ನವದೆಹಲಿ: ಅಕ್ಟೋಬರ್ 22 ರಂದು ನಿಗದಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತ ಯುಎಸ್ ಕಾಂಗ್ರೆಸ್ ಸಮಿತಿಯ ವಿಚಾರಣೆಗೂ ಮುನ್ನ ಹೌಸ್ ವಿದೇಶಾಂಗ ಸಮಿತಿಯು ರಾಜ್ಯದಲ್ಲಿನ ಸಂವಹನ ನಿರ್ಬಂಧವು ವಿನಾಶಕಾರಿ ಪರಿಣಾಮವನ್ನು ಹೊಂದಿದ್ದು, ಆದ್ದರಿಂದ ಈ ನಿರ್ಬಂಧಗಳನ್ನು ತೆಗೆದುಹಾಕುವ ಸಮಯ ಎಂದು ಹೇಳಿದೆ
ಸೋಮವಾರದಂದು ಟ್ವೀಟ್ ಮಾಡಿರುವ ಸಮಿತಿಯು "ಕಾಶ್ಮೀರದಲ್ಲಿ ಭಾರತದ ಸಂವಹನ ಕಡಿತವು ದೈನಂದಿನ ಕಾಶ್ಮೀರಿಗಳ ಜೀವನದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿದೆ. ಭಾರತವು ಈ ನಿರ್ಬಂಧಗಳನ್ನು ತೆಗೆದುಹಾಕುವ ಸಮಯ ಮತ್ತು ಕಾಶ್ಮೀರಿಗಳಿಗೆ ಯಾವುದೇ ಭಾರತೀಯ ನಾಗರಿಕರಂತೆಯೇ ಹಕ್ಕುಗಳು ಮತ್ತು ಸವಲತ್ತುಗಳನ್ನು ನೀಡುವ ಸಮಯ' ಎಂದು ಅಭಿಪ್ರಾಯ ಪಟ್ಟಿದೆ.
ಅಕ್ಟೋಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ಉಪಸಮಿತಿ ದಕ್ಷಿಣ ಏಷ್ಯಾದಲ್ಲಿ ಮಾನವ ಹಕ್ಕುಗಳು ಕುರಿತು ವಿಚಾರಣೆ ನಡೆಸಲಿದೆ ಎಂದು ಏಷ್ಯಾದ ಹೌಸ್ ಉಪಸಮಿತಿಯ ಅಧ್ಯಕ್ಷ ಯುಎಸ್ ಕಾಂಗ್ರೆಸ್ಸಿಗ ಬ್ರಾಡ್ ಶೆರ್ಮನ್ ಘೋಷಿಸಿದ್ದರು. ಜುಲೈನಲ್ಲಿ, ಉಪಸಮಿತಿಯು ಆಗ್ನೇಯ ಏಷ್ಯಾದಲ್ಲಿ ಮಾನವ ಹಕ್ಕುಗಳ ಕುರಿತು ವಿಚಾರಣೆಯನ್ನು ನಡೆಸಿತು. ಪೂರ್ವ ಏಷ್ಯಾದಲ್ಲಿ ಮಾನವ ಹಕ್ಕುಗಳ ಕುರಿತು ಈ ವರ್ಷದ ಕೊನೆಯಲ್ಲಿ ವಿಚಾರಣೆಯನ್ನು ನಡೆಸಲು ಉಪಸಮಿತಿ ನಿರೀಕ್ಷಿಸುತ್ತಿದೆ, ಇದು ಹಾಂಗ್ ಕಾಂಗ್ನಲ್ಲಿನ ಘಟನೆಗಳು ಮತ್ತು ಉಯಿಘರ್ ಅಲ್ಪಸಂಖ್ಯಾತರ ಬಂಧನದ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ ಎನ್ನಲಾಗಿದೆ.
ಈಗ ಸಮಿತಿಯ ವಿಚಾರಣೆಯು ಕಾಶ್ಮೀರ ಕಣಿವೆಯ ಮೇಲೆ ಕೇಂದ್ರೀಕರಿಸಲಿದ್ದು , ಅಲ್ಲಿ ಅನೇಕ ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ ಮತ್ತು ದೈನಂದಿನ ಜೀವನ, ಇಂಟರ್ನೆಟ್ ಮತ್ತು ದೂರವಾಣಿ ಸಂವಹನಗಳಿಗೆ ಅಡಚಣೆಯಾಗಿದೆ. ಇದು ಕಾಶ್ಮೀರದ ಮಾನವೀಯ ಪರಿಸ್ಥಿತಿ ಮತ್ತು ಕಾಶ್ಮೀರಿಗಳಲ್ಲಿ ಸಾಕಷ್ಟು ಸರಬರಾಜು ಮತ್ತು ಅಗತ್ಯ ವಸ್ತುಗಳನ್ನು ಹೊಂದಿದೆಯೇ ಎಂಬ ಬಗ್ಗೆಯೂ ಪರಿಶೀಲಿಸುತ್ತದೆ.
ಯುಎಸ್ ಕಾಂಗ್ರೆಸ್ ಸಮಿತಿ ವಿಚಾರಣೆಯು ಶ್ರೀಲಂಕಾದ ತಮಿಳರು, ಪಾಕಿಸ್ತಾನದ ಮಾನವ ಹಕ್ಕುಗಳ ಪರಿಸ್ಥಿತಿ ಮತ್ತು ಅಸ್ಸಾಂನ ಮುಸ್ಲಿಮರ ಬಗ್ಗೆಯೂ ಗಮನ ಹರಿಸಲಿದೆ ಎನ್ನಲಾಗಿದೆ.