ,ಆದಿಕವಿ ಪಂಪ, ಮೈಸೂರು ಸಂಸ್ಥಾನವನ್ನು ಆಳಿದ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಸ್ತಬ್ಧಚಿತ್ರ .ಅತಿವೃಷ್ಟಿಯನ್ನು ನೆನಪಿಸುವ ಹಾಗು ಹೆಲಿಕಾಪ್ಟರ್ ನಲ್ಲಿ ಮತ್ತು ದೋಣಿಯಲ್ಲಿ ನಡೆಸಿದ ಕಾರ್ಯಾಚರಣೆಯನ್ನು ನೆನಪಿಸುವ ಚಿತ್ರ ,ಹಂಪಿಯನ್ನು ನೆನಪಿಸುವ ಚಿತ್ರ ಹೀಗೆ ಹಲವು ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಮೈಸೂರು ದಸರಾ ೨೦೧೯ ರ ಉತ್ಸವದಲ್ಲಿ ಅತಿವೃಷ್ಟಿಯನ್ನು ನೆನಪಿಸುವ ಹಾಗು ಹೆಲಿಕಾಪ್ಟರ್ ನಲ್ಲಿ ಮತ್ತು ದೋಣಿಯಲ್ಲಿ ನಡೆಸಿದ ಕಾರ್ಯಾಚರಣೆಯನ್ನು ನೆನಪಿಸುವ ಸ್ತಬ್ಧಚಿತ್ರ #MysuruDasara2019 pic.twitter.com/wflXOj8VnV
— DD Chandana News (@DDChandanaNews) October 8, 2019
ಇನ್ನೊಂದೆಡೆ ಮೈಸೂರಿನ ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ವಡೆಯರ್ ಅವರು ಇಂದು ವಿಜಯ ದಶಮಿ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ 'ಶಮಿ' ಮರಕ್ಕೆ ಧಾರ್ಮಿಕ ವಿಧಿಗಳನ್ನು ಸಲ್ಲಿಸಿದರು ಮತ್ತು ಪ್ರಾರ್ಥನೆ ಸಲ್ಲಿಸಿದರು.ದಸರಾ ಆಚರಣೆಯ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ 'ವಜ್ರಮುಷ್ಠಿ ಕಾಳಗವನ್ನು (ಸಮರ ಕಲೆಗಳ ಪ್ರಾಚೀನ ರೂಪ) ಆಯೋಜಿಸಲಾಗಿತ್ತು.