Election Commission Of India Electoral Bond Data: ಕೇಂದ್ರ ಚುನಾವಣಾ ಆಯೋಗ (Election Commission Of India) ಭಾನುವಾರ ಜನರು ಖರೀದಿಸಿದ ಮತ್ತು ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಸಾರ್ವಜನಿಕಗೊಳಿಸಿದೆ. ಇದರಿಂದ ಚುನಾವಣಾ ಬಾಂಡ್‌ಗಳ ರೂಪದಲ್ಲಿ ಯಾವ ಪಕ್ಷಕ್ಕೆ ಎಷ್ಟು ಹಣ ಬಂದಿದೆ ಎಂಬುದು ಬಹಿರಂಗವಾದಂತಾಗಿದೆ. ಕಳೆದ ತಿಂಗಳು, ಗುರುವಾರ ಐತಿಹಾಸಿಕ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್, ರಾಜಕೀಯ ನಿಧಿಗಾಗಿ ಆರಂಭಿಸಲಾಗಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದು ಮಾಹಿತಿ ಹಕ್ಕು ಮತ್ತು ಸಂವಿಧಾನದ ಭರವಸೆ ನೀಡುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.
ಬಾಂಡ್ ಗಳ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ? (which party received how much donation)
ಬಿಜೆಪಿ- ರೂ 6,986.5 ಕೋಟಿ (2019-20ರಲ್ಲಿ ಗರಿಷ್ಠ ರೂ 2,555 ಕೋಟಿ)
ಕಾಂಗ್ರೆಸ್- 1,334.35 ಕೋಟಿ ರೂ
ಟಿಎಂಸಿ- 1,397 ಕೋಟಿ ರೂ
ಡಿಎಂಕೆ- 656.5 ಕೋಟಿ ರೂ
ಬಿಜೆಡಿ- 944.5 ಕೋಟಿ ರೂ
ವೈಎಸ್ಆರ್ ಕಾಂಗ್ರೆಸ್- 442.8 ಕೋಟಿ ರೂ
ಟಿಡಿಪಿ- 181.35 ಕೋಟಿ ರೂ
ಎಸ್ಪಿ- 14.05 ಕೋಟಿ ರೂ
ಅಕಾಲಿದಳ- 7.26 ಕೋಟಿ ರೂ
ಎಐಎಡಿಎಂಕೆ- 6.05 ಕೋಟಿ ರೂ
ನ್ಯಾಷನಲ್ ಕಾನ್ಫರೆನ್ಸ್- 50 ಲಕ್ಷ ರೂ
ಬಿಆರ್ಎಸ್- 1,322 ಕೋಟಿ ರೂ.
ಲೋಕಸಭೆ ಚುನಾವಣೆಗೂ (Lok Sabha Elections 2024) ಮುನ್ನ ಪ್ರಕಟಗೊಂಡಿರುವ ಈ ಸುಪ್ರೀಂ ತೀರ್ಪಿನಲ್ಲಿ 6 ವರ್ಷಗಳಷ್ಟು ಹಳೆಯದಾದ ಈ ಯೋಜನೆಯಲ್ಲಿ (Electoral Bond Scheme) ದೇಣಿಗೆ ನೀಡಿದವರ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಗೆ ಕೋರ್ಟ್ ಆದೇಶಿಸಿತ್ತು. ಇದಾದ ಬಳಿಕ, ಮಾರ್ಚ್ 15 ರಂದು, ಎಸ್‌ಬಿಐ (State Bank Of India) ಸುಪ್ರೀಂ ಕೋರ್ಟ್‌ಗೆ (Supreme Court) ಏಪ್ರಿಲ್ 1, 2019 ಮತ್ತು ಫೆಬ್ರವರಿ 15 ರ ನಡುವೆ, ರಾಜಕೀಯ ಪಕ್ಷಗಳು ಒಟ್ಟು 22,217 ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿವೆ ಮತ್ತು 22,030 ಬಾಂಡ್‌ಗಳನ್ನು ರಿಡೀಮ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಮಾರ್ಚ್ 12 ರಂದು ವ್ಯವಹಾರದ ಅವಧಿ ಮುಗಿಯುವ ಮೊದಲು ಚುನಾವಣಾ ಆಯೋಗಕ್ಕೆ ಬಾಂಡ್‌ಗಳ ವಿವರಗಳನ್ನು ಒದಗಿಸಿದೆ ಎಂದು ಎಸ್‌ಬಿಐ ಅಫಿಡವಿಟ್‌ನಲ್ಲಿ ತಿಳಿಸಿದೆ. ಇದಾದ ಬಳಿಕ ಚುನಾವಣಾ ಆಯೋಗವು ಎಸ್‌ಬಿಐನಿಂದ ಪಡೆದ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಿದೆ.
ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಪ್ರಮುಖ ಕಂಪನಿಗಳು
ಫ್ಯೂಚರ್ ಗೇಮಿಂಗ್ ಮತ್ತು ಹೊಟೇಲ್ ಸರ್ವಿಸೆಸ್ - 1,368 ಕೋಟಿ ರೂ
ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ - 966 ಕೋಟಿ ರೂ
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ - 410 ಕೋಟಿ ರೂ
ವೇದಾಂತ ಲಿಮಿಟೆಡ್ - 400 ಕೋಟಿ ರೂ
ಹಲ್ದಿಯಾ ಎನರ್ಜಿ ಲಿಮಿಟೆಡ್ - 377 ಕೋಟಿ ರೂ
ಭಾರ್ತಿ ಗ್ರೂಪ್ - 247 ಕೋಟಿ ರೂ
ಎಸ್ಸೆಲ್ ಮೈನಿಂಗ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ - 224 ಕೋಟಿ ರೂ
ವೇಸ್ಟರ್ನ್ ಯುಪಿ ವಿದ್ಯುತ್ ಪ್ರಸರಣ - 220 ಕೋಟಿ ರೂ
ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ - 194 ಕೋಟಿ ರೂ
ಮದನ್‌ಲಾಲ್ ಲಿಮಿಟೆಡ್ - 185 ಕೋಟಿ ರೂ
ಡಿಎಲ್ಎಫ್ ಗ್ರೂಪ್ - 170 ಕೋಟಿ ರೂ
ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ - 162 ಕೋಟಿ ರೂ
ಉತ್ಕಲ್ ಅಲ್ಯುಮಿನಾ ಇಂಟರ್‌ನ್ಯಾಶನಲ್ - 145.3 ಕೋಟಿ ರೂ
ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ - 123 ಕೋಟಿ ರೂ
ಬಿರ್ಲಾ ಕಾರ್ಬನ್ ಇಂಡಿಯಾ - 105 ಕೋಟಿ ರೂ
ರುಂಗ್ಟಾ ಸನ್ಸ್ - 100 ಕೋಟಿ ರೂ
ಡಾ ರೆಡ್ಡೀಸ್ - 80 ಕೋಟಿ ರೂ
ಪಿರಮಲ್ ಎಂಟರ್‌ಪ್ರೈಸಸ್ ಗ್ರೂಪ್ - 60 ಕೋಟಿ ರೂ
ನವಯುಗ್ ಎಂಜಿನಿಯರಿಂಗ್ - 55 ಕೋಟಿ ರೂ
ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ - 40 ಕೋಟಿ ರೂ
ಸಿಪ್ಲಾ ಲಿಮಿಟೆಡ್ - 39.2 ಕೋಟಿ ರೂ
ಲಕ್ಷ್ಮಿ ನಿವಾಸ್ ಮಿತ್ತಲ್ - 35 ಕೋಟಿ ರೂ
ಗ್ರಾಸಿಮ್ ಇಂಡಸ್ಟ್ರೀಸ್ - 33 ಕೋಟಿ ರೂ
ಜಿಂದಾಲ್ ಸ್ಟೇನ್‌ಲೆಸ್ - 30 ಕೋಟಿ ರೂ
ಬಜಾಜ್ ಆಟೋ - 25 ಕೋಟಿ ರೂ
ಸನ್ ಫಾರ್ಮಾ ಲ್ಯಾಬೋರೇಟರೀಸ್ - 25 ಕೋಟಿ ರೂ
ಮ್ಯಾನ್‌ಕೈಂಡ್ ಫಾರ್ಮಾ - 24 ಕೋಟಿ ರೂ
ಬಜಾಜ್ ಫೈನಾನ್ಸ್ - 20 ಕೋಟಿ ರೂ
ಮಾರುತಿ ಸುಜುಕಿ ಇಂಡಿಯಾ - 20 ಕೋಟಿ ರೂ
ಅಲ್ಟ್ರಾಟೆಕ್ - 15 ಕೋಟಿ ರೂ
ಟಿವಿಎಸ್ ಮೋಟಾರ್ಸ್ - 10 ಕೋಟಿ ರೂ
ಎಡೆಲ್ವೀಸ್ ಗ್ರೂಪ್ - 4 ಕೋಟಿ ರೂ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI